Monday, December 15, 2025

ದಿನಭವಿಷ್ಯ: ಸಣ್ಣ ನಷ್ಟಕ್ಕೆ ಚಿಂತಿಸಬೇಡಿ, ದೊಡ್ಡ ಲಾಭದತ್ತ ದೃಷ್ಟಿ ಇರಲಿ!

ಮೇಷ
 ಸುಗಮ ದಿನ. ಆಪ್ತರ ಜತೆ ಕಾಲಕ್ಷೇಪ. ಬಂಧುಮಿತ್ರರ ಭೇಟಿ.   ಉದ್ಯೋಗಕ್ಕೆ ಸಂಬಂಽಸಿ ಪೂರಕ ಬೆಳವಣಿಗೆ. ಖರ್ಚು ಹೆಚ್ಚಳವಾದೀತು.
ವೃಷಭ
ನಿಮ್ಮ ಕಾರ್ಯಶೈಲಿ ಮೆಚ್ಚುಗೆ ಗಳಿಸಲಿದೆ. ಕೌಟುಂಬಿಕ ಕಾರ್ಯಕ್ಕೆ ಹೆಚ್ಚು ಹಣ ವ್ಯಯ. ದಂಪತಿ ಮಧ್ಯೆ ವಾಗ್ವಾದ ನಡೆಯಬಹುದು.  
ಮಿಥುನ
ಅನ್ಯರ ಮನಸ್ಥಿತಿ ಅರಿತು ಸ್ಪಂದಿಸಲು   ಸ-ಲರಾಗುವಿರಿ. ಭಿನ್ನಮತ ನಿವಾರಣೆ. ವೃತ್ತಿ ಒತ್ತಡ ನಿವಾರಣೆ. ಬಂಧುಗಳ ಭೇಟಿ.  
ಕಟಕ
ಸವಾಲಿನ ದಿನ. ಒತ್ತಡದ ಪ್ರಸಂಗ ಎದುರಿಸುವಿರಿ.  ಕಠಿಣ ನಿಲುವಿಗಿಂತ ಹೊಂದಾಣಿಕೆ -ಲಕಾರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
ಸಿಂಹ
ಹಿರಿಯರ ಜತೆ ಸೌಹಾರ್ದದಿಂದ ವ್ಯವಹರಿಸಿ. ಮುಜುಗರದ ಪರಿಸ್ಥಿತಿ ತಂದುಕೊಳ್ಳದಿರಿ.   ಮಧ್ಯಾಹ್ನ ತನಕ ಬಿಡುವಿರದ ಕಾರ್ಯ.
ಕನ್ಯಾ
ಗೊಂದಲದ ಮನಸ್ಥಿತಿ ಎದುರಾದೀತು. ಕೆಲವರ ವರ್ತನೆ ಈ ಗೊಂದಲ ಹೆಚ್ಚಿಸಲಿದೆ. ಸಮಾಧಾನಚಿತ್ತರಾಗಿ ಪರಿಸ್ಥಿತಿ ನಿಭಾಯಿಸಿ.
ತುಲಾ
ನಿಮಗೆ ಪೂರಕ ದಿನ. ಸಣ್ಣ ಪ್ರಯತ್ನದಿಂದಲೇ ಯಶಸ್ಸು ಸಾಽಸುವಿರಿ. ಮನೆಯಲ್ಲಿ ಹಿರಿಯರ ಮಾತಿಗೆ ಬೆಲೆ ಕೊಡಿ. ಭಿನ್ನಮತ ನಿವಾರಿಸಿ.    
ವೃಶ್ಚಿಕ
ಯಾವುದೇ ಕಾರ್ಯ ನಿಮಗಿಂದು ಅಸಾಧ್ಯ ಎಂದೆನಿಸದು. ಎಲ್ಲವೂ ಸುಸೂತ್ರವಾಗಿ ಸಾಗಲಿದೆ. ಆರೋಗ್ಯ ಸಮಸ್ಯೆ ಪರಿಹಾರ. ಧನಪ್ರಾಪ್ತಿ.  
ಧನು
ನಿಮ್ಮ ಕಾರ್ಯಕ್ಕೆ ಕೆಲವರಿಂದ ಅಡ್ಡಿ ಬಂದೀತು. ಹಿರಿಯರ ಜತೆ ವಾಗ್ವಾದ ಸಂಭವ. ಸಂಯಮ ಕಾದುಕೊಳ್ಳಿ. ಧನವ್ಯಯ ಅಽಕ.      
ಮಕರ
ಗುರಿ ಸಾಧನೆಗೆ ಅಡ್ಡಿ. ಸಂಘರ್ಷಕ್ಕೆ ಎಡೆ ಮಾಡದಂತೆ ಕೆಲಸ ಸಾಽಸಿ. ಆರ್ಥಿಕವಾಗಿ ಕಠಿಣ ಪರಿಸ್ಥಿತಿ ಒದಗೀತು. ಮಿತವ್ಯಯ ಸಾಽಸಿ.  
ಕುಂಭ
   ಯಶಸ್ವೀ ದಿನ. ಕೆಲಸ ಸುಗಮ. ಗುರಿ ಸಾಧನೆ. ಬಂಧುಬಳಗದ ಜತೆ ಸಂಭ್ರಮಾಚರಣೆ. ಪ್ರೀತಿಯ ವಿಚಾರದಲ್ಲಿ ಶುಭ ಬೆಳವಣಿಗೆ.  
  ಮೀನ
ದಂಪತಿ ಮಧ್ಯೆ ವಾಗ್ವಾದ ನಡೆದೀತು. ಯಾರಾದರೊಬ್ಬರು ತಾಳ್ಮೆ ವಹಿಸಬೇಕು. ಹೊಟ್ಟೆ ನೋವು ಕಾಣಿಸೀತು. ಆಹಾರ ಹಿತಮಿತವಿರಲಿ.

error: Content is protected !!