February 4, 2026
Wednesday, February 4, 2026
spot_img

ದಿನಭವಿಷ್ಯ: ಇಂದು ತುಸು ಹಿನ್ನಡೆ ಅನುಭವಿಸುವಿರಿ, ಆಹಾರದಲ್ಲಿ ಹಿತಮಿತವಿರಲಿ

ಮೇಷ
ನಿಮ್ಮ ಕರ್ತವ್ಯ ಸರಿಯಾಗಿ ನಿರ್ವಹಿಸಲು ಮರೆಯದಿರಿ. ಇಲ್ಲವಾದರೆ ಇಕ್ಕಟ್ಟಿಗೆ ಸಿಲುಕುವಿರಿ. ಹಳೆಯ ಹೂಡಿಕೆಯ ಲಾಭ ಸಿಗಲಿದೆ.
ವೃಷಭ
ಇಂದು ತುಸು ಹಿನ್ನಡೆ ಎದುರಿಸುವಿರಿ. ಆದರಿದು ತಾತ್ಕಾಲಿಕ. ತಾಳ್ಮೆಯಿಂದ ವ್ಯವಹರಿಸಿ. ಕೌಟುಂಬಿಕ ಉದ್ವಿಗ್ನತೆ ಶಮನ, ಸಾಮರಸ್ಯ.
ಮಿಥುನ
ಖಾಸಗಿ ಮತ್ತು ವೃತ್ತಿ ಬದುಕಲ್ಲಿ ಹೊಸ ಬೆಳವಣಿಗೆ. ಅದು ನಿಮಗೆ ಪೂರಕವಾಗಲಿದೆ. ಆಪ್ತರ ಆರೋಗ್ಯ ಸುಧಾರಣೆ. ಖರ್ಚು ನಿಯಂತ್ರಣ.
ಕಟಕ
ದಿನವು ನಿಮಗೆ ಪೂರಕವಾಗಿ ಸಾಗಬೇಕಾದರೆ ನಿಮ್ಮಿಂದ ಪ್ರಯತ್ನ ಅಗತ್ಯ. ಸುಮ್ಮಗೆ ಕೂತರೆ ಯಾವುದೇ ಒಳಿತಾಗದು.
ಸಿಂಹ
ನಿಮಗೆ ವಹಿಸಿದ ಕಾರ್ಯ ಸಕಾಲದಲ್ಲಿ ಪೂರೈಸುವಿರಿ. ಹಣಕಾಸು ಪರಿಸ್ಥಿತಿ ತೃಪ್ತಿಕರ. ನಿಮ್ಮ ಸಾಮರ್ಥ್ಯದ ಅನಾವರಣಕ್ಕೆ ಅವಕಾಶ.
ಕನ್ಯಾ
ಉತ್ಸಾಹದ ದಿನ. ಸಮಸ್ಯೆ ಕಳೆದು ನಿರಾಳತೆ. ಆತ್ಮೀಯರ ಜತೆ ಸಮಯ ಕಳೆಯಲು ಅವಕಾಶ. ಆಹಾರದಲ್ಲಿ ಹಿತಮಿತ ಸಾಧಿಸಿ.
ತುಲಾ
ನಿಮ್ಮ ಕಾರ್ಯಶೈಲಿ ಟೀಕೆಗೆ ಗುರಿಯಾಗಲಿದೆ. ಕುಟುಂಬದ ಜತೆ ಕ್ಷುಲ್ಲಕ ವಿಚಾರದಲ್ಲಿ ವಾದ ಮಾಡದಿರಿ. ವಿವಾಹ ಪ್ರಸ್ತಾಪ ಸಫಲತೆ ಕಾಣಲಿದೆ.
ವೃಶ್ಚಿಕ
ವ್ಯವಹಾರದಲ್ಲಿ ಹೆಚ್ಚಿನ ಪ್ರಗತಿ. ಕಾರ್ಯೋತ್ಸಾಹ ಹೆಚ್ಚು. ಕೌಟುಂಬಿಕ ಸಂತೃಪ್ತಿ. ಧಾರ್ಮಿಕ ಕಾರ್ಯದ ಹೊಣೆ ಹೆಗಲೇರಲಿದೆ.
ಧನು
ಎಲ್ಲವೂ ಇಂದು ಸುಗಮವಾಗಿ ಸಾಗುವುದು. ವಿರೋಧ ಕೊನೆಗಾಣಲಿದೆ. ದೈಹಿಕ ಸ್ವಾಸ್ಥ್ಯ ತೃಪ್ತಿಕರ. ಖರ್ಚು ನಿಯಂತ್ರಿಸುವಿರಿ.
ಮಕರ
ಪ್ರತಿ ವಿಷಯದಲ್ಲಿ ಎಚ್ಚರಿಕೆ ವಹಿಸಿರಿ. ಅನವಶ್ಯ ವಿವಾದ ಸುತ್ತಿಕೊಳ್ಳಬಹುದು. ನಡೆನುಡಿಯಲ್ಲಿ ಜಾಗ್ರತೆ ವಹಿಸಿರಿ.
ಕುಂಭ
ನಿಮ್ಮ ಸಾಧನೆ ಎಲ್ಲರ ಗಮನ ಸೆಳೆಯಲಿದೆ. ಹೂಡಿಕೆಯಿಂದ ಲಾಭ. ಆರೋಗ್ಯ ಸುಧಾರಣೆ. ಖರ್ಚು ಕಡಿಮೆ ಮಾಡಲು ಆದ್ಯ ಗಮನ ಕೊಡಿ.
ಮೀನ
ದೃಢತೆ ಹೊಂದಿದ್ದರೆ ಯಶ ಪಡೆಯುವಿರಿ. ಹಿಂಜರಿದರೆ ಹಿನ್ನಡೆ ಕಾಣುವಿರಿ. ಹಾಗಾಗಿ ಯೋಚಿಸಿ ಮುನ್ನಡೆಯಿರಿ. ಅಲರ್ಜಿ ಸಮಸ್ಯೆ ಸಂಭವ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !