February 3, 2026
Tuesday, February 3, 2026
spot_img

ದಿನಭವಿಷ್ಯ: ಇಂದು ಹಣದ ಕೊರತೆ ಖಂಡಿತ ಬರೋದಿಲ್ಲ, ವ್ಯವಹಾರ ಹೊಸ ದಿಕ್ಕು ಹಿಡಿಯುವುದು

ಮೇಷ
ಗ್ರಹಗತಿ ನಿಮಗೆ ಪೂರಕ. ಉತ್ತಮ ವ್ಯವಹಾರದ ಸೂಚನೆ. ಕ್ಷುಲ್ಲಕ ವಿಷಯ ಸಂಬಂಧ ಹಾಳು ಮಾಡದಂತೆ ನೋಡಿಕೊಳ್ಳಿ. ಧನವ್ಯಯ.
ವೃಷಭ
ಉದ್ಯೋಗದಲ್ಲಿ ಪೂರಕ ಪರಿಸ್ಥಿತಿ. ಕಾರ್ಯ ಸುಗಮ. ಹಣದ ಕೊರತೆ ಕಾಡದು. ಆಪ್ತರ ಜತೆ ಖರೀದಿ ಉತ್ಸಾಹ. ದೈಹಿಕ ಪರಿಸ್ಥಿತಿ ಉತ್ತಮ.
ಮಿಥುನ
ಉತ್ಸಾಹದ ದಿನ. ವ್ಯವಹಾರ ಹೊಸ ದಿಕ್ಕು ಹಿಡಿಯಬಹುದು. ಸದುಪಯೋಗ ಮಾಡಿಕೊಳ್ಳಿ. ದಂಪತಿಗೆ ಶುಭ ಬೆಳವಣಿಗೆ.
ಕಟಕ
ಕೆಲಸದಲ್ಲಿ ಹೆಚ್ಚುವರಿ ಹೊಣೆ. ಅಧಿಕ ಕೆಲಸ. ವೃತ್ತಿ ಸಂಬಂಧ ಪ್ರಯಾಣ. ಅಡ್ಡಿಗಳ ಹೊರತಾಗಿಯೂ ಆರ್ಥಿಕ ಸಂಪಾದನೆ ಉತ್ತಮಗೊಳ್ಳಲಿದೆ.
ಸಿಂಹ
ವೃತ್ತಿಯಲ್ಲಿ ಅದೃಷ್ಟ ಕುದುರಲಿದೆ. ಹಣದ ಹೂಡಿಕೆ ಲಾಭ ತರುವುದು. ವಿದ್ಯಾರ್ಥಿಗಳಿಗೆ ಕೆಲವು ಸಮಸ್ಯೆ ಉಂಟಾದೀತು. ಸಾಂಸಾರಿಕ ನೆಮ್ಮದಿ.
ಕನ್ಯಾ
ಪ್ರತಿಯೊಂದು ವಿಚಾರದಲ್ಲಿ ಇಂದು ಎಚ್ಚರದಿಂದಿರಿ. ಪ್ರತಿಕೂಲ ಸನ್ನಿವೇಶ ಎದುರಿಸುವಿರಿ. ಸಂಬಂಧ ಹಾಳಾದೀತು. ವೈಷಮ್ಯ ಹೆಚ್ಚಳ.
ತುಲಾ
ಪ್ರತಿ ಕಾರ್ಯದಲ್ಲಿ ಸಫಲತೆ ಪಡೆಯುವಿರಿ. ವೃತ್ತಿಯಲ್ಲಿ ಉನ್ನತಿ. ಮನೆಯಲ್ಲೂ ಎಲ್ಲರ ಜತೆ ಸಂಬಂಧ ಸುಧಾರಣೆ. ವಿರಸ ಅಂತ್ಯ.
ವೃಶ್ಚಿಕ
ವೃತ್ತಿಯ ಮೇಲೆ ಹೆಚ್ಚು ಗಮನ ಕೊಡಿ. ಬೇರಾವುದೋ ವಿಚಾರ ನಿಮ್ಮನ್ನು ಬೇರೆ ಚಿಂತೆಗೆ ದೂಡುತ್ತವೆ. ಅನವಶ್ಯ ತಿಕ್ಕಾಟ ಸಂಭವ.
ಧನು
ನಿಮ್ಮ ಕೆಲಸಕ್ಕೆ ಉತ್ತಮ ಪ್ರತಿಫಲ ಲಭ್ಯ. ಆದರೆ ವಿರೋಧಿಗಳೂ ಹುಟ್ಟಿಕೊಂಡಾರು. ಹೊಟ್ಟೆ ಸಂಬಂಧಿತ ಅನಾರೋಗ್ಯ ಕಾಡಬಹುದು.
ಮಕರ
ಸಕಾಲದಲ್ಲಿ ಕರ್ತವ್ಯ ಪೂರೈಸಲು ವಿಫಲ. ವ್ಯವಹಾರದಲ್ಲೂ ಸಫಲತೆ ಕಾಣದು. ವಾದಕ್ಕೆ ಇಳಿಯದಿರಿ. ಸಣ್ಣ ಜಗಳ ಗಂಭೀರವಾದೀತು.
ಕುಂಭ
ಪ್ರಗತಿಯ ದಿನ. ವಿವಾಹಾಕಾಂಕ್ಷಿಗಳಿಗೆ ಶುಭಕರ ಬೆಳವಣಿಗೆ. ವಿದ್ಯಾರ್ಥಿಗಳಿಗೆ ಯಶಸ್ಸು. ಸಾಂಸಾರಿಕ ಉದ್ವಿಗ್ನತೆ ಶಮನ.
ಮೀನ
ಹೆಚ್ಚಿದ ಕೆಲಸದ ಒತ್ತಡ. ಯೋಜಿಸಿ ಕಾರ್ಯ ಎಸಗಿ. ಗೊಂದಲ ಹೆಚ್ಚಿಸಿಕೊಳ್ಳಬೇಡಿ. ಅಸಹನೆಯಿಂದ ರೇಗುವ ಪ್ರಸಂಗ ಒದಗೀತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !