ಮೇಷ
ಕೆಲಸದ ಒತ್ತಡದಿಂದ ಮುಕ್ತಿ. ಸ್ವಲ್ಪ ಮಟ್ಟಿನ ನಿರಾಳತೆ. ಮನೆಯಲ್ಲೂ ಪೂರಕ ಬೆಳವಣಿಗೆ. ಮಕ್ಕಳ ಸಾಧನೆಯಿಂದ ತೃಪ್ತಿ. ಖರ್ಚು ಹೆಚ್ಚಬಹುದು.
ವೃಷಭ
ನಿಮ್ಮ ನಿಲುವಿನಲ್ಲಿ ಬದಲಾವಣೆ ತರುವ ಬೆಳವಣಿಗೆ. ನಿಮ್ಮ ಮೂಗಿನ ನೇರಕ್ಕೇ ವ್ಯವಹರಿಸಬೇಡಿ. ಇತರರ ಮಾತಿಗೂ ಬೆಲೆಯಿರಲಿ.
ಮಿಥುನ
ಭಾವುಕ ವಿಷಯ ದಲ್ಲಿ ಪ್ರಾಕ್ಟಿಕಲ್ ಆಗಿ ವರ್ತಿಸಿರಿ. ನಿಮ್ಮ ಮನಸ್ಸಿನ ದೌರ್ಬಲ್ಯ ಎಲ್ಲರಿಗು ತಿಳಿಯುವುದು ಬೇಡ. ಕೌಟುಂಬಿಕ ಅಶಾಂತಿ .
ಕಟಕ
ನಿಮ್ಮ ಪ್ರಗತಿಗೆ ಅಡ್ಡಿ ತರುತ್ತಿರುವ ವಿಷಯ ಮೊದಲಿಗೆ ಇತ್ಯರ್ಥ ಮಾಡಿಕೊಳ್ಳಿ. ಅದನ್ನು ಬೆಳೆಯಲು ಬಿಡಬೇಡಿ. ಟೀಕೆಗೆ ಎರವಾಗುವಿರಿ.
ಸಿಂಹ
ಸ್ವಂತ ವ್ಯವಹಾರದಲ್ಲಿ ಎಚ್ಚರದಿಂದ ಹೆಜ್ಜೆ ಇಡಿ. ಯಾರನ್ನೂ ಕುರುಡಾಗಿ ನಂಬದಿರಿ. ಸಮೀಪ ಬಂಧುಗಳ ಅಸಹಕಾರ ಎದುರಿಸುವಿರಿ.
ಕನ್ಯಾ
ಕೆಲಸದ ಒತ್ತಡದಿಂದ ಹೊರಬಂದು ಕುಟುಂಬ ಸದಸ್ಯರ ಜತೆ ಕಾಲ ಕಳೆಯಿರಿ. ಅವರ ಸಮಸ್ಯೆ ಪರಿಹಾರಕ್ಕೆ ಗಮನ ಕೊಡಿ. ಖರ್ಚು ಅಧಿಕವಾದೀತು.
ತುಲಾ
ಕಠಿಣವೆಂದು ಭಾವಿಸಿದ ಕಾರ್ಯ ಸುಲಭದಲ್ಲಿ ಪೂರ್ಣ. ಆದರೂ ಏನೋ ಕೊರಗು ಉಳಿಯಲಿದೆ. ಬಂಧು ಜತೆ ತಿಕ್ಕಾಟ ಸಂಭವ.
ವೃಶ್ಚಿಕ
ವಿರೋಧಿಗಳ ಮನಸ್ಸನ್ನೂ ಇಂದು ಒಲಿಸಬಲ್ಲಿರಿ. ಇದು ನಿಮ್ಮ ವ್ಯವಹಾರವನ್ನು ಸುಲಲಿತಗೊಳಿಸಲಿದೆ. ಆರ್ಥಿಕ ಸ್ಥಿತಿ ಉನ್ನತಿ.
ಧನು
ಕಾಯುತ್ತಿದ್ದ ಅವಕಾಶವೊಂದು ಇಂದು ಸಿಗುವುದು. ಆದರೆ ಅದರಿಂದ ನಿಮಗೆ ಹೆಚ್ಚು ಲಾಭವಾಗದು. ಕೌಟುಂಬಿಕ ವೈಮನಸ್ಸು.
ಮಕರ
ಹೊಸ ವ್ಯವಹಾರಕ್ಕೆ ಈಗಲೆ ಕೈಹಾಕದಿರಿ. ವಿಘ್ನಗಳು ಕಾಡಬಹುದು. ಕೆಲವರಿಂದ ಟೀಕೆ ಎದುರಿಸುವಿರಿ. ತಪ್ಪಿದ್ದರೆ ಕೂಡಲೇ ತಿದ್ದಿಕೊಳ್ಳಿ.
ಕುಂಭ
ಗುರಿ ಸಾಧನೆಗೆ ಕೆಲವರು ಅಡ್ಡಗಾಲು ಹಾಕುವರು. ಅವರನ್ನು ದೂರವಿಡಿ. ಖರ್ಚು ಕಡಿಮೆ ಮಾಡಲು ಮೊದಲು ಗಮನ ಕೊಡಿ.
ಮೀನ
ಹೆಚ್ಚು ಉತ್ಸಾಹದ ದಿನ. ಸಣ್ಣ ವಿಷಯ ಗಂಭೀರವಾಗಿ ಪರಿಗಣಿಸಿ ಮನಸ್ಸು ಹಾಳು ಮಾಡಿಕೊಳ್ಳದಿರಿ. ಹೊಂದಾಣಿಕೆ ಒಳಿತು.


