Thursday, January 29, 2026
Thursday, January 29, 2026
spot_img

ದಿನಭವಿಷ್ಯ: ವೃತ್ತಿಯಲ್ಲಿ ಏಳಿಗೆ, ವೈವಾಹಿಕ ಜೀವನದಲ್ಲಿ ಮೈತ್ರಿ.. ಆರ್ಥಿಕವಾಗಿ ಲಾಭದಾಯಕ ದಿನ

ಮೇಷ
ಇತರರ ಜತೆ ಚೆನ್ನಾದ ಸಂವಹನ ಸಾಽಸುವಿರಿ. ವಿಶ್ವಾಸ ವೃದ್ಧಿ.  ಮಹತ್ವದ ಸುದ್ದಿ ನಿರೀಕ್ಷಿಸಿದ್ದರೆ ಇಂದು ಸಿಗದು. ಸ್ವಲ್ಪ ಕಾಲ ಕಾಯಬೇಕಾಗುತ್ತದೆ.
ವೃಷಭ
ವೃತ್ತಿ ಕ್ಷೇತ್ರದಲ್ಲಿ ಉನ್ನತಿ. ಇತರರ ಸಹಕಾರ. ಭಿನ್ನಮತ ನಿವಾರಣೆ. ಅವಿವಾಹಿತರಿಗೆ ಸಂಗಾತಿ ಹುಡುಕಾಟದಲ್ಲಿ  ಯಶ. ಆರ್ಥಿಕ ಪ್ರಗತಿ.  
ಮಿಥುನ
ಅಂದುಕೊಂಡ ಕೆಲಸ ಸಾಧ್ಯವಾಗಲಿದೆ. ಹಣ ಗಳಿಕೆಯ ಹಾದಿ ಸುಗಮ. ಹೊಸ ವ್ಯವಹಾರದಲ್ಲಿ ಹಣ ಹೂಡಬಹುದು. ಕೌಟುಂಬಿಕ ಸಮಾಧಾನ.      
ಕಟಕ
ನೀವು ಇಂದು ನಾಯಕನ ರೀತಿ  ಕಾರ್ಯಾಚರಿಸಬೇಕು. ಪ್ರತಿ ವಿಷಯದಲ್ಲಿ ಮುಂದಾಳತ್ವ ವಹಿಸಿ. ಅನ್ಯರನ್ನು ಅನುಸರಿಸದಿರಿ.            
ಸಿಂಹ
ವೃತ್ತಿ, ಖಾಸಗಿ ಬದುಕಲ್ಲಿ ಉನ್ನತಿ ಸಾಽಸುವಿರಿ. ಪ್ರೀತಿಯ ವಿಷಯದಲ್ಲಿ ನಿರಾಳತೆ ತರುವ ಬೆಳವಣಿಗೆ. ಅಽಕ ಖರ್ಚು, ಹಣ ಕೊರತೆ.  
ಕನ್ಯಾ
 ಬಹುಮುಖಿ ಕಾರ್ಯ ಪೂರೈಸಬೇಕಾದ ಒತ್ತಡ. ಸಂಗಾತಿ ಜತೆ ಭಿನ್ನಾಭಿಪ್ರಾಯ ಸಂಭವ. ಹಣ ಹೂಡಿಕೆಯಲ್ಲಿ ನಷ್ಟ ಉಂಟಾದೀತು, ಎಚ್ಚರ.
ತುಲಾ
ವೃತ್ತಿಪರವಾಗಿ ಯಶಸ್ವೀ ದಿನ. ಆದರೆ ಭಾವನಾತ್ಮಕವಾಗಿ ಅಶಾಂತಿ. ಆಪ್ತರ ಜತೆ ಮುನಿಸುವ ಸಂಭವ. ಅಧ್ಯಾತ್ಮದತ್ತ ಒಲವು.  
ವೃಶ್ಚಿಕ
ಕಾರ್ಯದಲ್ಲಿ ಯಶ. ಮೇಲಽಕಾರಿಗಳ ಮೆಚ್ಚುಗೆ. ಕೌಟುಂಬಿಕ ಬೆಳವಣಿಗೆ ಮಾತ್ರ ಹಿತ ತಾರದು. ಏನೋ ಬೇಸರ, ಅಸಮಾಧಾನ.  
ಧನು
ಇತರರಿಗೆ ನೆರವು ನೀಡುವಲ್ಲಿ ಖುಷಿ ಕಾಣುವಿರಿ. ಕೌಟುಂಬಿಕ ಗುರಿಯೊಂದು ಈಡೇರಲಿದೆ. ಆಪ್ತರ ಸಂಗದಲ್ಲಿ ಸಂತೋಷ.  
ಮಕರ
ಯಶಸ್ಸು ಸುಲಭದಲ್ಲಿ ನಿಮ್ಮೆಡೆಗೆ ಬರಲಿದೆ. ಹೊಸ ವ್ಯವಹಾರದ ಯೋಜನೆ ಇದ್ದರೆ ಯಶ ಸಿಗಲಿದೆ. ವಾಗ್ವಾದ ತಪ್ಪಿಸಿರಿ.  
ಕುಂಭ
ಕೆಲದಿನಗಳ ಅಶಾಂತಿ ನಿವಾರಣೆಯಾಗುವ ಕಾಲ ಬಂದಿದೆ. ನೆಮ್ಮದಿ ನೀಡಬಲ್ಲ ಬೆಳವಣಿಗೆ ಉಂಟಾಗಲಿದೆ. ಕೌಟುಂಬಿಕ ಸಹಕಾರ.    
 ಮೀನ
ನೀವು ತಳೆವ ನಿರ್ಧಾರ ನಿರೀಕ್ಷಿತ -ಲ ನೀಡಲಾರದು. ಹಾಗಾಗಿ ಅತಿಯಾದ ನಿರೀಕ್ಷೆ ಬೇಡ. ಅನವಶ್ಯ ಖರ್ಚು ಚಿಂತೆಗೆ ಕಾರಣವಾದೀತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !