Thursday, October 23, 2025

ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ನೋಡಿ ತಿಳಿದುಕೊಳ್ಳಿ

ಮೇಷ
ವೈರಿಗಳು ನಿಮ್ಮ ಸುತ್ತ ಇದ್ದಾರೆ. ಅವರನ್ನು ಗುರುತಿಸುವುದು ಮುಖ್ಯ. ಅಂತಿಮವಾಗಿ ಮೇಲುಗೈ ನಿಮ್ಮದೆ. ಪೂರಕ ಸಮಯ ಬೇಗನೆ ಬರಲಿದೆ.
ವೃಷಭ
ಕೌಟುಂಬಿಕ ವ್ಯವಹಾರ ಆದ್ಯತೆ ಪಡೆಯಲಿದೆ. ದಾಪುಗಾಲು ಇಡಲು ಹೋಗದಿರಿ, ಒಂದೊಂದೆ ಹೆಜ್ಜೆ ಮುನ್ನಡೆಯಿರಿ.
ಮಿಥುನ
ಸವಾಲನ್ನು ನೇರ ಎದುರಿಸುವುದು ನಿಮ್ಮ ಜಾಯಮಾನ. ಆದರೆ ದುಡುಕಬೇಡಿ. ಕಾದು ನೋಡಿ, ಸುಲಭ ದಾರಿ ಹೊಳೆಯಬಹುದು.
ಕಟಕ
ಕೆಲವರು ತಮ್ಮ ಲಾಭಕ್ಕೆ ನಿಮ್ಮನ್ನು ಬಳಸಿಕೊಳ್ಳುವರು. ಸದ್ಯಕ್ಕೆ ಅವರನ್ನು ಎದುರು ಹಾಕಿಕೊಳ್ಳಬೇಡಿ. ಜಾಣ್ಮೆಯಿಂದ ನಿಭಾಯಿಸಿ.
ಸಿಂಹ
ಜೀವನದ ಸೌಂದರ್ಯ ಅನುಭವಿಸಿ. ಎಲ್ಲದಕ್ಕೂ ಕೊರಗುತ್ತಾ ಕೂರಬೇಡಿ. ಕುಟುಂಬ ಸದಸ್ಯರ ಆನಂದದಲ್ಲಿ ಪಾಲ್ಗೊಳ್ಳಿ.
ಕನ್ಯಾ
ಭಾವುಕರಾಗುವ ಪ್ರಸಂಗ ಉಂಟಾದೀತು. ಆದರೆ ದುಡುಕಿನಿಂದ ಪ್ರತಿಕ್ರಿಯಿಸಬೇಡಿ. ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿರಿ.
ತುಲಾ
ವೃತ್ತಿಯಲ್ಲಿ ಬಿಡುವಿಲ್ಲದ ದಿನ. ಕುಟುಂಬದ ಕಡೆ ಗಮನ ಕೊಡಲಾಗದು. ಅವರ ಭಾವನೆಗೂ ಪ್ರತಿಸ್ಪಂದಿಸಿ. ಆರ್ಥಿಕ ಉನ್ನತಿ.
ವೃಶ್ಚಿಕ
ಆಪ್ತರೊಂದಿಗೆ ಆತ್ಮೀಯ ಕಾಲಕ್ಷೇಪ. ಸ್ನೇಹ ಸಂಬಂಧ ಪ್ರೀತಿಗೆ ತಿರುಗಬಹುದು. ನಿಮ್ಮ ಉದ್ದೇಶ ಈಡೇರುವ ಘಳಿಗೆ ಸನ್ನಿಹಿತವಾಗಿದೆ.
ಧನು
ಇಬ್ಬಂದಿತನ ಕಾಡಲಿದೆ. ಎರಡು ವಿಷಯಗಳು ವಿಭಿನ್ನ ದಿಕ್ಕಿಗೆ ಎಳೆಯಲಿದೆ. ಯೋಚಿಸಿ ಸಮತೋಲಿನ ನಿರ್ಧಾರ ತಾಳಬೇಕು.
ಮಕರ
ಇತರರು ಒಡ್ಡುವ ಆಮಿಷಕ್ಕೆ ಬಲಿಯಾಗದಿರಿ. ಬಂಧುಗಳ ಹಿತಾಸಕ್ತಿ ಗಮನಿಸಿ. ಹಣದ ಮೋಹ ತಪ್ಪು ದಾರಿಗೆ ಎಳೆದೀತು, ಎಚ್ಚರದಿಂದಿರಿ.
ಕುಂಭ
ವಿರಾಮ ಪಡೆಯಲು ಸದವಕಾಶ. ಕೆಲದಿನಗಳ ಒತ್ತಡದಿಂದ ಹೊರಬನ್ನಿ. ಸಾಮಾಜಿಕ ಕಾರ್ಯದಲ್ಲಿ ಸಂತೋಷ ಪಡೆಯುವಿರಿ.
ಮೀನ
ಗ್ರಹಗತಿ ಪೂರಕ. ಮನೆಯಲ್ಲಿ ಸಂತೋಷದ ವಾತಾವರಣ. ಹಳೆಯ ಸ್ನೇಹಿತರ ಭೇಟಿ. ಖರ್ಚು ಹೆಚ್ಚಿದರೂ ಅದು ನಿಮಗೆ ಬೇಸರ ತರದು.

error: Content is protected !!