February 3, 2026
Tuesday, February 3, 2026
spot_img

ದಿನಭವಿಷ್ಯ: ವ್ಯವಹಾರದಲ್ಲಿ ತೊಡಕು ನಿವಾರಣೆ, ಮನೆಯಲ್ಲಿ ಸಂಭ್ರಮದ ವಾತಾವರಣ

ಮೇಷ
ನಿಮಗೆ ಅಹಿತವಾದ  ಪರಿಸ್ಥಿತಿಗೆ ಭಾವಾವೇಶದ ಪ್ರತಿಕ್ರಿಯೆ ತೋರಬೇಡಿ. ಮನೆಯ ಶಾಂತಿ  ಕೆಡಲು ಅವಕಾಶ ಕೊಡಬೇಡಿ. ಸಂಯಮ ಅಗತ್ಯ.    
ವೃಷಭ
ಕೌಟುಂಬಿಕ ಒತ್ತಡ ಮನಃಶಾಂತಿಯನ್ನು ಕೆಡಿಸಬಹುದು. ಸಹನೆಯ ವರ್ತನೆ ತೋರಿ. ವ್ಯವಹಾರದಲ್ಲಿ ತೊಡಕು ನಿವಾರಣೆ, ಸಮಾಧಾನ.    
ಮಿಥುನ
ಆಪ್ತರ ಜತೆಗೆ ಭಿನ್ನಮತ.ಸೌಹಾರ್ದದಿಂದ ಪರಿಹರಿಸಿ. ಸಣ್ಣ ವಿಷಯ ಹಿಗ್ಗಿಸಬೇಡಿ. ಸಂಧಾನದ ದಾರಿ ಹಿಡಿಯಿರಿ. ಆರೋಗ್ಯ ಸುಸ್ಥಿರ.        
ಕಟಕ
ಇಂದು ಸಂತೋಷದ ಮನಸ್ಥಿತಿ. ನಿಮ್ಮ ಕಾರ್ಯಕ್ಕೆ ಶ್ಲಾಘನೆ. ಆರ್ಥಿಕ ಪುರಸ್ಕಾರ. ಮನೆಯಲ್ಲಿ ಸಂಭ್ರಮ. ಕೆಲಸ ಅಧಿಕ. ಬಂಧುಗಳ ಆಗಮನ.      
ಸಿಂಹ
ಏನೋ ಪ್ರಮುಖ ಕಾರ್ಯ ಕಣ್ಣ ಮುಂದಿದೆ. ಆದರೆ ಅದು ಸರಿಯಾಗಿ ಅನುಷ್ಠಾನಕ್ಕೆ ಬರದೆ ನಿರಾಶೆ. ಯೋಚಿಸಿ ಮುಂದಿನ ಹೆಜ್ಜೆಯಿಡಿ.
ಕನ್ಯಾ
ಮಾತಿನ ಮೇಲೆ ಹಿಡಿತವಿರಲಿ. ಕಟುಮಾತು ಆತ್ಮೀಯ ಸಂಬಂಧಕ್ಕೆ ಮಾರಕವಾದೀತು. ಹೊಂದಾಣಿಕೆ ಮುಖ್ಯ. ವೆಚ್ಚ ಅಧಿಕವಾಗಲಿದೆ.      
ತುಲಾ
ಗ್ರಹಗತಿ ನಿಮಗೆ ಅನುಕೂಲ.  ಕಾರ್ಯದಲ್ಲಿ ಸಫಲತೆ. ಬಂಧುದ್ವೇಷ ನಿವಾರಣೆ.  ಕೌಟುಂಬಿಕ ಸಮಾಧಾನ ಮತ್ತು ಸಂಭ್ರಮ. ಧನಪ್ರಾಪ್ತಿ.    
ವೃಶ್ಚಿಕ
ಹಿರಿಯರ ಜತೆ  ವಿನಯದಿಂದ ವರ್ತಿಸಿ. ಕುಟುಂಬದ ಹಿತಾಸಕ್ತಿಗೆ ಗಮನ ಹರಿಸಿ. ಅನವಶ್ಯ ವೆಚ್ಚ ಹೆಚ್ಚಳ ಚಿಂತೆ
ತರಬಹುದು.                          
ಧನು
ಕ್ಷುಲ್ಲಕ ಕಲಹದಿಂದ ದೂರವಿರಿ. ನಿಮ್ಮ ಕೋಪತಾಪ ನಿಯಂತ್ರಿಸಿ. ಹಿನ್ನಡೆಗಳು ನಿಮ್ಮ ಎದೆಗುಂದಿಸದಿರಲಿ. ಆರ್ಥಿಕ ಒತ್ತಡ ನಿವಾರಣೆ.
ಮಕರ
ಹಣದ ವಿಷಯದಲ್ಲಿ ಆತುರದ ಕ್ರಮ ತೆಗೆದು ಕೊಳ್ಳಬೇಡಿ.  ಆಪ್ತರ ಹಿತವಚನಕ್ಕೆ ಕಿವಿಗೊಡಿ. ಆರೋಗ್ಯ ಸಮಸ್ಯೆಯಿಂದ ದೈಹಿಕ ಜಢತೆ.      
ಕುಂಭ
ಕೆಲವು ನೆನಪು ನೋವು ತರಬಹುದು. ಹಳೆಯದನ್ನು ಮರೆತು ಮುಂದೆ ಸಾಗುವುದು ಹಿತಕರ. ಕುಟುಂಬಸ್ಥರ ಬೆಂಬಲ ಪಡೆಯಿರಿ.  
ಮೀನ
ಇಂದು ನಿಮ್ಮ ಕೆಲಸಕ್ಕೆ ಅಡ್ಡಿ ಬರಲಿದೆ.  ತಪ್ಪುಗಳಿಂದ ಪಾಠ ಕಲಿಯಿರಿ. ಹಠಮಾರಿ ಧೋರಣೆ ಬಿಟ್ಟಬಿಡಿ. ಕೌಟುಂಬಿಕ ವಾಗ್ವಾದ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !