Monday, January 12, 2026

ದಿನಭವಿಷ್ಯ: ಬಲವಾದ ಸಂಕಲ್ಪ, ಇಂದು ನಿಮ್ಮ ದಿನದ ಪ್ರತಿ ಹೆಜ್ಜೆಯಲ್ಲೂ ಗೆಲುವು!

ಮೇಷ
 ನಿಮ್ಮ ಭಾವನೆ ವ್ಯಕ್ತಪಡಿಸಲು ಹಿಂಜರಿಕೆ ಬೇಡ. ಪೂರಕ ಸ್ಪಂದನೆ ಸಿಗಲಿದೆ. ಆರ್ಥಿಕ ಸ್ಥಿತಿ ಉತ್ತಮ. ಕೌಟುಂಬಿಕ ಬಿಕ್ಕಟ್ಟು ಪರಿಹಾರ.  
ವೃಷಭ
ಪ್ರಗತಿಯ ಅವಕಾಶ ಕಳಕೊಳ್ಳಬೇಡಿ. ಮೀನಮೇಷ ಎಣಿಸಿ ಕೂರದಿರಿ. ಧೈರ್ಯವಾಗಿ ಮುನ್ನುಗ್ಗಿ. ಕೌಟುಂಬಿಕ ಸಹಕಾರ ಲಭ್ಯ.
ಮಿಥುನ
ನಿಮ್ಮ ಸಂವಹನ ಕಲೆಯು ನಿಮಗೆ ಯಶಸ್ಸು ತಂದುಕೊಡುವುದು. ಬಿಕ್ಕಟ್ಟನ್ನು ಸುಲಭದಲ್ಲಿ ಪರಿಹರಿಸುವಿರಿ. ಇತರರ ಮೆಚ್ಚುಗೆ ಗಳಿಸುವಿರಿ.
ಕಟಕ
ವೃತ್ತಿಯಲ್ಲಿ ಯಶ. ಬಡ್ತಿಯ ಅವಕಾಶ ಉಜ್ವಲ. ಆರ್ಥಿಕ ಉನ್ನತಿ. ಕೌಟುಂಬಿಕ ಸೌಹಾರ್ದ, ಸಾಮರಸ್ಯ ಹೆಚ್ಚಳ.
ಸಿಂಹ
ಫಲಪ್ರದ ದಿನ. ಹೂಡಿಕೆಯಿಂದ ಲಾಭ. ಏಕಾಂಗಿಗಳಿಗೆ ಸಂಗಾತಿ ದೊರಕಬಹುದು. ಶಾಪಿಂಗ್ ಸಂಭ್ರಮ. ವಸ್ತು ಖರೀದಿಯ ಸಂತೋಷ.
ಕನ್ಯಾ
ಮನೆಯಲ್ಲಿ ಸಮಸ್ಯೆ. ಆದರೆ ಅದನ್ನು ಸಮರ್ಥ ವಾಗಿ ನಿಭಾಯಿಸುವಿರಿ.  ಆರೋಗ್ಯ ಸಮಸ್ಯೆ ನಿವಾರಣೆ. ದಿನದಂತ್ಯಕ್ಕೆ ನಿರಾಳತೆ.
ತುಲಾ
ವೃತ್ತಿಯಲ್ಲಿ ದೀರ್ಘ ಯೋಜನೆ ಹಾಕಿರಿ. ಅಲ್ಪಕಾಲೀನ ಯೋಜನೆ ಹೆಚ್ಚಿನ ಲಾಭ ತರದು. ಪ್ರೀತಿಯ ವಿಚಾರ ಬಿಕ್ಕಟ್ಟು, ವೈಮನಸ್ಸು ಸೃಷ್ಟಿಸಲಿದೆ.
ವೃಶ್ಚಿಕ
ಯಾವುದೋ ವಿಚಾರ ಮನಸ್ಸು ಕೊರೆಯುವುದು. ಉಲ್ಲಾಸ ಪಡದಂತಹ ಮನಸ್ಥಿತಿ. ಇದು ತಾತ್ಕಾಲಿಕ, ಬೇಗ ಎಲ್ಲ ಸರಿಹೋಗಲಿದೆ.  
ಧನು
ಆರ್ಥಿಕತೆ ಮತ್ತು ಆರೋಗ್ಯ ಎರಡರ ಬಗ್ಗೆಯೂ ಹೆಚ್ಚಿನ ಗಮನ ಕೊಡಿ. ನಿರ್ಲಕ್ಷ್ಯ ಸರಿಯಲ್ಲ. ಸೂಕ್ತ ಕ್ರಮ ತೆಗೆದುಕೊಳ್ಳಿ.    
ಮಕರ
ಕುಟುಂಬ ಸದಸ್ಯರ ಹಿತವಚನಕ್ಕೆ ಕಿವಿಗೊಡಿ. ವ್ಯಕ್ತಿಯೊಬ್ಬರ ಜತೆಗಿನ ವಿರಸ ವಿಷಮ ಸ್ಥಿತಿಗೆ ಏರಬಹುದು. ಸಂಯಮ ಅವಶ್ಯ, ಧನವ್ಯಯ ಹೆಚ್ಚು  
ಕುಂಭ
   ನಿರುತ್ಸಾಹ ಇಂದು ಕಾಡಲಿದೆ. ಪ್ರತಿಕೂಲ ಪರಿಸ್ಥಿತಿ ಎದುರಿಸುವಿರಿ. ಬೇಸರ, ಹತಾಶೆ ಕಾಡಲಿದೆ. ಭುಜ ಅಥವಾ ಹಿಮ್ಮಡಿ ನೋವು ಕಾಡಬಹುದು.  
  ಮೀನ
ಬಾಕಿ ಉಳಿದಿದ್ದ ಕಾರ್ಯ ನೆರವೇರಲಿದೆ.  ಸಂಗಾತಿಯಿಂದ ಬೆಂಬಲ. ಹಣ ಗಳಿಕೆಯ ಹಾದಿ ತೆರೆಯಲಿದೆ. ಕಾಡುವ ಚಿಂತೆ ಪರಿಹಾರ.  

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!