ಮೇಷ
ಅಶಾಂತ ಮನಸ್ಥಿತಿ. ವೃತ್ತಿ ಕ್ಷೇತ್ರದ ಕೆಲವು ಬೆಳವಣಿಗೆಯಿಂದ ಅಸಮಾಧಾನ. ಮನೆ ಸದಸ್ಯರ ಸಂಗದಲ್ಲಿ ನೆಮ್ಮದಿ. ಧನಪ್ರಾಪ್ತಿ.
ವೃಷಭ
ಸಣ್ಣ ವಿಷಯಕ್ಕೂ ರೇಗುವ ಸನ್ನಿವೇಶ ಉಂಟಾದೀತು. ತಾಳ್ಮೆ ವಹಿಸಿ. ನಿಮ್ಮ ಕೆಲಸದಲ್ಲಿ ಬೇಕೆಂದೇ ಕೆಲವರು ತಪ್ಪು ಹುಡುಕುವರು.
ಮಿಥುನ
ಸಂಗಾತಿಯ ವರ್ತನೆ ಅಸಮಾಧಾನ ಉಂಟು ಮಾಡಬಹುದು. ವಾಗ್ವಾದ ಸಂಭವ. ನಿಮ್ಮಿಂದ ತಾಳ್ಮೆಯ ನಡೆ ಅವಶ್ಯ. ಖರ್ಚು ಹೆಚ್ಚಲಿದೆ.
ಕಟಕ
ಸಮಯಕ್ಕೆ ತಕ್ಕಂತೆ ಸೂಕ್ತ ನಿರ್ಧಾರ ತಾಳಿ. ಹಳೆಯ ನಿರ್ಧಾರಕ್ಕೇ ಅಂಟಿಕೊಂಡು ಕೂರದಿರಿ. ಆಪ್ತರಿಂದ ಶುಭ ಸುದ್ದಿ ಕೇಳಿಬಂದೀತು.
ಸಿಂಹ
ಅಗತ್ಯಕ್ಕಿಂತ ಹೆಚ್ಚು ಹಣ ಖರ್ಚು ಚಿಂತೆ ತಂದೀತು. ನಿಮ್ಮ ಹಿತೈಷಿಗಳನ್ನು ಅವಗಣನೆ ಮಾಡಬೇಡಿ. ಪ್ರೀತಿಯಲ್ಲಿ ಯಶಸ್ಸು ಸಿಗಲಿದೆ.
ಕನ್ಯಾ
ಕೆಲವು ಬೆಳವಣಿಗೆ ನಿರಾಶೆ ತರುವುದು. ಬಂಧುವಿನ ಜತೆ ವಿರಸ. ಯಶಸ್ಸಿನ ದಾರಿಯಲ್ಲಿ ವಿಘ್ನ ತಲೆದೋರಲಿದೆ. ಸಂಯಮವಿರಲಿ.
ತುಲಾ
ಸಂಬಂಧಪಡದ ವಿಚಾರದಲ್ಲಿ ನೀವು ಸಿಲುಕುವಿರಿ. ನೆಮ್ಮದಿ ಹಾಳಾದೀತು. ಕೌಟುಂಬಿಕ ಸಹಕಾರ ಪಡೆಯಿರಿ. ಮಕ್ಕಳ ಸಾಧನೆ ತೃಪ್ತಿ.
ವೃಶ್ಚಿಕ
ಇತ್ತೀಚಿನ ಕೆಲವು ಬೆಳವಣಿಗೆಗಳ ಕಾರಣದಿಂದ ಧಾರ್ಮಿಕ ಭಾವ ಹೆಚ್ಚಬಹುದು. ಕಷ್ಟ ಮರೆಯಲು ದೇವರ ಮೊರೆ ಹೋಗುವಿರಿ.
ಧನು
ನಿಮ್ಮ ಸಾಧನೆಯ ಶ್ರೇಯಸ್ಸು ಇತರರು ಕಸಿದುಕೊಂಡಾರು. ಎಚ್ಚರ ದಿಂದಿರಿ. ಕೌಟುಂಬಿಕ ಬಿಕ್ಕಟ್ಟು. ಅತಿರೇಕದ ಪ್ರತಿಕ್ರಿಯೆ ತೋರದಿರಿ.
ಮಕರ
ವ್ಯವಹಾರದ ಒತ್ತಡ ಮಧ್ಯೆಯೂ ಖುಷಿ ಪಡುವ ಪ್ರಸಂಗ ಉಂಟಾಗಲಿದೆ. ಆರ್ಥಿಕ ಉನ್ನತಿ. ವೈವಾಹಿಕ ಸಂಬಂಧ ಕೂಡಿಬಂದೀತು. ಆರೋಗ್ಯ ವೃದ್ಧಿ.
ಕುಂಭ
ಇತರರ ಒಳ್ಳೆಯ ಕೆಲಸ ಶ್ಲಾಸಿರಿ. ನಿಮ್ಮ ವರ್ತನೆಯಿಂದ ಇತರರ ಮೆಚ್ಚುಗೆ ಗಳಿಸುವಿರಿ. ಕೌಟುಂಬಿಕ ಸಂತೋಷ. ಬಂಧುಗಳ ಭೇಟಿ.
ಮೀನ
ಎಲ್ಲರನ್ನು ಕುರುಡಾಗಿ ನಂಬದಿರಿ. ನಿಮ್ಮನ್ನು ವಂಚಿಸಲು ಯತ್ನ ನಡೆಯುತ್ತದೆ. ಪ್ರೀತಿಯ ಅಭಿವ್ಯಕ್ತಿ ಪ್ರತಿಕೂಲ ಫಲಿತಾಂಶ ತಂದೀತು.



