ಮೇಷ
ಎಲ್ಲ ಕೆಲಸ ಇಂದು ವಿಳಂಬಗೊಳ್ಳುವುದು. ಕೆಲವರ ಅಸಹಕಾರ. ಅಸಹನೆ ಅಧಿಕ. ಆರ್ಥಿಕ ಒತ್ತಡ ಹೆಚ್ಚಳ. ಕರಿದ ತಿಂಡಿಯಿಂದ ದೂರವಿರಿ.
ವೃಷಭ
ಉತ್ಸಾಹಪೂರ್ಣ ದಿನ. ಕಠಿಣ ಕೆಲಸವೂ ಸುಲಭದಲ್ಲಿ ಸಾಧ್ಯ. ಉದ್ದೇಶಿತ ಕೆಲಸ ಫಲಪ್ರದ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಯಶ.
ಮಿಥುನ
ಎಲ್ಲ ಬೆಳವಣಿಗೆ ಪೂರಕವಾಗಿ ನಡೆಯಲಿದೆ. ಅಡ್ಡಿ ನಿವಾರಣೆ. ಹಣದ ಕೊರತೆ ಪರಿಹಾರ. ನವದಂಪತಿಗಳಿಗೆ ಶುಭಕರ ಬೆಳವಣಿಗೆ.
ಕಟಕ
ತಲೆನೋವು ಅಥವಾ ಅಜೀರ್ಣದ ಸಮಸ್ಯೆ ಕಾಡಬಹುದು. ಕುಟುಂಬ ಸದಸ್ಯರ ಜತೆ ಕಳೆಯಿರಿ, ಒತ್ತಡ ನಿವಾರಿಸಿಕೊಳ್ಳಿ. ಧನಹಾನಿ ಸಂಭವ.
ಸಿಂಹ
ಕಾರ್ಯಸಿದ್ಧಿ. ಆತ್ಮೀಯರ ಜತೆಗಿನ ಭಿನ್ನಮತ ನಿವಾರಣೆ. ಕೌಟುಂಬಿಕ ಸಮಸ್ಯೆ ಇದ್ದರೆ ಸಂಜೆಯೊಳಗೆ ಪರಿಹಾರ. ಖರ್ಚು ಹೆಚ್ಚಬಹುದು.
ಕನ್ಯಾ
ಮಾನಸಿಕ ಒತ್ತಡವು ದಂಪತಿ ಮಧ್ಯೆ ಕಲಹಕ್ಕೆ ಕಾರಣವಾದೀತು. ಸಮಾಧಾನದಿಂದ ವ್ಯವಹರಿಸಿ. ಚರ್ಮದ ಅಲರ್ಜಿ ಕಾಣಿಸಿತು.
ತುಲಾ
ಹೊಟ್ಟೆನೋವು, ಕಣ್ಣಿನ ಕಿರಿಕಿರಿಯಂತಹ ಸಮಸ್ಯೆ ಉಂಟಾದೀತು. ವೃತ್ತಿಯಲ್ಲಿ ಹೆಚ್ಚು ಹೊಣೆ. ಸಂಗಾತಿ ಜತೆಗೆ ವಾಗ್ವಾದ. ಆರ್ಥಿಕ ಉನ್ನತಿ.
ವೃಶ್ಚಿಕ
ಕೆಲದಿನಗಳ ಒತ್ತಡ ಇಂದು ನಿವಾರಣೆ. ಅನುಚಿತ ಆಹಾರ ಸೇವನೆ ಆರೋಗ್ಯಕ್ಕೆ ಸಮಸ್ಯೆ ಒಡ್ಡಬಹುದು. ಪ್ರೀತಿಯಲ್ಲಿ ಯಶಸ್ಸು.
ಧನು
ಮಕ್ಕಳಿಂದ ಸಮಸ್ಯೆ ಉಂಟಾದೀತು. ಅದನ್ನು ತಾಳ್ಮೆಯಿಂದ ನಿಭಾಯಿಸಿ. ಸಾಂಸಾರಿಕ ಬಿಕ್ಕಟ್ಟು ಪರಿಹರಿಸಲು ಸಮಯ ವ್ಯಯ. ಧನನಷ್ಟ.
ಮಕರ
ಅನವಶ್ಯ ಚಿಂತೆ ಕಾಡಲು ಬಿಡಬೇಡಿ. ಸಮಸ್ಯೆಗೆ ಪರಿಹಾರ ಇದ್ದೇ ಇದೆ. ಹಣ ಹೂಡಿಕೆಗೆ ಪೂರಕ ದಿನವಲ್ಲ. ಮನೆಯಲ್ಲಿ ಸಾಮರಸ್ಯ.
ಕುಂಭ
ಬಿಕ್ಕಟ್ಟಿಗೆ ತಕ್ಷಣ ಪ್ರತಿಕ್ರಿಯಿಸಿ. ವಿಳಂಬ ಧೋರಣೆ ಒಳ್ಳೆಯದಲ್ಲ. ಉಪಯುಕ್ತ ಕಾರ್ಯಕ್ಕೆ ಹಣ ಹೆಚ್ಚು ಖರ್ಚು. ಕೌಟುಂಬಿಕ ಸಮಾಧಾನ.
ಮೀನ
ಸಂಗಾತಿ ಜತೆ ಪ್ರಾಮಾಣಿಕವಾಗಿ ವರ್ತಿಸಿ. ಮುಚ್ಚುಮರೆ ಬೇಡ. ಅನಿರೀಕ್ಷಿತ ಖರ್ಚು. ಮೇಲಧಿಕಾರಿಯ ಕಿರುಕುಳ ಎದುರಿಸುವಿರಿ.



