January17, 2026
Saturday, January 17, 2026
spot_img

Daily Habits | ಬರಿಗಾಲಿನಲ್ಲಿ ಹುಲ್ಲಿನ ಮೇಲೆ ನಡೆಯುವ ಅಭ್ಯಾಸ ಇಟ್ಟುಕೊಂಡ್ರೆ ತುಂಬಾ ಒಳ್ಳೆದಂತೆ!

ಇಂದಿನ ವೇಗದ ಜೀವನದಲ್ಲಿ ಮಾನಸಿಕ ಶಾಂತಿ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸವಾಲಿನ ಸಂಗತಿ. ತಜ್ಞರ ಅಭಿಪ್ರಾಯದ ಪ್ರಕಾರ, ಸರಳವಾದ ಒಂದು ಚಟುವಟಿಕೆ ನಮ್ಮ ದೇಹ ಮತ್ತು ಮನಸ್ಸಿಗೆ ಸಮತೋಲನ ನೀಡಬಲ್ಲದು. ಅದು ಯಾವುದು ಎಂದರೆ ಬೆಳಗ್ಗೆ ಅಥವಾ ಸಂಜೆ ಸಮಯದಲ್ಲಿ ಬರಿಗಾಲಿನಲ್ಲಿ ಹುಲ್ಲಿನ ಮೇಲೆ ನಡೆಯುವುದು. ಈ ನೈಸರ್ಗಿಕ ಅನುಭವವು ಕೇವಲ ತಂಪಾದ ಸ್ಪರ್ಶವನ್ನು ನೀಡುವುದಲ್ಲದೆ, ಹಲವು ಆರೋಗ್ಯಕರ ಪ್ರಯೋಜನಗಳಿಗೂ ಕಾರಣವಾಗುತ್ತದೆ ಎಂದು ಸಂಶೋಧನೆಗಳು ತೋರಿಸಿವೆ.

ಒತ್ತಡ ಮತ್ತು ಆತಂಕ ಕಡಿಮೆ

ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯುವಾಗ ಪಾದದ ಹಲವು ಬಿಂದುಗಳ ಮೇಲೆ ಒತ್ತಡ ಬೀಳುತ್ತದೆ. ಇದು ದೇಹದ ನಾಡೀಮಂಡಲದ ವಿವಿಧ ಅಂಗಾಂಗಗಳಿಗೆ ಪ್ರಭಾವ ಬೀರುತ್ತದೆ. ಪರಿಣಾಮವಾಗಿ ಒತ್ತಡ ಮತ್ತು ಆತಂಕ ಕಡಿಮೆಯಾಗುತ್ತವೆ. ಇದನ್ನು ಒಂದು ನೈಸರ್ಗಿಕ ಥೆರಪಿ ಎಂದೇ ಕರೆಯಲಾಗುತ್ತದೆ.

ನಿದ್ರೆಯ ಗುಣಮಟ್ಟ ಸುಧಾರಣೆ

ರಾತ್ರಿ ನಿದ್ರೆ ಬರದೆ ಕಂಗೆಡುವವರು ಹುಲ್ಲಿನ ಮೇಲೆ ವಾಕಿಂಗ್ ಮಾಡಿದರೆ ಉತ್ತಮ ಪ್ರಯೋಜನ ದೊರೆಯುತ್ತದೆ. ಭೂಮಿಯ ನೈಸರ್ಗಿಕ ಇಲೆಕ್ಟ್ರಾನ್‌ಗಳನ್ನು ದೇಹ ಹೀರಿಕೊಳ್ಳುವುದರಿಂದ ಮೆಲಾಟೊನಿನ್ ಉತ್ಪಾದನೆ ಹೆಚ್ಚುತ್ತದೆ. ಇದು ನಿದ್ರೆಯ ಗುಣಮಟ್ಟ ಸುಧಾರಿಸಲು ಸಹಕಾರಿಯಾಗುತ್ತದೆ.

ಮನಸ್ಥಿತಿ ಮತ್ತು ಭಾವನಾತ್ಮಕ ಸಮತೋಲನ

ದೈನಂದಿನ ಜೀವನದಲ್ಲಿ ಒತ್ತಡ, ಕೋಪ, ಅಸಮಾಧಾನ ಮುಂತಾದ ಭಾವನೆಗಳು ಸಾಮಾನ್ಯ. ಹುಲ್ಲಿನ ಮೇಲೆ ನಡೆದು ಬಂದ ಬಳಿಕ ಮನಸ್ಸಿಗೆ ನಿರಾಳತೆ ದೊರೆತು ಮೂಡ್ ಸದಾ ಉಲ್ಲಾಸದಿಂದ ಕೂಡಿರುತ್ತದೆ. ಭಾವನಾತ್ಮಕ ಸಮತೋಲನ ಕಾಪಾಡಿಕೊಳ್ಳಲು ಇದು ಪರಿಣಾಮಕಾರಿ ಮಾರ್ಗವೆಂದು ಪರಿಗಣಿಸಲಾಗಿದೆ.

ದೇಹಕ್ಕೆ ನೈಸರ್ಗಿಕ ಮಸಾಜ್

ಪಾದದ ಕೆಳಭಾಗದಲ್ಲಿ ಅನೇಕ ನರ್ಸ್ ಎಂಡ್‌ಗಳು ಇವೆ. ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯುವುದರಿಂದ ಅವುಗಳ ಮೇಲೆ ನೈಸರ್ಗಿಕ ಒತ್ತಡ ಬೀಳುತ್ತದೆ. ಇದರಿಂದ ಪಾದಕ್ಕೆ ಮಸಾಜ್ ಆದಂತೆ ಪರಿಣಾಮ ಉಂಟಾಗುತ್ತದೆ. ರಕ್ತಸಂಚಾರ ಸುಧಾರಣೆಗೂ ಇದು ಸಹಾಯ ಮಾಡುತ್ತದೆ.

ದೇಹ ಮತ್ತು ಪ್ರಕೃತಿಯ ಸಂಪರ್ಕ

ಹುಲ್ಲಿನ ಮೇಲೆ ನಡೆಯುವುದು ದೇಹವನ್ನು ನೇರವಾಗಿ ಪ್ರಕೃತಿಯೊಂದಿಗೆ ಸಂಪರ್ಕಿಸುತ್ತದೆ. ಇದು ನವಚೈತನ್ಯವನ್ನು ನೀಡುತ್ತದೆ. ದಿನವಿಡೀ ಕೆಲಸದ ಒತ್ತಡದಿಂದ ಬಾಧಿತರಾಗಿರುವವರಿಗೆ ಇದು ಪುನಃಶಕ್ತಿ ತುಂಬುವ ಮಾರ್ಗವಾಗಿದೆ.

Must Read

error: Content is protected !!