ಮೇಷ
ವೃತ್ತಿಯಲ್ಲಿ ಏರುಪೇರಿನ ಪರಿಸ್ಥಿತಿ. ಪ್ರಯತ್ನ ವಿಫಲವಾದರೂ ಕೈಬಿಡಬೇಡಿ. ಕುಟುಂಬ ದಲ್ಲಿ ಆರೋಗ್ಯ ಸಮಸ್ಯೆ. ಖರ್ಚು ಹೆಚ್ಚಳ.
ವೃಷಭ
ಸಹನೆ ಕೆಡಿಸುವ ಬೆಳವಣಿಗೆ. ಆದರೂ ತಾಳ್ಮೆಯಿಂದ ವರ್ತಿಸಿ. ನಿಮ್ಮ ಕಾರ್ಯಕ್ಕೆ ಕೆಲವರ ಅಡ್ಡಿ. ಕೌಟುಂಬಿಕ ಬಿಕ್ಕಟ್ಟು ಬೆಳೆಸದಿರಿ. ಪರಿಹರಿಸಿ.
ಮಿಥುನ
ವೃತ್ತಿಯಲ್ಲಿ ಉತ್ತೇಜನಕಾರಿ ಪರಿಸ್ಥಿತಿ. ಬಂಧುಗಳ ಜತೆ ವಿನಯದಿಂದ ವರ್ತಿಸಿ. ಶೇರು ಹೂಡಿಕೆ ಇಂದು ಬೇಡ, ಕಾದು ನೋಡಿ.
ಕಟಕ
ನಿಮ್ಮ ನಿರೀಕ್ಷೆ ಇಂದು ಸಾಕಾರವಾಗದು. ನಿರಾಶೆ ಉಂಟಾದೀತು. ಅತಿ ಒತ್ತಡ ಆರೋಗ್ಯದ ಮೇಲೆ ಪರಿಣಾಮ. ಇತರರಿಗಾಗಿ ಹಣ ವ್ಯಯಿಸುವ ಪ್ರಸಂಗ.
ಸಿಂಹ
ಸುಲಭ ಕೆಲಸವೂ ಕಠಿಣವಾದೀತು. ಒತ್ತಡ ಹೆಚ್ಚಳ. ಮನೆಯವರ ಜತೆ ಸಹನೆಯಿಂದ ವರ್ತಿಸಿ. ಧನವ್ಯಯ ನಿಯಂತ್ರಣ. ಇದರಿಂದ ತುಸು ನಿರಾಳತೆ.
ಕನ್ಯಾ
ಇತರರ ಜತೆ ವ್ಯವಹಾರದಲ್ಲಿ ನಿಮ್ಮ ನಿಲುವನ್ನು ಸ್ಪಷ್ಟಪಡಿಸಿ. ನಿಮ್ಮ ಬಗ್ಗೆ ತಪ್ಪಭಿಪ್ರಾಯ ಮೂಡದಂತೆ ಎಚ್ಚರ ವಹಿಸಿ. ಧನಪ್ರಾಪ್ತಿ.
ತುಲಾ
ಮಾನಸಿಕ ಮತ್ತು ಭಾವನಾತ್ಮಕ ದೃಢತೆ ಕಾಯ್ದುಕೊಳ್ಳಿ. ಏಕೆಂದರೆ ಅಂತಹ ಪರಿಸ್ಥಿತಿ ಇಂದು ನಿರ್ಮಾಣವಾದೀತು. ವೃತ್ತಿಯಲ್ಲಿ ಉನ್ನತಿ.
ವೃಶ್ಚಿಕ
ಎಲ್ಲರ ಗಮನ ಸೆಳೆಯುವ ನಿರ್ವಹಣೆ. ಆದರೂ ಮನದೊಳಗೆ ಅತೃಪ್ತಿ. ಇತರರ ಜತೆ ಹೋಲಿಕೆ ಮಾಡಿಕೊಳ್ಳಬೇಡಿ. ಬಂಧುಗಳ ಸಹಕಾರ.
ಧನು
ವ್ಯವಹಾರ ಸುಗಮ. ಅಡ್ಡಿಗಳ ನಿವಾರಣೆ. ಮನೆಯ ಕಷ್ಟವೊಂದು ಪರಿಹಾರ ಕಾಣಲಿದೆ. ಆತ್ಮೀಯರು ನೆರವಿಗೆ ಬರುವರು.
ಮಕರ
ಕುಟುಂಬ ಸದಸ್ಯರ ಕಾಳಜಿಗೆ ಗಮನ ಕೊಡಿ. ವೃತ್ತಿ ಒತ್ತಡದಲ್ಲಿ ಅದನ್ನು ಮರೆಯಬೇಡಿ. ಟೀಕೆ ಕೇಳಿಬಂದರೂ ಅದರತ್ತ ಗಮನ ಕೊಡಬೇಡಿ.
ಕುಂಭ
ಸಣ್ಣಪುಟ್ಟ ವಾಗ್ವಾದ ನಡೆಯುವುದು ಸಹಜ. ಆದರೆ ದ್ವೇಷ ಬೇಡ. ಸಹೋದ್ಯೋಗಿಗಳ ಜತೆ ಸಹಕಾರದಿಂದ ವರ್ತಿಸಿ. ಕೌಟುಂಬಿಕ ಸಮಾಧಾನ.
ಮೀನ
ನಿಮ್ಮ ಯೋಜನೆಗೆ ಸೂಕ್ತ ಬೆಂಬಲ ಸಿಗಲಿದೆ. ವೃತ್ತಿಯಲ್ಲಿ ತೃಪ್ತಿಕರ ಬೆಳವಣಿಗೆ. ಹಣದ ಪರಿಸ್ಥಿತಿ ಸಮಾಧಾನಕರ. ಅಲರ್ಜಿ ಸಂಬಂಧ ಸಮಸ್ಯೆ ಸಂಭವ.



