February 3, 2026
Tuesday, February 3, 2026
spot_img

ದಿನಭವಿಷ್ಯ: ದೀರ್ಘಕಾಲದ ಚಿಂತೆಗೆ ಇಂದು ಪರಿಹಾರ ಸಿಗಲಿದೆ, ವೃತ್ತಿಯಲ್ಲಿ ಹೆಚ್ಚಲಿದೆ ಜವಾಬ್ದಾರಿ

ಮೇಷ
ಮುಂಜಾನೆ ಉದ್ವಿಗ್ನ ಮನಸ್ಥಿತಿ. ಅಪರಾಹ್ನ ನಿರಾಳತೆ.  ಚಿಂತೆ ತಂದಿದ್ದ ವಿಷಯ ಇತ್ಯರ್ಥ. ಮನೆಯಲ್ಲಿ ಭಾವನಾತ್ಮಕ ಏರುಪೇರು.      
ವೃಷಭ
ನಿಮ್ಮ ಕಾರ್ಯಶೈಲಿ ಇತರರಿಗೆ ಮಾದರಿ. ಆದರೂ ವೃತ್ತಿಕ್ಷೇತ್ರದಲ್ಲಿ ಪ್ರತಿಕೂಲ ಪರಿಸ್ಥಿತಿ. ತಪ್ಪಿಗೆ ಎಡೆಮಾಡಿಕೊಡಬೇಡಿ. ಎಚ್ಚರದಿಂದಿರಿ.
ಮಿಥುನ
ಹೊಸ ವ್ಯವಹಾರಕ್ಕೆ ಕೈಹಾಕಲು ಯೋಜಿಸಿದ್ದರೆ ಇನ್ನೊಮ್ಮೆ ಯೋಚಿಸಿ. ಅಡ್ಡಿ ನಿವಾರಿಸಿಕೊಳ್ಳಿ. ಸ್ನೇಹವು ಪ್ರೀತಿಯಾಗಿ ಮಾರ್ಪಡಬಹುದು.    
ಕಟಕ
  ಸಂವಹನ ಕೊರತೆ, ಬಾಂಧವ್ಯದಲ್ಲಿ ಬಿಕ್ಕಟ್ಟು. ಕಾರ್ಯ ವಿಳಂಬ. ತಪ್ಪಿನಿಂದ ಪಾಠ ಕಲಿಯಿರಿ, ಅದನ್ನೆ ಪುನರಾವರ್ತನೆ ಮಾಡಬೇಡಿ.          
ಸಿಂಹ
 ವೃತ್ತಿಯಲ್ಲಿ ಏಕಾಗ್ರತೆ ಮೂಡದು. ನಿಮಗೆ ಬಂದಿರುವ ಹೊಸ ಸಮಸ್ಯೆ ಅದಕ್ಕೆ ಕಾರಣ. ಸ್ವಲ್ಪ ಸಮಯ ಕಾದು ನೋಡಿ, ಈಗಲೇ ಪ್ರತಿಕ್ರಿಯಿಸಬೇಡಿ.  
ಕನ್ಯಾ
ಮಾನಸಿಕವಾಗಿ ಬಳಲುವಿರಿ. ಇದು ದೇಹದ ಮೇಲೂ ಪರಿಣಾಮ ಬೀರಲಿದೆ. ನಿಮ್ಮ ಸುತ್ತ ನಯವಂಚಕರಿದ್ದಾರೆ, ಅವರ ಬಲೆಗೆ ಸಿಲುಕದಿರಿ.
ತುಲಾ
ಎಂದಿನಂತಿಲ್ಲ ಇಂದು. ಕೆಲಸದಲ್ಲಿ  ಮನಸ್ಸು ನಿಲ್ಲದು. ಏನೇನೋ ಚಿಂತೆಗಳು. ಮೋಸ ಮಾಡುವ ವ್ಯಕ್ತಿಗಳ ಬಗ್ಗೆ ಎಚ್ಚರವಿರಲಿ.                  
ವೃಶ್ಚಿಕ
ಸ್ಪರ್ಧಾತ್ಮಕ ವಾತಾವರಣದಲ್ಲಿ ಚಡಪಡಿಸುವಿರಿ. ಸವಾಲಿಗೆ ಮುದುಡದಿರಿ. ಸೂಕ್ತ ಸಹಕಾರ, ನೆರವು ನಿಮಗೆ ಸಿಕ್ಕಿಯೇ ಸಿಗುವುದು.      
ಧನು
ನಿಮ್ಮ ಕಾರ್ಯಶೈಲಿ ಬದಲಿಸಬೇಕು.  ಇಲ್ಲವಾದರೆ ಪ್ರಗತಿ ಕುಂಠಿತ. ಆತ್ಮೀಯರೆ ನಿಮ್ಮ ವಿರುದ್ಧ ತಿರುಗಿ ಬಿದ್ದಾರು. ದೃಢ ಮನಸ್ಕರಾಗಿರಿ.        
ಮಕರ
ಅನುಚಿತ ಮಾತಿನಿಂದ ಬಿಕ್ಕಟ್ಟಿಗೆ ಸಿಲುಕುವಿರಿ. ನಿಯಂತ್ರಣ ಇರಲಿ. ವೃತ್ತಿಯಲ್ಲಿ ಪ್ರತಿಕೂಲ ಪರಿಸ್ಥಿತಿ.
ಕುಂಭ
ವೃತ್ತಿಯಲ್ಲಿ ನಿಮ್ಮ ಕಾರ್ಯಕ್ಕೆ ಶ್ಲಾಘನೆ. ಕಠಿಣ ಕಾರ್ಯವೂ ನಿಮ್ಮಿಂದ ಸುಲಭವಾಗಲಿದೆ. ಮನೆಯಲ್ಲೂ ಹರ್ಷದ ವಾತಾವರಣ.              
 ಮೀನ
ಆರೋಗ್ಯ ಸಮಸ್ಯೆ, ಮನಸ್ಸಿಗೆ ಉದಾಸ ಭಾವ. ಆಹಾರದಲ್ಲಿ ಎಚ್ಚರ ವಹಿಸಿ. ಅಜೀರ್ಣ ಸಮಸ್ಯೆ ಬಾಽಸಬಹುದು. ವೃತ್ತಿಯಲ್ಲಿ ಒತ್ತಡ ಹೆಚ್ಚು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !