ಮೇಷ
ಕೆಲ ದಿನಗಳ ಪ್ರಕ್ಷುಬ್ಧತೆ ಕಳೆದು ಮನಸ್ಸು ಶಾಂತವಾಗಲಿದೆ. ಕಾರ್ಯ ಸಾಫಲ್ಯದಿಂದ ವಿಶ್ವಾಸ ವೃದ್ಧಿ. ಎಲ್ಲ ಸರಿಯಾಗಿ ನಿಭಾಯಿಸುವಿರಿ.
ವೃಷಭ
ಪ್ರಗತಿಪರ ದಿನ. ಉದ್ದೇಶಿಸಿದ ಕಾರ್ಯ ಪೂರ್ಣ. ಪ್ರೀತಿಯ ವಿಷಯದಲ್ಲಿ ಸಫಲತೆ. ವೃತ್ತಿಯಲ್ಲಿ ಉನ್ನತಿ, ಕೌಟುಂಬಿಕ ಸಾಮರಸ್ಯ.
ಮಿಥುನ
ಕೆಲಸದಲ್ಲಿ ಹೆಚ್ಚು ಗಮನ ಕೇಂದ್ರೀಕರಿಸಿ. ಚಂಚಲಚಿತ್ತ ಒಳಿತಲ್ಲ. ಅನಿರೀಕ್ಷಿತ ಧನಲಾಭ. ದೇವರ ಪ್ರಾರ್ಥನೆಯಿಂದ ಮನಸ್ಸಿಗೆ ಶಾಂತಿ.
ಕಟಕ
ನೆಮ್ಮದಿ ಕಲಕುವ ಬೆಳವಣಿಗೆ. ನಿಮಗೆ ಧೈರ್ಯ ಕಡಿಮೆ, ಅದರಿಂದ ಗುರಿ ಸಾಧನೆ ಕಷ್ಟ. ಗುರಿ ಸಾಧಿಸಲು ಕಠಿಣ ಪ್ರಯತ್ನ ಅಗತ್ಯ.
ಸಿಂಹ
ಉದ್ದೇಶಿಸಿದ ಕಾರ್ಯಕ್ಕೆ ವಿಘ್ನಗಳು. ಪ್ರಯತ್ನ ವಿಫಲ. ಮನಸ್ಸಿಗೆ ನಿರಾಶೆ. ಅತಿಯಾಗಿ ವಿಶ್ವಾಸವಿಟ್ಟವರೇ ಕೇಡು ಬಗೆಯುತ್ತಾರೆ.
ಕನ್ಯಾ
ನಿರ್ವಹಣೆ ಉತ್ತಮ. ಹಾಗಾಗಿ ಒಳ್ಳೆ ಫಲ ಸಿಗುವುದು. ಆದರೂ ಕೆಲವರ ಅವಕೃಪೆಗೆ ತುತ್ತಾಗುವಿರಿ. ಕೌಟುಂಬಿಕ ಭಿನ್ನಮತ, ಉದ್ವಿಗ್ನತೆ.
ತುಲಾ
ಒತ್ತಡದ ದಿನ. ಅಧಿಕ ಹೊಣೆಗಾರಿಕೆ. ನಿಮ್ಮನ್ನು ದ್ವೇಷಿಸುವವರಿಂದ ದೂರ ಇರಿ. ಅನವಶ್ಯ ವೆಚ್ಚದ ಮೇಲೆ ನಿಯಂತ್ರಣ ಇಡಿ. ಕೌಟುಂಬಿಕ ಸಹಕಾರ.
ವೃಶ್ಚಿಕ
ಮಾಡಿದ ಕೆಲಸಕ್ಕೆ ಸೂಕ್ತ ಪ್ರತಿಫಲ ಸಿಗದಿದ್ದರೂ ನಿರಾಶೆ ಆಗದು. ಹಣದ ಹರಿವು ಸುಗಮ. ಉಳಿತಾಯವೂ ಸಾಧ್ಯ. ಮನಸ್ಸು ನಿರಾಳ.
ಧನು
ಇತ್ತೀಚಿನ ಹಿನ್ನಡೆ ಗಳಿಂದ ನೊಂದಿದ್ದರೆ ಇಂದು ನಿರಾಳತೆ ಸಿಗಲಿದೆ. ನಿಮಗೆ ಪೂರಕವಾದ ಬೆಳವಣಿಗೆ. ಆಪ್ತರ ಜತೆಗಿನ ಮುನಿಸು ಮಾಯ.
ಮಕರ
ಯಾವುದೇ ವಿಷಯಕ್ಕೆ ಕ್ಷಿಪ್ರವಾಗಿ ಪ್ರತಿಕ್ರಿಯಿಸಿ. ಅದು ನಿಮ್ಮ ಘನತೆ ಉಳಿಸುವುದು. ಗುರಿ ಸಾಧನೆ ನಿಮಗೆ ಕಷ್ಟವಾಗಲಾರದು.
ಕುಂಭ
ಇತರರ ಜತೆ ಸರಿಯಾಗಿ ವ್ಯವಹರಿಸಿ. ತಪ್ಪು ಕಲ್ಪನೆ ಮೂಡದಂತೆ ಎಚ್ಚರ ವಹಿಸಿ. ಸಣ್ಣ ಪ್ರವಾಸದ ಅವಕಾಶ ಸಿಗಲಿದೆ. ಖರ್ಚು ಅಧಿಕ.
ಮೀನ
ವಿಶ್ವಾಸ ವೃದ್ಧಿಯ ಬೆಳವಣಿಗೆ. ಮನೆಯಲ್ಲಿ ಅಧಿಕ ಹೊಣೆಯ ಹೊರೆ. ಹಿರಿಯರಿಗೆ ಸಂಧಿ ನೋವಿನಿಂದ ನೆಮ್ಮದಿ ಸಿಗಬಹುದು.



