Wednesday, January 28, 2026
Wednesday, January 28, 2026
spot_img

ದಿನಭವಿಷ್ಯ: ಅಹಂ ಬಿಟ್ಟು ಪ್ರೀತಿಯಿಂದಿರಿ, ಆದಾಯ ಹೆಚ್ಚಳ.. ಆರೋಗ್ಯದ ಕಾಳಜಿ ಅಗತ್ಯ!

ಮೇಷ
ಬಿಡುವಿಲ್ಲದ ಕೆಲಸ. ಇತರರ ಒಳಿತಿಗೆ ಶ್ರಮಿಸುತ್ತಾ ನಿಮ್ಮ ಆಕಾಂಕ್ಷೆ ಬಲಿಗೊಡದಿರಿ. ಕೌಟುಂಬಿಕ ಸಾಮರಸ್ಯ ಹದಗೆಡದಿರಲಿ.      
ವೃಷಭ
ಸಂಗಾತಿ ಜತೆ ಅಹಂ ಬಿಡಿ. ನಿಮ್ಮದೇ ನಿಲುವು ಹೇರಬೇಡಿ. ಸಂಬಂಧ ಕೆಡಬಹುದು.  ಹಣ ಗಳಿಕೆ ಹೆಚ್ಚಳವಾಗದು. ಇದ್ದುದರಲ್ಲಿ ತೃಪ್ತಿಯಿರಲಿ.    
ಮಿಥುನ
ನಿಮ್ಮ ಮನಸ್ಥಿತಿ. ಇತರರ ಜತೆ ಹಂಚಿಕೊಳ್ಳಲು ಬಯಸುವಿರಿ. ಆದರೆ ಸೂಕ್ತ ಸ್ಪಂದನೆ ದೊರಕದು. ದಂಪತಿ ಮಧ್ಯೆ ವಿರಸ ಮೂಡೀತು. ಹೊಂದಾಣಿಕೆಯಿರಲಿ.      
ಕಟಕ
  ಆಪ್ತ ಬಳಗದ ಜತೆ ಕಾಲ ಕಳೆಯುವ ಅವಕಾಶ. ಮಾತಿನಲ್ಲಿ ಕಟುಮಾತು ನುಸುಳದಂತೆ ನೋಡಿಕೊಳ್ಳಿ. ಸಂಬಂಧ ಕೆಡದಂತೆ ನೋಡಿಕೊಳ್ಳಿ.                
ಸಿಂಹ
 ವೃತ್ತಿಯ ಒತ್ತಡ ಎಂದಿಗಿಂತ ಹೆಚ್ಚು. ಏಕಾಗ್ರತೆ ಕಳಕೊಳ್ಳದಿರಿ. ವೈವಾಹಿಕ ಬದುಕಲ್ಲಿ ಒಡಕು ಮೂಡದಂತೆ ಎಚ್ಚರಿಕೆ ವಹಿಸಿರಿ.  
ಕನ್ಯಾ
ನೀವು ಇಚ್ಛಿಸದ  ವಿಷಯದಲ್ಲಿ ಬೇಸರ ಪಡುತ್ತಾ ಕೂರದಿರಿ. ಬಂದ  ಪರಿಸ್ಥಿತಿಗೆ ಒಗ್ಗಿಕೊಳ್ಳುವುದು ಮುಖ್ಯ. ಮನೋನಿಗ್ರಹ ಅವಶ್ಯ. ಧನವ್ಯಯ.    
ತುಲಾ
ನಿಮ್ಮ ಕಾರ್ಯದಲ್ಲಿ ದಿನವಿಡೀ ವ್ಯಸ್ತ. ಬೇರೆ ವಿಷಯದಲ್ಲಿ ಮನಸ್ಸು ತೊಡಗದು. ಸಂಬಂಧದಲ್ಲಿ  ಒಡಕು ಮೂಡೀತು. ಹೊಟ್ಟೆ ಕೆಡುವ ಸಾಧ್ಯತೆ.                
ವೃಶ್ಚಿಕ
ಕುಟುಂಬದ ಜತೆ ಪ್ರಯಾಣ ಸಾಧ್ಯತೆ. ವೃತ್ತಿ ಕೆಲಸ ಮುಗಿಸಿರಿ. ನಿಮ್ಮ ಕಟು ಮಾತಿನಿಂದ ಆಪ್ತರು ದೂರವಾದಾರು. ಹೆಚ್ಚು ಹಣ ಗಳಿಕೆ ಅವಕಾಶ.    
ಧನು
ಸಂಗಾತಿ ಜತೆ ಸಂಘರ್ಷ ನಡೆದೀತು. ಪರಸ್ಪರ ಗೌರವವಿದ್ದರೆ ಪ್ರೀತಿ ಬೆಳೆಯುವುದು. ಉದ್ಯೋಗದ ಅವಕಾಶ ಹೆಚ್ಚಲಿದೆ. ಧನವ್ಯಯ.          
ಮಕರ
ದೈನಂದಿನ ಕೆಲಸ ನಿಮ್ಮ ಉತ್ಸಾಹ ಕುಗ್ಗಿಸುವುದು. ಮನಸ್ಸು ಉಲ್ಲಸಿತಗೊಳಿಸುವ ಹವ್ಯಾಸ ಬೆಳೆಸಿಕೊಳ್ಳಿ. ಬಂಧುಗಳ ಸಹಕಾರ.  
ಕುಂಭ
 ದೈಹಿಕ ಕ್ಷಮತೆ ಕಾಯ್ದುಕೊಳ್ಳಿ. ಹೆಚ್ಚುವರಿ ಆದಾಯದ ದಾರಿ ಹೊಳೆಯಲಿದೆ. ಕೌಟುಂಬಿಕ ಉದ್ವಿಗ್ನತೆ ಶಮನಕ್ಕೆ ಗಮನ ಕೊಡಿ.                    
 ಮೀನ
ಇಂದು ಪ್ರಮುಖ ಬೆಳವಣಿಗೆ ಸಂಭವ. ಅನವಶ್ಯ ವಾಗ್ವಾದದಿಂದ ಆದಷ್ಟು ದೂರವಿರಿ. ಪ್ರತಿ ವಿಷಯದಲ್ಲಿ ಸಂಯಮ ಅತ್ಯವಶ್ಯ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !