ಮೇಷ
ಕೆಲವರನ್ನು ಬದಲಿಸಲು ನಿಮ್ಮಿಂದ ಅಸಾಧ್ಯ. ಅವರ ಜತೆ ಹೊಂದಿಕೊಂಡು ಬಾಳುವುದು ಒಳ್ಳೆಯದು. ವಿದ್ಯಾರ್ಥಿಗಳಿಗೆ ಯಶ.
ವೃಷಭ
ವಿದ್ಯಾರ್ಥಿಗಳಿಗೆ ಸಫಲ ದಿನ. ವೃತ್ತಿಯಲ್ಲಿ ಸಮಸ್ಯೆ ನೀಗಿಸಲು ಶಕ್ತರಾಗುವಿರಿ. ಆರೋಗ್ಯ ಕಾಳಜಿ ನೋಡಿಕೊಳ್ಳಿ. ಸಿಕ್ಕಿದ್ದನ್ನು ತಿನ್ನಬೇಡಿ.
ಮಿಥುನ
ಪ್ರತಿಕೂಲ ಪರಿಸ್ಥಿತಿ ಎದುರಿಸುತ್ತಿದ್ದರೆ ಸ್ವಲ್ಪ ಕಾಲ ಕಾದು ನೋಡಿ. ಬಳಿಕ ಸರಿ ಹೋಗುವುದು. ದುಡುಕಿನ ಕ್ರಮ ಕೈಗೊಳ್ಳಬೇಡಿ. ಆರ್ಥಿಕ ಸ್ಥಿರತೆ.
ಕಟಕ
ವೃತ್ತಿಯಲ್ಲಿ ಸ್ಪರ್ಧೆ ಎದುರಿಸುವಿರಿ. ನಿಮ್ಮ ಪ್ರಭುತ್ವ ಸ್ಥಾಪಿಸಲು ಸ್ವಲ್ಪ ಕಷ್ಟ ಪಡಬೇಕಾಗುವುದು. ಮನೆಯಲ್ಲಿ ಶಾಂತ ಪರಿಸ್ಥಿತಿ. ಧನ ಪ್ರಾಪ್ತಿ.
ಸಿಂಹ
ಮಾನಸಿಕ ಶಾಂತಿ ಕದಡುವ ಬೆಳವಣಿಗೆ. ಸಮಚಿತ್ತ ಕಾಯ್ದುಕೊಳ್ಳಿ. ಕೆಲವರ ಕೆಣಕುವಿಕೆ ನಿರ್ಲಕ್ಷಿಸಿ. ವಿದ್ಯಾರ್ಥಿಗಳಿಗೆ ಆಂಶಿಕ ಯಶಸ್ಸು.
ಕನ್ಯಾ
ಹೆತ್ತವರು ಮಕ್ಕಳ ಕುರಿತು ಕಾಳಜಿ ವಹಿಸಿ. ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಬೇಡಿ. ನೆಂಟರಿಂದ ಟೀಕೆ ಕೇಳುವಿರಿ. ಧನಹಾನಿ.
ತುಲಾ
ಕೆರಿಯರ್‌ನಲ್ಲಿ ಮುಂದೆ ಹೆಜ್ಜೆ ಇಡಿ. ಸಣ್ಣ ಅಪಯಶಸ್ಸು ಕಂಡು ಹಿಂದಡಿ ಇಡಬೇಡಿ. ಹೊಸ ವ್ಯವಹಾರದಲ್ಲಿ ಧನ ಸಂಪಾದನೆ ಹೆಚ್ಚಳ.
ವೃಶ್ಚಿಕ
ಆರ್ಥಿಕ ಒತ್ತಡ. ಅನ್ಯರ ನೆರವು ಅಪೇಕ್ಷಿಸಿದರೂ ಸಿಗದು. ಸಣ್ಣ ಘಟನೆಯೊಂದು ಮಾನಸಿಕ ಕ್ಷೆಭೆ ಉಂಟು ಮಾಡಬಹುದು.
ಧನು
ನಿಮ್ಮ ಕಾರ್ಯಕ್ಕೆ ಮೆಚ್ಚುಗೆ ಸಿಗಲಿದೆ. ಟೀಕೆಗಳಿಗೆ ಅಂಜಿ ಉದ್ದೇಶಿತ ಕೆಲಸದಿಂದ ಹಿಂದೆ ಸರಿಯಬೇಡಿ. ವಿದ್ಯಾರ್ಥಿಗಳಿಗೆ ಒತ್ತಡ.
ಮಕರ
ಅಡ್ಡಿಗಳಿಗೆ ಅಂಜಬೇಡಿ. ಅದನ್ನು ದಾಟಿ ಮುಂದೆ ಸಾಗಲು ಯತ್ನಿಸಿ. ಹಿರಿಯರ ಆರೋಗ್ಯ ಚಿಂತೆಗೆ ಕಾರಣವಾದೀತು.
ಕುಂಭ
ಹತಾಶೆಯ ಮನೋಭಾವ. ಅದಕ್ಕೆ ಕಾರಣ ಮುಗಿಯದ ಸಮಸ್ಯೆ. ಗ್ರಹಗತಿ ಕೆಲ ಕಾಲ ಮಾನಸಿಕ ಕಿರಿಕಿರಿ ಸೃಷ್ಟಿಸಲಿದೆ.
ಮೀನ
ಕಠಿಣ ಶ್ರಮಕ್ಕೆ ಫಲ ಸಿಗುವುದು. ಆದರೆ ಉದಾಸೀನತೆ ಬಿಡುವುದು ಮುಖ್ಯ. ನಾಳೆಗೆ ಮುಂದೂಡುವ ಅಭ್ಯಾಸ ಬಿಟ್ಟುಬಿಡಿ.



