ಮೇಷ
ಕುಟುಂಬದಲ್ಲಿ ಸಂತೋಷ, ಸಂಭ್ರಮದ ವಾತಾವರಣ. ಚಿಂತೆ ಮರೆತು ನೀವೂ ಆನಂದಿಸಿ. ಹೆಚ್ಚು ಖರ್ಚು ಮಾಡಬೇಕಾದೀತು.
ವೃಷಭ
ಕೆಲಸದ ಒತ್ತಡದಿಂದ ಮುಕ್ತಿ. ಆಪ್ತರ ಜತೆ ಕಾಲ ಕಳೆಯುವ ಅವಕಾಶ. ಅನಿರೀಕ್ಷಿತ ವಲಯದಿಂದ ಹಣ ಪ್ರಾಪ್ತಿ. ಆಹಾರ ಸೇವನೆ ಹಿತಮಿತವಿರಲಿ.
ಮಿಥುನ
ನಿಮ್ಮ ಮಾತು, ವರ್ತನೆ ಇತರರನ್ನು ಆಕರ್ಷಿಸುವುದು. ಹೊಸ ಗೆಳೆತನ ಪ್ರಾಪ್ತಿ. ಹಣದ ವಿಷಯದಲ್ಲಿ ನಿರ್ಲಕ್ಷ್ಯ ಬೇಡ, ಧನಹಾನಿ ಸಂಭವ.
ಕಟಕ
ಇಂದು ವಿರಾಮ ಬಯಸಿದರೂ ಸಿಗದು. ಕೆಲಸದ ಒತ್ತಡ ಹೆಚ್ಚು. ಸಂಗಾತಿ ಜತೆ ವಾಗ್ವಾದ. ಅನವಶ್ಯ ವಿಷಯಕ್ಕೆ ಖರ್ಚು ಮಾಡದಿರಿ.
ಸಿಂಹ
ಅಸಾಧ್ಯವಾದುದನ್ನು ಸಾಽಸುವಿರಿ. ಆ ಬಗ್ಗೆ ಕಠಿಣ ಶ್ರಮ ಮುಖ್ಯ. ಕುಟುಂಬದಲ್ಲಿ ಸಣ್ಣ ವಿಷಯಕ್ಕೆ ವಾಗ್ವಾದ ನಡೆದೀತು. ತಾಳ್ಮೆಯಿರಲಿ.
ಕನ್ಯಾ
ನಿರಾಳ ದಿನ. ಒತ್ತಡ ನಿವಾರಣೆ. ಬಂಧುಗಳ ಭೇಟಿ. ಪ್ರೀತಿಯಲ್ಲಿ ಭಿನ್ನಾಭಿಪ್ರಾಯ. ಎಚ್ಚರದ ನಡೆ ಅವಶ್ಯ. ಉದ್ಯಮದಲ್ಲಿ ಧನಹಾನಿ.
ತುಲಾ
ನಿಜವಾಗಿ ನಿಮಗೆ ಬೇಕಾದುದೇನು ಎಂಬ ಬಗ್ಗೆ ಆತ್ಮವಿಮರ್ಶೆ ನಡೆಸಿ. ಗಾಳಿ ಬೀಸಿದತ್ತ ಸಾಗುವುದನ್ನು ಬಿಟ್ಟು ಭಿನ್ನ ದಾರಿ ಹಿಡಿಯಿರಿ.
ವೃಶ್ಚಿಕ
ಇತರರು ನೀಡುವ ಕಿವಿಮಾತು ಕೇಳಿ. ಇಂದಿನ ದಿನ ನಿಮ್ಮ ಜೀವನ ಬದಲಿಸಬಹುದು. ಹೊಸ ವಿಷಯ ಅರಿಯುವಿರಿ. ಸವಾಲನ್ನು ಎದುರಿಸಿ.
ಧನು
ನಿಮ್ಮ ನಡೆ ಸರಿ ಎಂದಾಗಿದ್ದರೆ ಏಕಾಂಗಿಯಾಗಿ ಎದುರಿಸಲು ಹಿಂಜರಿಕೆ ಬೇಡ. ಒತ್ತಡಕ್ಕೆ ಮಣಿಯಬೇಡಿ.
ಮಕರ
ಯಾವುದೇ ವಿಷಯದಲ್ಲಿ ನಿಮ್ಮ ಸಾಮರ್ಥ್ಯ ಪ್ರದರ್ಶನ ಮಾಡಲು ಮುಂದಾಗಿ. ಕೆಲವರ ಟೀಕೆಗೆ ಗಮನ ಕೊಡಬೇಕಾಗಿಲ್ಲ.
ಕುಂಭ
ಹೊಸ ಯೋಜನೆ ಕೈಗೆತ್ತಿಕೊಳ್ಳಲು ಸಕಾಲ. ಯಶಸ್ಸು ಸಿಗಲಿದೆ. ಮನೆಯಲ್ಲಿ ಮಾತಿನ ಚಕಮಕಿ ನಡೆದೀತು. ಸಹನೆಯಿರಲಿ.
ಮೀನ
ನಿಮ್ಮ ಪತನಕ್ಕೆ ಯತ್ನಿಸುವವರ ಮೇಲೆ ಒಂದು ಕಣ್ಣಿಡಿ. ಸಂಗಾತಿ ಜತೆಗೆ ವಾಗ್ವಾದಕ್ಕೆ ಇಳಿಯಬೇಡಿ. ಹಿರಿಯರ ಆರೋಗ್ಯಕ್ಕೆ ಗಮನ ಕೊಡಿ.



