Wednesday, January 14, 2026
Wednesday, January 14, 2026
spot_img

ದಿನಭವಿಷ್ಯ: ಇಂದು ನಿಮ್ಮ ಮಕ್ಕಳಿಂದ ನಿಮಗೆ ಅನಿರೀಕ್ಷಿತ ಪ್ರಶಂಸೆ, ಅಪೇಕ್ಷಿತ ಖರ್ಚು ಸಾಧ್ಯತೆ

ಮೇಷ
ವಾಗ್ವಾದ, ಮುನಿಸು ಇಂದಿನ ದಿನ ನಿಮ್ಮ ಮನಸ್ಸು ಹಾಳು ಮಾಡಬಹುದು.  ಸಂಗಾತಿಗೆ ಜತೆಗೆ ಆತ್ಮೀಯತೆ ಕಾಯ್ದುಕೊಳ್ಳಿ.  
ವೃಷಭ
 ಕುಟುಂಬದಲ್ಲಿ ಅಪಸ್ವರ. ಮಕ್ಕಳ ಜತೆ ಕಿರಿಕಿರಿ. ಒತ್ತಡ ನಿಭಾಯಿಸುವ ಕಲೆ ಅರಿತುಕೊಳ್ಳಿ. ಕೋಪ ನಿಯಂತ್ರಿಸಿಕೊಳ್ಳಿ.
ಮಿಥುನ
ಅಂದುಕೊಂಡುದೇ ಒಂದು, ಆಗುವುದೇ ಇನ್ನೊಂದು. ಅಂತಹ ಪರಿಸ್ಥಿತಿ ಇಂದು ನಿಮಗೆ ಉದ್ಭವಿಸಬಹುದು. ಎದುರಿಸಲು ಸಿದ್ಧರಿರಿ.      
ಕಟಕ
ದಂಪತಿ ಮಧ್ಯೆ ಕಲಹ ಸಂಭವ. ಮಾತಿಗೆ ಮಾತು ಬೆಳೆಸದಿದ್ದರೆ ಎಲ್ಲ ಸರಿಯಾಗಲಿದೆ. ವೃತ್ತಿ ವ್ಯವಹಾರದಲ್ಲಿ ಒತ್ತಡ ಹೆಚ್ಚಬಹುದು.      
ಸಿಂಹ
ಎಂದಿಗಿಂತ ಹೆಚ್ಚು ಹೊಣೆ. ಅಸಹನೆ. ಮಾತಿನ ಮೇಲೆ ನಿಯಂತ್ರಣವೂ ಅವಶ್ಯ. ತಪ್ಪು ಮಾತು ಜಗಳಕ್ಕೆ ಕಾರಣವಾದೀತು. ದೈಹಿಕ ಬೇನೆ ಸಂಭವ.      
ಕನ್ಯಾ
 ಭಾವಾವೇಶಕ್ಕೆ ಒಳಗಾಗುವ ಸನ್ನಿವೇಶ. ಪರಿಸ್ಥಿತಿ ಸಮಾಧಾನದಿಂದ ನಿಭಾಯಿಸಿ. ಚುಚ್ಚು ಮಾತಿಗೆ ಕೋಪ ಮಾಡಿಕೊಳ್ಳಬೇಡಿ.    
ತುಲಾ
ಏನೋ ಕಾರಣಕ್ಕೆ ಅಸಮಾಧಾನ. ಕೌಟುಂಬಿಕವಾಗಿ ಹಲವಾರು ಹೊಣೆ ನಿಮ್ಮ ಮೇಲಿದೆ. ಅತ್ತ ಹೆಚ್ಚು ಗಮನ ಕೊಡಿ.
ವೃಶ್ಚಿಕ
ನಿರಾಳ ಮನಸ್ಥಿತಿ. ಜಂಜಡಗಳೆಲ್ಲ ಕಳೆದ ಭಾವ. ಬಂಧು, ಸ್ನೇಹಿತರ ಸಹಕಾರ. ಚಿಂತೆಗಳನ್ನು ಕೊಡವಿ ಹೊಸತನಕ್ಕೆ ತುಡಿಯುವಿರಿ.      
ಧನು
ನಿಮಗೆ ಪ್ರತಿಕೂಲ ಸನ್ನಿವೇಶ ಉಂಟಾದರೂ ಸಹನೆಯಿಂದ ವರ್ತಿಸಿ. ಯಾವುದೋ ವಿಚಾರದಲ್ಲಿ ನಿಮ್ಮ ನಿಲುವು ಬದಲಿಸಬೇಕಾದೀತು.
ಮಕರ
ಕೆಲವರ ಮಾತು ಮನಸ್ಸು ಚುಚ್ಚಬಹುದು. ಟೀಕೆಗೆ ಎರವಾಗುವಿರಿ. ಮನಸ್ಸು ಹಾಳು ಮಾಡಿಕೊಳ್ಳದಿರಿ. ಅವನ್ನೆಲ್ಲ ನಿರ್ಲಕ್ಷಿಸಿ.
ಕುಂಭ
ಒತ್ತಡದ ದಿನ. ಕಾರ್ಯಸಾಧನೆ ಕಷ್ಟ. ತಲೆನೋವು ಕಾಡೀತು. ಕೌಟುಂಬಿಕ ಪರಿಸರದಲ್ಲಿ ಸಮಾಧಾನ.  ಧ್ಯಾನ ಸಹಕಾರಿಯಾದೀತು.  
 ಮೀನ
ಅಸಹನೀಯ ಸನ್ನಿವೇಶ ಎದುರಿಸುವಿರಿ. ಪರಿಸ್ಥಿತಿ ಪ್ರತಿಕೂಲ. ಗುರಿ ಸಾಽಸಲು ಕಠಿಣ ಶ್ರಮ ಅವಶ್ಯ. ಪ್ರಯಾಣದಲ್ಲಿ ಅನನುಕೂಲ.  

Most Read

error: Content is protected !!