February 28, 2026
Saturday, February 28, 2026
spot_img

ದಿನಭವಿಷ್ಯ: ಸವಾಲುಗಳ ದಿನವಾದರೂ ಸಮರ್ಥವಾಗಿ ನಿಭಾಯಿಸುವಿರಿ, ಖರ್ಚಿನ ಮೇಲೆ ನಿಗಾ ಇರಲಿ

ಮೇಷ
ನಿಮಗೆ ಸಂಬಂಧಿಸಿ ಪ್ರಮುಖ ಬದಲಾವಣೆ ಉಂಟಾದೀತು. ಹಣದ ವಿಚಾರದಲ್ಲಿ ರಿಸ್ಕ್ ತೆಗೆದು ಕೊಳ್ಳಬೇಡಿ. ಸಂಬಂಧದಲ್ಲಿ ಒಡಕು ಸಂಭವ.
ವೃಷಭ
ನಿಮ್ಮ ತಪ್ಪಿಗೆ ಇತರರನ್ನು ದೂರಬೇಡಿ. ಕಾದಿಟ್ಟ ರಹಸ್ಯವೊಂದು ಬಹಿರಂಗವಾದೀತು. ಎಲ್ಲರ ಜತೆ ಸೌಹಾರ್ದದಿಂದ ವರ್ತಿಸಿದರೆ ಒಳಿತು.
ಮಿಥುನ
ಕೆಲಸದ ಒತ್ತಡವಿದ್ದರೂ ನೀವು ವಿರಾಮ ಪಡೆಯಲು ಶಕ್ತರಾಗುವಿರಿ. ಖರ್ಚು ಅಽಕ ಮಾಡದಿರಿ. ಬಳಿಕ ಚಿಂತೆಗೆ ಕಾರಣಾದೀತು.
ಕಟಕ
ಕೆಲಸವೊಂದು ಅನಿರೀಕ್ಷಿತ ಫಲ ನೀಡಲಿದೆ. ಒತ್ತಡ ನಿವಾರಣೆ. ಬಂಧುಗಳ ಜತೆ ಆತ್ಮೀಯ ಕಾಲಕ್ಷೇಪ. ಮಕ್ಕಳ ಸಾಧನೆಯ ತೃಪ್ತಿ.
ಸಿಂಹ
ಸವಾಲುಗಳ ದಿನ. ನಿಭಾಯಿಸಲು ಸಮರ್ಥ. ಕೆಲವು ವಿಷಯಗಳಲ್ಲಿ ಸಮತೋಲನ ಸಾಧಿಸಿರಿ. ಏಕಪಕ್ಷೀಯ ಧೋರಣೆ ತಾಳದಿರಿ. ಧನವ್ಯಯ.
ಕನ್ಯಾ
ಮನೆಯವರ ಹಿತಾಸಕ್ತಿಗೆ ಹೆಚ್ಚಿನ ಗಮನ ಕೊಡಿ. ನಿಮಗೆ ಅರಿವಿಲ್ಲದೇ ಬಿಕ್ಕಟ್ಟು ಬೆಳೆಯುತ್ತಿದೆ. ಎಲ್ಲರ ಜತೆ ಸಮಾಲೋಚನೆ ನಡೆಸಿ.
ತುಲಾ
ನಿಮ್ಮ ನಿರ್ವಹಣೆ ಇಂದು ಸುಧಾರಿಸಲಿದೆ. ಅದೃಷ್ಟವೂ ಜತೆಗಿದೆ. ಕ್ಲಿಷ್ಟಕರ ಪರಿಸ್ಥಿತಿಯೊಂದು ಅಚಾನಕ್ ಪರಿಹಾರ ಕಾಣುವುದು.
ವೃಶ್ಚಿಕ
ನಿಮ್ಮ ಒಳ್ಳೆ ಕೆಲಸ ಯಾರೂ ಗಮನಿಸುತ್ತಿಲ್ಲ ಎಂಬ ಕೊರಗು ಬಿಡಿ. ಸೂಕ್ತ ಪ್ರಶಂಸೆ ಸಿಕ್ಕೇ ಸಿಗುವುದು. ಮನೆಯಲ್ಲಿ ಸೌಹಾರ್ದ ಪರಿಸರ.
ಧನು
ಕಷ್ಟವೆಂದುಕೊಂಡ ಕೆಲಸ ಸಕಾಲದಲ್ಲಿ ಮುಗಿಸುವಿರಿ. ಆತ್ಮವಿಶ್ವಾಸ ವೃದ್ಧಿ. ಮನೆಯಲ್ಲಿ ಅಸಹಕಾರ ಎದುರಿಸುವಿರಿ. ಸಹನೆಯಿಂದಿರಿ.
ಮಕರ
ಮನವನ್ನು ಕಾಡುತ್ತಿರುವ ವಿಷಯ ಸರಿಯಾಗಿ ಇತ್ಯರ್ಥ ಪಡಿಸಿ. ಅದನ್ನು ಹಾಗೇ ಬೆಳೆಯಲು ಬಿಡಬೇಡಿ. ಕೌಟುಂಬಿಕ ಸಹಕಾರ.
ಕುಂಭ
ನಿಮ್ಮ ಪಾಲಿಗೆ ಗುಣಾತ್ಮಕ ಬದಲಾವಣೆ ಉಂಟಾಗಲಿದೆ. ಮನೆಯವರ ಮಾತಿಗೆ ರೇಗದಿರಿ. ಸಮಾಧಾನದ ಪ್ರತಿಕ್ರಿಯೆ ನೀಡಿ.
ಮೀನ
ಇತ್ತೀಚೆಗೆ ಮೂಡಿದ್ದ ಕೆಲವು ಸಂಶಯಗಳಿಗೆ ಇಂದು ಪರಿಹಾರ ಸಿಗಲಿದೆ. ಮನಸ್ಸು ನಿರಾಳ. ಆರ್ಥಿಕ ಪರಿಸ್ಥಿತಿ ಉತ್ತಮ. ಖರ್ಚು ಹೆಚ್ಚಿದರೂ ಚಿಂತೆ ಕಾಡದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !