Saturday, September 6, 2025

ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ

ಮೇಷ
 ಪ್ರಯತ್ನ ಪಡಿ, ಇಷ್ಟಾರ್ಥ ಸಿದ್ಧಿಯಾಗಲಿದೆ. ಆರಂಭಿಕ ವೈ-ಲ್ಯಕ್ಕೆ ಹಿಂಜರಿಯದಿರಿ.  ಖಾಸಗಿ   ಬದುಕಲ್ಲಿ ಅಸಹನೆ, ಅಸಮಾಧಾನ.
ವೃಷಭ
ಉದ್ಯೋಗ ಕ್ಷೇತ್ರದಲ್ಲಿ ಪೂರಕ ಬೆಳವಣಿಗೆ. ಕಾರ್ಯಸಿದ್ಧಿ. ಆರ್ಥಿಕ ಸ್ಥಿತಿ ತೃಪ್ತಿಕರ.  ಕೌಟುಂಬಿಕ ವಿರಸ ಶಮನ, ಸೌಹಾರ್ದ ವಾತಾವರಣ.
ಮಿಥುನ
 ಕುಟುಂಬ ಸದಸ್ಯರ ಜತೆ ವಿರಸ. ಆತುರದ ಪ್ರತಿಕ್ರಿಯೆ ತೋರದಿರಿ.   ಹೊಂದಾಣಿಕೆಯಿಂದ ವ್ಯವಹರಿಸಿ. ವದಂತಿಗೆ ಕಿವಿಗೊಡದಿರಿ.      
ಕಟಕ
 ವೃತ್ತಿ ಮತ್ತು ಖಾಸಗಿ ಬದುಕಲ್ಲಿ ಸಮನ್ವಯ. ಹಾಗಾಗಿ ಚಿಂತೆ ಬಾಽಸದು.  ಹಣಕಾಸು ಪರಿಸ್ಥಿತಿ ತೃಪ್ತಿಕರ. ಪ್ರೀತಿಯಲ್ಲಿ ವಿಘ್ನ ಕಂಡುಬಂದೀತು.      
ಸಿಂಹ
  ಭವಿಷ್ಯದ ಬಗ್ಗೆ ಯೋಚಿಸುವ ಕಾಲ ಬಂದಿದೆ. ಖರ್ಚುವೆಚ್ಚ ನಿಯಂತ್ರಿಸಿ. ವೃತ್ತಿಯಲ್ಲಿ ವಾಗ್ವಾದ ತಪ್ಪಿಸಿ. ಏಕಾಂಗಿಗಳಿಗೆ ವೈವಾಹಿಕ ಭಾಗ್ಯ.        
ಕನ್ಯಾ
 ಕೌಟುಂಬಿಕ ಹಿತಾಸಕ್ತಿಗೆ ಆದ್ಯತೆ ಕೊಡಿ. ಉದ್ಯಮದಲ್ಲಿ ತುಸು ಹಿನ್ನಡೆ ಸಂಭವ. ಆರ್ಥಿಕ ಒತ್ತಡ. ಮನಶ್ಯಾಂತಿ ಕೆಡುವ ಪ್ರಸಂಗ ಸಂಭವ.      
ತುಲಾ
ಸಮಸ್ಯೆಗೆ ಪರಿಹಾರ ಇದ್ದೇ ಇದೆ. ಸರಿಯಾದ ಜಾಗದಲ್ಲಿ ಹುಡುಕಬೇಕು.    ಕೌಟುಂಬಿಕ ಕ್ಲೇಶ ಪರಿಹಾರ. ಮಿತ್ರರಿಂದ ಸಹಕಾರ.
ವೃಶ್ಚಿಕ
ಕಳೆದು ಹೋದುದರ ಕುರಿತು ಕೊರಗುತ್ತಾ ಕೂರದಿರಿ. ಕೆಲ ವಿಷಯ ಮರೆಯುವುದೇ ಉತ್ತಮ. ಇರುವ ಪರಿಸ್ಥಿತಿಯಲ್ಲಿ ಸಮಾಧಾನ ತಾಳಿರಿ.    
ಧನು
ನಿಮ್ಮ ಕೆಲಸದ ಮೇಲೆ ಹೆಚ್ಚು ಗಮನ ಇರಲಿ. ಇತರ ಕ್ಷುಲ್ಲಕ ವಿಷಯಗಳತ್ತ ಗಮನ ಹರಿಸದಿರಿ. ಸಾಂಸಾರಿಕ ಕಲಹ, ವಾಗ್ವಾದ ಸಂಭವ.  
ಮಕರ
ಪ್ರಮುಖ ವಿಷಯ ನಿಮ್ಮನ್ನು ದ್ವಂದ್ವದಲ್ಲಿ ಕೆಡವಲಿದೆ. ಪರಿಸ್ಥಿತಿಗೆ ತಕ್ಕಂತೆ ವ್ಯವಹರಿಸಿ. ಕೌಟುಂಬಿಕ ಸೌಹಾರ್ದ, ಸಹಕಾರ ಲಭ್ಯ.        
ಕುಂಭ
ಇತ್ತೀಚೆಗೆ ಮೂಡಿದ್ದ ಸಂಕಷ್ಟ ಪರಿಹಾರ. ಕುಟುಂಬ ಮತ್ತು ಸ್ನೇಹಿತರ ಜತೆ ಸಂಪರ್ಕವಿರಲಿ. ಉದ್ಯೋಗ ಬದಲಾವಣೆ ಒಳಿತು ತಾರದು.    
 ಮೀನ
ಆರ್ಥಿಕ ಉನ್ನತಿ. ವೃತ್ತಿಯಲ್ಲಿ ಶುಭ ಬೆಳವಣಿಗೆ. ಕುಟುಂಬದಲ್ಲಿ ಹಿರಿಯರಿಗೆ ಅನಾರೋಗ್ಯ.   ಹಳೆಯ ವಿಷಯವೊಂದು ಬೇಸರ ತರಲಿದೆ.    

ಇದನ್ನೂ ಓದಿ