Monday, January 12, 2026

ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ನೋಡಿ ತಿಳಿದುಕೊಳ್ಳಿ

ಮೇಷ
 ಪ್ರೀತಿಪಾತ್ರರನ್ನು ಕಡೆಗಣಿಸುವುದು ವಿರಸ ಶಮನಕ್ಕೆ ಮಾರ್ಗವಲ್ಲ. ಮಾತುಕತೆ ಮುಖ್ಯ. ಆಪ್ತ ವಲಯದಲ್ಲಿ ವೃಥಾ ಆರೋಪ ಹೊರಿಸದಿರಿ.
ವೃಷಭ
ಮಾತಿನಲ್ಲಿ ಹದವಿರಲಿ. ವಾಗ್ವಾದ ನಡೆದೀತು. ವೃತ್ತಿಯಲ್ಲಿ ಒತ್ತಡ ಹೆಚ್ಚು. ಆದರೆ ನಿಮ್ಮ ಕಾರ್ಯಕ್ಕೇನೂ ಬಾಧೆ ಬರಲಾರದು.        
ಮಿಥುನ
ವೈದ್ಯಕೀಯ  ಖರ್ಚು. ಆಹಾರದಲ್ಲಿ ಪಥ್ಯ ಕಾಯ್ದುಕೊಳ್ಳಿ. ಆಪ್ತರ ಕೆಲವು ಮಾತಿನಿಂದ ನೋವು ಉಂಟಾದೀತು.      
ಕಟಕ
ನಿಮ್ಮ ಕೆಲಸಕ್ಕೆ ಅಡ್ಡಿ ಬರಲಿದೆ. ಮಾನಸಿಕ ದೃಢತೆ ಅವಶ್ಯ. ಸಣ್ಣ ಹಿನ್ನಡೆಗೆ ಹಿಂಜರಿಯದಿರಿ.   ಅನವಶ್ಯ ವಾಗ್ವಾದದಲ್ಲಿ ಒಳಗೊಳ್ಳದಿರಿ.
ಸಿಂಹ
ಹಳೆ ಹೂಡಿಕೆಯ ಲಾಭ ಸಿಗಲಿದೆ. ಆರ್ಥಿಕ ಸುಸ್ಥಿರತೆ. ವ್ಯವಹಾರದಲ್ಲಿ ಪೈಪೋಟಿ ಎದುರಾದೀತು.  ಆರೋಗ್ಯದಲ್ಲಿ ಲಘು ಸಮಸ್ಯೆ ಕಾಣಿಸಬಹುದು.
ಕನ್ಯಾ
ಕೆಲಸದಲ್ಲಿ ತಪ್ಪು ಘಟಿಸಬಹುದು. ನೆಗೆಟಿವ್ ಚಿಂತನೆ ಮನದಿಂದ ಹೊಡೆದೋಡಿಸಿ. ಇಷ್ಟದೇವರ ಪ್ರಾರ್ಥನೆ
ಎಲ್ಲ ಸರಿಯಾಗಿಸಲಿದೆ.
ತುಲಾ
ಸಮಸ್ಯೆಗೆ ಪರಿಹಾರ ಕಾಣುವ ಸಂಕೇತ ತೋರುತ್ತಿದೆ. ಹೂಡಿಕೆಗೆ ಮುನ್ನ ಪರಿಣತರ ಸಮಾಲೋಚನೆ ನಡೆಸಿ. ಕೌಟುಂಬಿಕ ಸಮಾಧಾನ.            
ವೃಶ್ಚಿಕ
 ಅತಿಯಾದ ಭಾವುಕತೆ ಮನಸ್ಸಿಗೆ ನೋವು ತಂದೀತು. ಪ್ರಾಕ್ಟಿಕಲ್ ಧೋರಣೆ ಒಳಿತು. ಆರ್ಥಿಕ ಉನ್ನತಿಗೆ ತುಸು ಅಡ್ಡಿ ಬರಬಹುದು.  
ಧನು
ಉದ್ದೇಶಿತ  ವ್ಯವಹಾರದಲ್ಲಿ ಯಶಸ್ಸಿನ ಸಂಕೇತ ತೋರಲಿದೆ. ವ್ಯಾಜ್ಯದಲ್ಲಿ  ಪೂರಕ  ಬೆಳವಣಿಗೆ. ಕೌಟುಂಬಿಕ ಬಿಕ್ಕಟ್ಟು ನಿವಾರಣೆ.  
ಮಕರ
ನಿಮ್ಮ ಆದ್ಯತೆ ಅರಿತು ವ್ಯವಹರಿಸಿ. ಕ್ಷುಲ್ಲಕ ವಿಷಯದಲ್ಲಿ ಶಕ್ತಿಹರಣ ಮಾಡದಿರಿ. ಖಾಸಗಿ ಸಮಸ್ಯೆಗೆ ಪರಿಹಾರ. ಮಾನಸಿಕ ನಿರಾಳತೆ.    
ಕುಂಭ
ಶೀತ ಸಮಸ್ಯೆಗೆ ತುತ್ತಾಗದಂತೆ ಎಚ್ಚರ ವಹಿಸಿ. ವ್ಯವಹಾರದಲ್ಲಿ ಅತಿವಿಶ್ವಾಸ ಪ್ರತಿಕೂಲವೂ ಆದೀತು. ನಿಮ್ಮ ಎಚ್ಚರಿಕೆಯಲ್ಲಿ ಇರಬೇಕು.
 ಮೀನ
 ಸುಗಮ ದಿನ. ವ್ಯವಹಾರದಲ್ಲಿ ಸ-ಲತೆ. ಅನಿರೀಕ್ಷಿತ ಧನ ಪ್ರಾಪ್ತಿ. ಬಸುರಿಯರು ಪಥ್ಯದಲ್ಲಿ ಎಚ್ಚರ ವಹಿಸಿ. ಹೊಟ್ಟೆ ಕೆಡದಂತೆ ನೋಡಿಕೊಳ್ಳಿ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!