ಮೇಷ
ದೊಡ್ಡ ಯಶಸ್ಸೂ ಇಲ್ಲದ, ಹಿನ್ನಡೆಯೂ ಕಾಣದ ಸಾಧಾರಣ ದಿನ. ಅನಿರೀಕ್ಷಿತ ಖರ್ಚು. ಮಾನಸಿಕ ಒತ್ತಡ ತುಸು
ಕಡಿಮೆಯಾದೀತು.
ವೃಷಭ
ಯಶಸ್ಸು ಸಾಧಿಸಲು ಪೂರಕ ದಿನ. ಆರ್ಥಿಕ ಲಾಭ. ಸಂಬಂಧ ವೃದ್ಧಿ. ವೃತ್ತಿ ಸಂಬಂಧ ಪ್ರಯಾಣ ಸಾಧ್ಯತೆ. ಹಳೆಯ ತಪ್ಪು ಪುನರಾವರ್ತಿಸದಿರಿ.
ಮಿಥುನ
ಹೊರಗಿನಿಂದ ನೆಮ್ಮದಿ ಕಂಡರೂ ಮನದೊಳಗೆ ಎಲ್ಲ ಸರಿಯಾಗಿಲ್ಲ. ಚಿಂತೆ ಬಾಧಿಸುವುದು. ಬಂಧು ಜತೆ ವಿರಸ ನಡೆದೀತು.
ಕಟಕ
ಕಷ್ಟವೆಂದು ಮಾಡದೇ ಬಿಟ್ಟ ಕೆಲಸ ಪೂರೈಸಲು ಆದ್ಯತೆ ಕೊಡಿ. ಪ್ರೀತಿಯಲ್ಲಿ ಆರಂಭಿಕ ಹಿನ್ನಡೆ ಕಂಡರೂ ಬಳಿಕ ಪೂರಕ ಬೆಳವಣಿಗೆ.
ಸಿಂಹ
ಮನೆಯಲ್ಲಿ, ವೃತ್ತಿಯಲ್ಲಿ ಕೆಲ ವಿಷಯ ಮುಚ್ಚಿಡಬೇಡಿ. ಎಲ್ಲವನ್ನು ಒಪ್ಪಿಕೊಳ್ಳುವುದು ಹಿತ. ಬಳಿಕ ಮುಜುಗರ ಎದುರಿಸುವುದು ತಪ್ಪಲಿದೆ.
ಕನ್ಯಾ
ಖಾಸಗಿ ಬದುಕು ಮತ್ತು ವೃತ್ತಿ ಬದುಕಿನ ಮಧ್ಯೆ ಸಂಘರ್ಷ. ಸಮನ್ವಯ ಕಷ್ಟ. ಒಬ್ಬ ವ್ಯಕ್ತಿಯಿಂದ ಅಶಾಂತ ಮನಸ್ಥಿತಿ ಉಂಟಾದೀತು.
ತುಲಾ
ನಿಮ್ಮ ಸ್ಥೈರ್ಯ ಕುಂದಿಸುವ ಒಂದೆರಡು ಪ್ರಸಂಗ ಉಂಟಾದೀತು. ಮನೋದಾರ್ಢ್ಯ ಮುಖ್ಯ. ಹೊಸ ವ್ಯವಹಾರದಲ್ಲಿ ಹಣ ಹೂಡಲು ಹೋಗದಿರಿ.
ವೃಶ್ಚಿಕ
ಎಲ್ಲ ವಿಷಯಗಳಲ್ಲಿ ಇಂದು ಒಳಿತಾಗುವ ಬೆಳವಣಿಗೆ. ದಂಪತಿಗೆ ಹರ್ಷ. ಅನಿರೀಕ್ಷಿತ ಧನಾಗಮ. ದೂರ ಪ್ರಯಾಣ ಸಾಧ್ಯತೆ.
ಧನು
ವೃತ್ತಿಪರರಿಗೆ ಯಶಸ್ಸು. ಆದರೂ ಕೆಲವು ಕಠಿಣ ಪರಿಸ್ಥಿತಿ ಉಂಟಾದೀತು. ಅಪಥ್ಯ ಆಹಾರದಿಂದ ಹೊಟ್ಟೆ ಕೆಡಬಹುದು.
ಮಕರ
ಕೆಲಸದ ಮೇಲೆ ಹೆಚ್ಚು ಗಮನವಿಡಿ. ಅನವಶ್ಯ ಚಿಂತೆ ಬಾಧಿಸೀತು. ನೆಗೆಟಿವ್ ಚಿಂತನೆ ದೂರ ಸರಿಸಿರಿ. ಆಪ್ತರ ಜತೆ ಸಮಾಧಾನ.
ಕುಂಭ
ಏಕತಾನತೆ ಸಾಕೆನಿಸಿದ್ದರೆ ಬದಲಾವಣೆಗೆ ಮನ ಮಾಡಿ. ಪರಮಾಪ್ತರ ಸಂಗದಲ್ಲಿ ಕಳೆಯಿರಿ. ಆರ್ಥಿಕ ಪ್ರಗತಿ.
ಮೀನ
ಕೆಲಸದಲ್ಲಿ ಸಣ್ಣ ತಪ್ಪು ದೊಡ್ಡ ಪರಿಣಾಮ ಬೀರಬಹುದು. ದಂಪತಿಗೆ ಶುಭ ಸುದ್ದಿ. ದುಬಾರಿ ವಸ್ತು ಖರೀದಿಯ ಉದ್ದೇಶ ಈಡೇರಲಿದೆ.




