Thursday, December 11, 2025

ದಿನಭವಿಷ್ಯ: ನಿಮ್ಮ ವರ್ತನೆಯಿಂದ ಎಲ್ಲರ ಮನ ಗೆಲ್ಲುವಿರಿ, ಸಂಬಂಧ ಗಟ್ಟಿಗೊಳ್ಳಲಿದೆ

ಮೇಷ
ನಿರಾಳವಾಗಿರಲು ಅವಕಾಶ ಸಿಗದು. ಅನವಶ್ಯ ಚಿಂತೆ. ದೃಢವಾಗಿ ವರ್ತಿಸಿದರೆ ಎಲ್ಲವನ್ನು ನಿಭಾಯಿಸುವಿರಿ. ಆರೋಗ್ಯ ಸುಸ್ಥಿರ.
ವೃಷಭ
ಪ್ರತಿಕೂಲ ಪರಿಸ್ಥಿತಿ ಇದ್ದರೂ ಅದನ್ನು ನಿಮ್ಮ ಪರವಾಗಿ ಬದಲಿಸಲು ಯತ್ನಿಸಿ. ಕೌಟುಂಬಿಕ ಭಿನ್ನಾಭಿಪ್ರಾಯ ಸಂಭವ. ಪ್ರಬುದ್ಧವಾಗಿ ವರ್ತಿಸಿ.
ಮಿಥುನ
ಸಣ್ಣ ವಿಷಯ ಕೂಡಾ ಭಾವನಾತ್ಮಕ ಏರುಪೇರು ಸೃಷ್ಟಿಸಬಹುದು. ದೃಢ ಮನಸ್ಸು ಅವಶ್ಯ. ಬಂಧುಗಳ ಕಿರಿಕಿರಿ ಬಾಧಿಸಲಿದೆ.
ಕಟಕ
ಮನಸ್ಸಿನಿಂದ ಅನವಶ್ಯ ಆಲೋಚನೆ ತೊಡೆದು ಹಾಕಿ. ಇಲ್ಲದ ವಿಷಯದಲ್ಲಿ ಚಿಂತೆ ಮಾಡುವಿರಿ. ಧ್ಯಾನ ನಿಮಗೆ ಸಹಕಾರಿಯಾದೀತು.
ಸಿಂಹ
ಏನೋ ಕಳಕೊಂಡ ಭಾವನೆ. ಹತಾಶೆ. ಹಳೆಯ ಚಿಂತೆ ಮರೆತು ಮುಂದೆ ಸಾಗುವುದು ಒಳಿತು. ಒತ್ತಡದಿಂದ ತಲೆನೋವು ಬಾಧಿಸಬಹುದು.
ಕನ್ಯಾ
ನಿಮ್ಮ ಬದುಕಲ್ಲಿ ಕೆಲವು ಬದಲಾವಣೆ ಉಂಟಾದೀತು. ಗುಣಾತ್ಮಕ ಪ್ರಗತಿ. ಸಂಬಂಧ ಗಟ್ಟಿಗೊಳ್ಳಲಿದೆ. ದೈಹಿಕ ಶ್ರಮ ಅತಿಯಾಗಿಸಬೇಡಿ.
ತುಲಾ
ನಿಮ್ಮ ವರ್ತನೆಯಿಂದ ಎಲ್ಲರ ಮನ ಗೆಲ್ಲುವಿರಿ. ಪ್ರೀತಿಯಲ್ಲಿ ಯಶಸ್ಸು. ಪ್ರವಾಸ ಹೊರಟವರಿಗೆ ಪೂರಕ ವಾತಾವರಣ. ಮಕ್ಕಳಿಂದ ಸಂತೋಷ.
ವೃಶ್ಚಿಕ
ಕುಟುಂಬ, ಸ್ನೇಹಿತರ ಜತೆ ಆತ್ಮೀಯ ಕಾಲ ಕಳೆಯುವ ಅವಕಾಶ. ವೃತ್ತಿಯ ಒತ್ತಡ ಮನದೊಳಗೆ ಕೊರಗಾಗಿ ಕಾಡುತ್ತಲಿರುವುದು.
ಧನು
ಗುರಿ ಸಾಧನೆಗೆ ಪೂರಕ ದಿನ. ಸಂಬಂಧ ದಲ್ಲಿ ಒಡಕು ಮೂಡದಂತೆ ಎಚ್ಚರದಿಂದ ನಡಕೊಳ್ಳಿ. ಬಸುರಿಯರು ಆಹಾರದಲ್ಲಿ ಎಚ್ಚರ ವಹಿಸಿ.
ಮಕರ
ಬಿಡುವಿರದ ದಿನ. ಹೆಚ್ಚು ಹೊಣೆಗಾರಿಕೆ. ಸಂಬಂಧದಲ್ಲಿ ಮೂಡಿದ ಸಮಸ್ಯೆ ಬಗೆಹರಿಸಲು ಹೆಚ್ಚು ಸಮಯ ವ್ಯಯಿಸುವಿರಿ.
ಕುಂಭ
ಸಣ್ಣ ವಿಷಯಕ್ಕೂ ಅತಿರೇಕದ ಪ್ರತಿಕ್ರಿಯೆ ತೋರದಿರಿ. ಸಮಾಧಾನದ ನಡೆ ಅವಶ್ಯ. ಇತರರ ಜತೆ ಅನ್ಯೋನ್ಯತೆ ಸಾಧಿಸಿ, ಅದರಿಂದ ಕಾರ್ಯಸಿದ್ಧಿ.
ಮೀನ
ಹೊಸ ಸಮಸ್ಯೆ ಎದುರಿಸುವಿರಿ. ಕುಟುಂಬದಲ್ಲಿ ಸೌಹಾರ್ದತೆ ಕಾಪಾಡಿ. ದುಡುಕಿನಿಂದ ಪ್ರತಿಕ್ರಿಯಿಸಬೇಡಿ. ಸಂಯಮ ಅತ್ಯವಶ್ಯ.

error: Content is protected !!