ಮೇಷ
ಹತಾಶೆ ಬಿಡಿ, ಪಾಸಿಟಿವ್ ಚಿಂತನೆ ಬೆಳೆಸಿ. ಕುಟುಂಬಸ್ಥರ ಜತೆ ಕಾಲ ಕಳೆಯಿರಿ. ಒತ್ತಡ ಕಳೆಯಲು ದೇವರ ಮೊರೆ ಹೋಗಿರಿ, ಧ್ಯಾನ ಮಾಡಿ.
ವೃಷಭ
ಪ್ರಗತಿಗೆ ಅಡ್ಡಿಗಳು. ಪ್ರಯತ್ನ ಬಿಡಬೇಡಿ. ಅಂತಿಮ ಯಶಸ್ಸು ನಿಮ್ಮದೆ. ಆತ್ಮೀಯರ ಸ್ನೇಹ ಕಡಿದುಕೊಳ್ಳಬೇಡಿ. ಹೊಂದಾಣಿಕೆ ಇರಲಿ.
ಮಿಥುನ
ಕಾರ್ಯ ಸಫಲ. ಜೀವನದಲ್ಲಿ ಉನ್ನತಿ ಸಾಧಿಸುವಿರಿ. ಕೌಟುಂಬಿಕ ಪರಿಸರ ಉಲ್ಲಾಸದಾಯಕ. ಆರೋಗ್ಯದ ಬಗ್ಗೆ ಸಣ್ಣ ಚಿಂತೆ ಮೂಡಬಹುದು.
ಕಟಕ
ಬೆಳಿಗ್ಗೆ ಮನಸ್ಸು ಕೆಡಿಸುವ ಪ್ರಸಂಗ ಸಂಭವ. ಆದರೆ ಸಂಜೆ ವೇಳೆಗೆ ಎಲ್ಲವೂ ಸುಸೂತ್ರ. ಕೋಪಕ್ಕೆ ಅವಕಾಶ ಕೊಡಬೇಡಿ, ತಾಳ್ಮೆಯಿರಲಿ.
ಸಿಂಹ
ಸ್ನೇಹ ಕೆಡುವ ಸನ್ನಿವೇಶ ಉಂಟಾದೀತು. ವಿವೇಕದಿಂದ ಪ್ರತಿಕ್ರಿಯಿಸಿ. ಮನೆಯಲ್ಲಿ ಸಣ್ಣ ವಿಷಯಕ್ಕೆ ಕಲಹ ಸಂಭವ. ತಾಳ್ಮೆಯಿಂದ ವ್ಯವಹರಿಸಿ.
ಕನ್ಯಾ
ನಿಮ್ಮ ಪಾಲಿಗೆ ಫಲಪ್ರದ ದಿನ. ಅನಿರೀಕ್ಷಿತ ಮೂಲದಿಂದ ಧನಲಾಭ. ಆರೋಗ್ಯ ಸಮಸ್ಯೆ ಪರಿಹಾರ. ಕೌಟುಂಬಿಕ ಉದ್ವಿಗ್ನತೆ ಶಮನ.
ತುಲಾ
ಮಿಶ್ರಫಲದ ದಿನ. ಸಹನೆಯಿಂದ ವ್ಯವಹರಿಸಿ. ಗುರಿಯಿಂದ ವಿಚಲಿತ ಆಗದಿರಿ. ದೈಹಿಕ ನೋವಿನಿಂದ ವಿಮೋಚನೆ. ಶೇರು ಹೂಡಿಕೆಗೆ ಸಕಾಲ.
ವೃಶ್ಚಿಕ
ಬೇರೆಯವರ ಹಿತಕ್ಕಾಗಿ ನಿಮ್ಮ ಕೆಲವು ಅನುಕೂಲ ಬಿಟ್ಟು ಕೊಡಬೇಕಾದೀತು. ದಂಪತಿಗೆ ಶುಭಸುದ್ದಿ. ಹಣ ಕೊರತೆ ಸಂಭವ.
ಧನು
ನಿಮ್ಮ ನೆಮ್ಮದಿ ಕಸಿಯುವ ಬೆಳವಣಿಗೆ ಉಂಟಾದೀತು. ಆದರೆ ಪರಿಸ್ಥಿತಿ ನೀವು ಅಂದುಕೊಂಡಷ್ಟು ಗಂಭೀರವಲ್ಲ.
ಮಕರ
ನಿಮ್ಮ ಹಾದಿಯಲ್ಲಿ ಅಡ್ಡಿ ಎದುರಾಗಲಿದೆ. ಆರ್ಥಿಕ ಮುಗ್ಗಟ್ಟು.ಕೆಲವರ ಅಸಹಕಾರ. ಸಂಘರ್ಷ ನಡೆದೀತು. ನವದಂಪತಿಗೆ ಶುಭದಿನ.
ಕುಂಭ
ಅಧಿಕ ಕೆಲಸದ ಒತ್ತಡ. ಕಾಲಮಿತಿಯಲ್ಲಿ ಕೆಲಸ ಮುಗಿಸಿ. ಆತ್ಮೀಯ ಸಂಬಂಧ ಕೆಡದಂತೆ ಎಚ್ಚರ ವಹಿಸಿ. ಅತಿರೇಕದ ಪ್ರತಿಕ್ರಿಯೆ ತೋರಬೇಡಿ.
ಮೀನ
ಸವಾಲಿನ ದಿನ. ಪ್ರತಿಕೂಲ ಫಲಿತಾಂಶ, ನೆಗೆಟಿವ್ ಮನಸ್ಥಿತಿ, ಕೆಲವರ ಅಸಹಕಾರ ಇವೆಲ್ಲ ನೆಮ್ಮದಿ ಕೆಡಿಸಲಿದೆ. ದೇವರ ಪ್ರಾರ್ಥನೆ ಮಾಡಿ.


