Monday, December 22, 2025

ದಿನಭವಿಷ್ಯ: ಇಂದು ನಿಮಗೆ ಯಶಸ್ವಿ ದಿನ, ಉದ್ದೇಶಿತ ಕೆಲಸಗಳು ಪೂರ್ಣಗೊಳ್ಳಲಿವೆ

ಮೇಷ: ನೆಮ್ಮದಿಯ ನಿಟ್ಟುಸಿರು ಕೌಟುಂಬಿಕ ಕಲಹಗಳಿಗೆ ಇತಿಶ್ರೀ ಹಾಡುವ ಕಾಲವಿದು. ಕೆಲಸದಲ್ಲಿನ ಗೊಂದಲಗಳು ದೂರವಾಗಿ, ಆರ್ಥಿಕವಾಗಿ ಭದ್ರತೆ ಸಿಗಲಿದೆ. ಮನಸ್ಸಿನ ಆತಂಕಗಳು ದೂರವಾಗಲಿವೆ.

ವೃಷಭ: ಸ್ನೇಹವೇ ಶಕ್ತಿ ಜನರ ಬಗ್ಗೆ ನಿಮಗಿದ್ದ ಹಳೆಯ ಅಭಿಪ್ರಾಯಗಳು ಇಂದು ಬದಲಾಗಲಿವೆ. ಹೊಸ ಸ್ನೇಹ ಸಂಬಂಧಗಳಿಂದ ನಿಮಗೆ ಲಾಭವಾಗುವ ಸಾಧ್ಯತೆ ಇದೆ, ಮುಕ್ತವಾಗಿರಿ.

ಮಿಥುನ: ತಾಳ್ಮೆಯೇ ಯಶಸ್ಸಿನ ಸೂತ್ರ ಕೆಲಸದ ಫಲಿತಾಂಶ ತಡವಾಗುತ್ತಿದೆ ಎಂದು ಬೇಸರ ಬೇಡ. ಕಾಯುವಿಕೆಗೆ ತಕ್ಕ ಪ್ರತಿಫಲ ಸಿಗಲಿದೆ. ಪ್ರೇಮ ಜೀವನದಲ್ಲಿ ಇಂದು ನಿಮಗೆ ಶುಭ ಸುದ್ದಿಯಿದೆ.

ಕಟಕ: ಭಾವನೆಗಳ ಮೇಲೆ ನಿಯಂತ್ರಣವಿರಲಿ ಇಂದು ಸ್ವಲ್ಪ ಭಾವುಕರಾಗುವ ಸಾಧ್ಯತೆ ಇದೆ. ಆಪ್ತರು ನಿಮ್ಮನ್ನು ನಿರ್ಲಕ್ಷಿಸಿದಂತೆ ಭಾಸವಾಗಬಹುದು, ಆದರೆ ಎದೆಗುಂದಬೇಡಿ. ಸಂಘರ್ಷದಿಂದ ದೂರವಿರುವುದೇ ಜಾಣತನ.

ಸಿಂಹ: ಸಿಟ್ಟು ಬಿಡಿ, ಗೆಲುವು ನಿಮ್ಮದೇ ಇಂದು ನೀವು ಅಂದುಕೊಂಡ ಕೆಲಸಗಳು ಸಫಲವಾಗಲಿವೆ. ಆದರೆ ಸಣ್ಣ ವಿಷಯಗಳಿಗೆ ಕೋಪ ಮಾಡಿಕೊಳ್ಳುವುದನ್ನು ಬಿಟ್ಟು, ಎಲ್ಲರೊಂದಿಗೆ ಹೊಂದಾಣಿಕೆಯಿಂದ ಹೋದರೆ ದಿನವು ಇನ್ನಷ್ಟು ಸುಂದರವಾಗಿರುತ್ತದೆ.

ಕನ್ಯಾ: ಆಲಸ್ಯಕ್ಕೆ ವಿದಾಯ ಹೇಳಿ ಉದಾಸೀನತೆಯು ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರಬಹುದು. ಇಂದಿನ ಕೆಲಸಗಳನ್ನು ಇಂದೇ ಮುಗಿಸುವ ಛಲ ಬೆಳೆಸಿಕೊಳ್ಳಿ. ಆಸಕ್ತಿಯಿಂದ ಕೆಲಸದಲ್ಲಿ ತೊಡಗಿಕೊಳ್ಳಿ.

