February 4, 2026
Wednesday, February 4, 2026
spot_img

ದಿನಭವಿಷ್ಯ: ನಿಮ್ಮ ಕರ್ತವ್ಯ ಸರಿಯಾಗಿ ನಿರ್ವಹಿಸಲು ಮರೆಯಬೇಡಿ, ಆಪ್ತರ ಆರೋಗ್ಯ ಸುಧಾರಣೆ

ಮೇಷ
ಇಂದು ತುಸು ಹಿನ್ನಡೆ ಎದುರಿಸುವಿರಿ. ಆದರಿದು ತಾತ್ಕಾಲಿಕ. ತಾಳ್ಮೆಯಿಂದ ವ್ಯವಹರಿಸಿ. ಕೌಟುಂಬಿಕ ಉದ್ವಿಗ್ನತೆ ಶಮನ, ಸಾಮರಸ್ಯ.
ವೃಷಭ
ನಿಮ್ಮ ಕರ್ತವ್ಯ ಸರಿಯಾಗಿ ನಿರ್ವಹಿಸಲು ಮರೆಯದಿರಿ. ಇಲ್ಲವಾದರೆ ಇಕ್ಕಟ್ಟಿಗೆ ಸಿಲುಕುವಿರಿ. ಹಳೆಯ ಹೂಡಿಕೆಯ ಲಾಭ ಸಿಗಲಿದೆ.
ಮಿಥುನ
ದಿನವು ನಿಮಗೆ ಪೂರಕವಾಗಿ ಸಾಗಬೇಕಾದರೆ ನಿಮ್ಮಿಂದ ಪ್ರಯತ್ನ ಅಗತ್ಯ. ಸುಮ್ಮಗೆ ಕೂತರೆ ಯಾವುದೇ ಒಳಿತಾಗದು.
ಕಟಕ
ಖಾಸಗಿ ಮತ್ತು ವೃತ್ತಿ ಬದುಕಲ್ಲಿ ಹೊಸ ಬೆಳವಣಿಗೆ. ಅದು ನಿಮಗೆ ಪೂರಕವಾಗಲಿದೆ. ಆಪ್ತರ ಆರೋಗ್ಯ ಸುಧಾರಣೆ. ಖರ್ಚು ನಿಯಂತ್ರಣ.
ಸಿಂಹ
ನಿಮಗೆ ವಹಿಸಿದ ಕಾರ್ಯ ಸಕಾಲದಲ್ಲಿ ಪೂರೈಸುವಿರಿ. ಹಣಕಾಸು ಪರಿಸ್ಥಿತಿ ತೃಪ್ತಿಕರ. ನಿಮ್ಮ ಸಾಮರ್ಥ್ಯದ ಅನಾವರಣಕ್ಕೆ ಅವಕಾಶ.
ಕನ್ಯಾ
ಉತ್ಸಾಹದ ದಿನ. ಸಮಸ್ಯೆ ಕಳೆದು ನಿರಾಳತೆ. ಆತ್ಮೀಯರ ಜತೆ ಸಮಯ ಕಳೆಯಲು ಅವಕಾಶ. ಆಹಾರದಲ್ಲಿ ಹಿತಮಿತ ಸಾಽಸಿರಿ.
ತುಲಾ
ವ್ಯವಹಾರದಲ್ಲಿ ಹೆಚ್ಚಿನ ಪ್ರಗತಿ. ಕಾರ್ಯೋತ್ಸಾಹ ಹೆಚ್ಚು. ಕೌಟುಂಬಿಕ ಸಂತೃಪ್ತಿ. ಧಾರ್ಮಿಕ ಕಾರ್ಯದ ಹೊಣೆ ಹೆಗಲೇರಲಿದೆ.
ವೃಶ್ಚಿಕ
ನಿಮ್ಮ ಕಾರ್ಯಶೈಲಿ ಟೀಕೆಗೆ ಗುರಿಯಾಗಲಿದೆ. ಕುಟುಂಬದ ಜತೆ ಕ್ಷುಲ್ಲಕ ವಿಚಾರದಲ್ಲಿ ವಾದ ಮಾಡದಿರಿ. ವಿವಾಹ ಪ್ರಸ್ತಾಪ ಸಫಲತೆ ಕಾಣಲಿದೆ.
ಧನು
ಪ್ರತಿ ವಿಷಯದಲ್ಲಿ ಎಚ್ಚರಿಕೆ ವಹಿಸಿರಿ. ಅನವಶ್ಯ ವಿವಾದ ಸುತ್ತಿಕೊಳ್ಳಬಹುದು. ನಡೆನುಡಿಯಲ್ಲಿ ಜಾಗ್ರತೆ ವಹಿಸಿರಿ.
ಮಕರ
ಎಲ್ಲವೂ ಇಂದು ಸುಗಮವಾಗಿ ಸಾಗುವುದು. ವಿರೋಧ ಕೊನೆಗಾಣಲಿದೆ. ದೈಹಿಕ ಸ್ವಾಸ್ಥ್ಯ ತೃಪ್ತಿಕರ. ಖರ್ಚು ನಿಯಂತ್ರಿಸುವಿರಿ.
ಕುಂಭ
ದೃಢತೆ ಹೊಂದಿದ್ದರೆ ಯಶ ಪಡೆಯುವಿರಿ. ಹಿಂಜರಿದರೆ ಹಿನ್ನಡೆ ಕಾಣುವಿರಿ. ಹಾಗಾಗಿ ಯೋಚಿಸಿ ಮುನ್ನಡೆಯಿರಿ. ಅಲರ್ಜಿ ಸಮಸ್ಯೆ ಸಂಭವ.
ಮೀನ
ನಿಮ್ಮ ಸಾಧನೆ ಎಲ್ಲರ ಗಮನ ಸೆಳೆಯಲಿದೆ. ಹೂಡಿಕೆಯಿಂದ ಲಾಭ. ಆರೋಗ್ಯ ಸುಧಾರಣೆ. ಖರ್ಚು ಕಡಿಮೆ ಮಾಡಲು ಆದ್ಯ ಗಮನ ಕೊಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !