March 4, 2026
Wednesday, March 4, 2026
spot_img

ದಿನಭವಿಷ್ಯ: ಕೆಲಸದಲ್ಲಿ ಸ್ವಲ್ಪ ಹೆಚ್ಚುವರಿ ಹೊಣೆ, ಅದನ್ನು ಮುಗಿಸಿ ಮೆಚ್ಚುಗೆ ಪಡೆಯುವಿರಿ

ಮೇಷ
ವೃತ್ತಿಯಲ್ಲಿ ಎಲ್ಲರ  ಸಹಕಾರ. ಕೆಲಸ ಸುಲಲಿತ. ಆರ್ಥಿಕ ಸಮಸ್ಯೆ ನಿವಾರಣೆ. ಭಾವನಾತ್ಮಕವಾಗಿ ಸಂತೋಷದ ಮನಸ್ಥಿತಿ.        
ವೃಷಭ
ಸಹೋದ್ಯೋಗಿ ನಿಮಗೆ  ತೊಂದರೆ ಸೃಷ್ಟಿಸಬಹುದು. ಸಹನೆ ಕಾಯ್ದುಕೊಳ್ಳಿ. ಹಣ ಗಳಿಕೆ ಕಷ್ಟಕರವಾಗಲಿದೆ. ಮನೆಯಲ್ಲಿ ವಾಗ್ವಾದ.         ಮಿಥುನ
ವೃತ್ತಿಯಲ್ಲಿ ಹೆಚ್ಚುವರಿ ಹೊಣೆ. ಬೇರೆ ವಿಚಾರಗಳತ್ತ ಗಮನ ಹರಿಯದು. ಹಣದ ಸಮಸ್ಯೆ ಒದಗಿದರೂ ಬಳಿಕ ಪರಿಹಾರ.      
ಕಟಕ
ಪ್ರೀತಿಪಾತ್ರರ ಜತೆ ಅಹಂ ಬಿಟ್ಟು ವರ್ತಿಸಿ. ಸಂಬಂಧ ಕೆಡಲು ಆಸ್ಪದ ಕೊಡಬೇಡಿ. ಖರ್ಚು ಅಽಕ. ತಲೆನೋವು ಕಾಡಬಹುದು.             ಸಿಂಹ
ಕೆಲ ವಿಚಾರಗಳಲ್ಲಿ ಇಂದು ಎಚ್ಚರಿಕೆಯಿಂದ ನಡಕೊಳ್ಳಿ. ಕೆಲಸದಲ್ಲಿ ಪ್ರಮಾದ, ಆಪ್ತರ ಜತೆ ಸಂಘರ್ಷ ನಡೆದೀತು. ತಾಳ್ಮೆಯ ನಡೆ ಅವಶ್ಯ. ಕನ್ಯಾ
ಪ್ರಗತಿಯ ದಿನ. ವೃತ್ತಿ ಮತ್ತು ಖಾಸಗಿ ಬದುಕಲ್ಲಿ ನಿಮಗೆ ಅನುಕೂಲಕರ ಬೆಳವಣಿಗೆ. ಅನಿರೀಕ್ಷಿತ ಖರ್ಚು ಒದಗಲಿದೆ. ಆರೋಗ್ಯ ಸುಸ್ಥಿರ.   ತುಲಾ
ಅಧಿಕ ಜವಾಬ್ದಾರಿ. ಭಾವುಕತೆ ಬದಿಗಿಟ್ಟು ಕರ್ತವ್ಯದ ಮೇಲೆ ಗಮನ ಹರಿಸಿ. ಹಣದ ವಿಚಾರದಲ್ಲಿ ತುಸು ಗೊಂದಲ ಕಾಡಲಿದೆ.             ವೃಶ್ಚಿಕ
ವೃತ್ತಿ ಕ್ಷೇತ್ರದಲ್ಲಿ ಬದಲಾವಣೆ ಆದೀತು. ಹೊಣೆ ನಿಭಾಯಿಸುವಲ್ಲಿ ಎಚ್ಚರವಿರಲಿ. ಹದ ತಪ್ಪಿದ ಮಾತು ಬೇಡ. ಸಣ್ಣ ಜಗಳ ದೊಡ್ಡದಾದೀತು. ಧನು
ಸಕಾಲದಲ್ಲಿ ನಿಮ್ಮ ಕೆಲಸ ಪೂರೈಸಲು ವಿ-ಲ. ವಾಗ್ವಾದದಿಂದ ದೂರವಿರಿ. ವ್ಯವಹಾರದಲ್ಲಿ ಹಣದ ಕೊರತೆ.  ಸಣ್ಣ ಮಟ್ಟಿನ ಆರೋಗ್ಯ ಸಮಸ್ಯೆ.            
ಮಕರ
ಕೆಲಸದಲ್ಲಿ ಅತೀವ ಶ್ರದ್ಧೆ ತೋರುವಿರಿ. ಸೂಕ್ತ ಫಲ ಪಡೆಯುವಿರಿ. ಆದರೆ ಕೆಲವರ ಕುಹಕ ಕೇಳುವಿರಿ. ಮೈಕೈ ನೋವಿನಂತಹ ಆರೋಗ್ಯ ಸಮಸ್ಯೆ.      
ಕುಂಭ
ಹೆಚ್ಚು ಒತ್ತಡ. ಕೆಲಸ ಅಽಕ. ಸಂಗಾತಿ ಜತೆಗೆ ಮಾತಿನ ಚಕಮಕಿ ನಡೆದೀತು. ಯಾವುದೋ ಹತಾಶ ಭಾವ ಕಾಡಲಿದೆ. ಧ್ಯಾನದಿಂದ ನೆಮ್ಮದಿ.    
ಮೀನ
ಆತ್ಮೀಯರ ಜತೆ ಹರ್ಷದಿಂದ ಕಾಲ ಕಳೆಯುವಿರಿ. ಹಣ ಹೂಡಿಕೆಯಿಂದ ಲಾಭ. ಆರೋಗ್ಯ ಸಮಸ್ಯೆ ನಿವಾರಣೆ, ನಿರಾಳತೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !