Saturday, December 27, 2025

ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ನೋಡಿ ತಿಳಿದುಕೊಳ್ಳಿ

ಮೇಷ
ದಿನದ ಆರಂಭ ಉತ್ಸಾಹಹೀನತೆ. ದಿನ ಕಳೆದಂತೆ ಉತ್ಸಾಹ ತುಂಬುವ ಬೆಳವಣಿಗೆ. ಕೆಲ ವ್ಯಕ್ತಿಗಳ ಕಿರಿಕಿರಿ ನಿವಾರಣೆಯಾಗಲಿದೆ.
ವೃಷಭ
ಆಹಾರದ ವಿಷಯದಲ್ಲಿ ಜಾಗ್ರತೆ ಇರಲಿ. ಆರೋಗ್ಯ ಕೆಡಿಸಿಕೊಳ್ಳಬೇಡಿ. ಕುಟುಂಬದಲ್ಲಿ ಸಣ್ಣಪುಟ್ಟ ಮನಸ್ತಾಪ ಸಂಭವ.  
ಮಿಥುನ
ಯಾವುದೇ ಕಾರ್ಯವನ್ನು ಯೋಚಿಸಿ ನಡೆಸಿ. ಖರೀದಿಯಲ್ಲೂ ಎಚ್ಚರವಿರಲಿ. ಕಿಸೆ ಖಾಲಿಯಾದೀತು.
ಕಟಕ
ಕೌಟುಂಬಿಕ ಸಮಸ್ಯೆ. ಅದನ್ನು ಪರಿಹರಿಸಲು ಸಂಯಮದ ಹೆಜ್ಜೆಯಿಡಿ. ವೃತ್ತಿ ವ್ಯವಹಾರದಲ್ಲಿ ಹಿನ್ನಡೆ ಉಂಟಾದೀತು.  ಸಹಕಾರ ಪಡೆಯಿರಿ.
ಸಿಂಹ
ನಿಮ್ಮ ದೈನಂದಿನ ಕಾರ್ಯ ಪೂರೈಸಲು  ಗಮನ ಕೊಡಿ. ನಿಮಗೆ ಸಂಬಂಽಸದ ವಿಚಾರಕ್ಕೆ ತಲೆ ಕೆಡಿಸಿಕೊಳ್ಳಬೇಡಿ. ಸಂಘರ್ಷಕ್ಕೆ ಇಳಿಯದಿರಿ.
ಕನ್ಯಾ
ಪ್ರಮುಖ ಕಾರ್ಯ ಸಿದ್ಧಿ. ಮಾನಸಿಕ ಗೊಂದಲ ನಿವಾರಣೆ. ಆರೋಗ್ಯದ ಕುರಿತಾದ ಚಿಂತೆ ಪರಿಹಾರ. ಬಂಧು ವಿರಸ ಶಮನವಾಗಲಿದೆ.
ತುಲಾ
ಭವಿಷ್ಯದ ದೊಡ್ಡ ಯೋಜನೆ ಕಾರ್ಯಗತ ಮಾಡಲು ಹಿಂಜರಿಕೆ ಬೇಡ. ನಿಧಾನ ಯಶಸ್ಸು ಸಿಗಲಿದೆ. ಚಾಡಿ ಮಾತು ನಂಬಲು ಹೋಗಬೇಡಿ.  
ವೃಶ್ಚಿಕ
 ದುಸ್ಸಾಹಸಕ್ಕೆ ಮುಂದಾಗಬೇಡಿ. ಎಚ್ಚರ ವಹಿಸಿ. ಉದ್ಯೋಗದಲ್ಲಿ ಕಿರಿಕಿರಿ. ಕೆಲವರ  ಅಸಹಕಾರ. ಮನೆಯಲ್ಲಿ ಸೌಹಾರ್ದ ಪರಿಸರ.
ಧನು
ಮನಸ್ಸು ವಿಚಲಿತ ಆಗುವ ಬೆಳವಣಿಗೆ ನಡೆದೀತು. ಎಚ್ಚರಿಕೆಯ ಹೆಜ್ಜೆಯಿಡಿ. ಆರ್ಥಿಕವಾಗಿ ಸಣ್ಣ ಹಿನ್ನಡೆ. ಬಂಧುಗಳ ಜತೆ ವಿರಸವಾದೀತು.  
ಮಕರ
ಏಕಕಾಲದಲ್ಲಿ ವಿವಿಧ ಬಗೆಯ ಚಿಂತೆ ಕಾಡಬಹುದು. ವಿಭಿನ್ನ ಪರಿಸ್ಥಿತಿಗಳಿಗೆ ಹೊಂದಿ ಕೊಂಡು ನಡೆಯುವುದೇ ಸೂಕ್ತ. ಧನವ್ಯಯ ಅಽಕ.  
ಕುಂಭ
ವಿವಿಧ ವಿಷಯದಲ್ಲಿ  ಒತ್ತಡ ಎದುರಿಸುವಿರಿ.  ಖಾಸಗಿ ಬದುಕಿನ ಮೇಲೆ ಪರಿಣಾಮ ಬೀರಲಿದೆ. ಉದ್ವಿಗ್ನಗೊಳ್ಳದೆ ಎಚ್ಚರಿಕೆಯ ಹೆಜ್ಜೆಯಿಡಿ.  
 ಮೀನ
ನಿಮ್ಮ ಕಾಳಜಿಯ ವಿಷಯಕ್ಕೆ ಗಮನ ಹರಿಸಿ. ಉಳಿದೆಲ್ಲ ವಿಚಾರ ಬಿಡಿ. ನಿಮ್ಮ ವರ್ತನೆಯಲ್ಲಿ ಬದಲಾವಣೆ ತರಬೇಕಾದ ಪ್ರಸಂಗ ಬಂದೀತು.

error: Content is protected !!