ತುಲಾ: ಮಾತು ಮುತ್ತಿನಂತಿರಲಿ ಹಣಕಾಸಿನ ವ್ಯವಹಾರಗಳಿಗೆ ಇಂದು ಉತ್ತಮ ದಿನ. ಆದರೆ ಇತರರನ್ನು ಟೀಕಿಸುವ ಮುನ್ನ ಯೋಚಿಸಿ, ನಂತರ ಪಶ್ಚಾತ್ತಾಪ ಪಡುವುದಕ್ಕಿಂತ ಮೌನವೇ ಲೇಸು.

ವೃಶ್ಚಿಕ: ವ್ಯವಹರಿಸುವಾಗ ಇರಲಿ ಎಚ್ಚರ ಆರ್ಥಿಕ ನಷ್ಟದ ಮುನ್ಸೂಚನೆ ಇರುವುದರಿಂದ ಹಣದ ವಿಷಯದಲ್ಲಿ ಜಾಗ್ರತೆಯಿರಲಿ. ಯಾರೋ ಹೇಳಿದ ಸುಳ್ಳು ಭರವಸೆಗಳಿಗೆ ಮರುಳಾಗಬೇಡಿ. ಅನಗತ್ಯ ಖರ್ಚಿಗೆ ಲಗಾಮು ಹಾಕಿ.

ಧನು: ಒತ್ತಡಕ್ಕೆ ಮದ್ದು ಪ್ರೀತಿ ಚಿಕ್ಕ ವಿಷಯಗಳನ್ನೇ ದೊಡ್ಡದಾಗಿ ಯೋಚಿಸಿ ಕಂಗಾಲಾಗಬೇಡಿ. ಆತ್ಮೀಯರೊಂದಿಗೆ ಸಮಯ ಕಳೆಯುವುದರಿಂದ ನಿಮ್ಮ ಮಾನಸಿಕ ಒತ್ತಡ ಕಡಿಮೆಯಾಗಲಿದೆ.

ಮಕರ: ಬದಲಾವಣೆಗೆ ಒಗ್ಗಿಕೊಳ್ಳಿ ಸುತ್ತಮುತ್ತಲಿನ ಬದಲಾವಣೆಗಳನ್ನು ಸ್ವೀಕರಿಸಿ. ಹಠಮಾರಿ ಧೋರಣೆ ಬಿಟ್ಟು ಎಲ್ಲರೊಂದಿಗೆ ಬೆರೆತರೆ ನಿಮಗೆ ಯಶಸ್ಸು ಕಟ್ಟಿಟ್ಟ ಬುತ್ತಿ.

ಕುಂಭ: ಆತ್ಮಾವಲೋಕನದ ಸಮಯ ನಿಮ್ಮ ಜೀವನದ ಹಾದಿಯನ್ನು ವಿಮರ್ಶಿಸಿಕೊಳ್ಳಲು ಇಂದು ಸೂಕ್ತ ದಿನ. ಕೆಲವು ಘಟನೆಗಳು ನಿಮ್ಮನ್ನು ಆಳವಾಗಿ ಯೋಚಿಸುವಂತೆ ಮಾಡಲಿವೆ. ಕೌಟುಂಬಿಕವಾಗಿ ಸುಖ-ಶಾಂತಿ ಇರಲಿದೆ.

ಮೀನ: ಅನಿರೀಕ್ಷಿತ ನೆರವು ಬಹಳ ದಿನಗಳಿಂದ ಕಾಡುತ್ತಿದ್ದ ಚಿಂತೆಗಳಿಗೆ ಇಂದು ಪರಿಹಾರ ಸಿಗಲಿದೆ. ಕಷ್ಟದ ಸಮಯದಲ್ಲಿ ಅನಿರೀಕ್ಷಿತ ಸಹಾಯ ಹರಿದುಬರಲಿದೆ. ಕುಟುಂಬದ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮಾತಿನ ಮೂಲಕ ಬಗೆಹರಿಸಿಕೊಳ್ಳಿ.

error: Content is protected !!