February 3, 2026
Tuesday, February 3, 2026
spot_img

ದಿನಭವಿಷ್ಯ: ಕಹಿಯಾದರೂ ಸತ್ಯವನ್ನೊಪ್ಪಿ ಮುನ್ನಡೆಯಿರಿ.. ಸಾಧನೆಯತ್ತ ಗಮನವಿರಲಿ!

ಮೇಷ.
ಕೆಲವು ದಿನಗಳ ಗೊಂದಲ ಪರಿಹಾರ ಕಾಣಲಿದೆ. ಕೆಲವು ಕಹಿಸತ್ಯ ಗೋಚರಿಸಲಿದೆ. ದೃಢ ಚಿತ್ತ ಅವಶ್ಯ. ಭಾವುಕತೆ ನಿಯಂತ್ರಿಸಿ.
ವೃಷಭ
ಮನಸ್ಸು ಉಲ್ಲಸಿತ ಗೊಳ್ಳುವ ಬೆಳವಣಿಗೆ. ಚಿಂತೆಯೊಂದು ಪರಿಹಾರ. ಏಕಾಂಗಿತನ ಬಿಟ್ಟು ಇತರರ ಜತೆ ಬೆರೆಯಲು ಕಲಿಯಿರಿ. ಧನಪ್ರಾಪ್ತಿ.      
ಮಿಥುನ
ನಿಮ್ಮ ದುಡುಕು, ಕೋಪದಿಂದ ಆತ್ಮೀಯ ಸಂಬಂಧ ಹಾಳಾದೀತು. ಕೆಲಸದ ಒತ್ತಡ ಕಡಿಮೆ ಮಾಡಲು ಯತ್ನಿಸಿ. ಅವಶ್ಯ ನೆರವು ಪಡೆಯಿರಿ.  
ಕಟಕ
ನಿಮ್ಮ ಕೆಲಸದಲ್ಲಿ ನಿಷ್ಠೆಯಿರಲಿ. ಟೀಕೆ ಮಾಡುವವರನ್ನು ನಿರ್ಲಕ್ಷಿಸಿ. ಸಮಸ್ಯೆಗೆ ಸುಲಭ ಪರಿಹಾರಕ್ಕಿಂತ ಶಾಶ್ವತ ಪರಿಹಾರವಿರಲಿ.    
ಸಿಂಹ
ನಿಮ್ಮ ಕಾರ್ಯದ ಬಗ್ಗೆ ಉದಾಸೀನ ಬೇಡ. ಕಾಳಜಿಯಿಂದ ನಿರ್ವಹಿಸಿ. ಕೌಟುಂಬಿಕ ವಾಗ್ವಾದ ತಾರಕಕ್ಕೆ ಏರಲು ಅವಕಾಶ ಕೊಡಬೇಡಿ. ತಾಳ್ಮೆಯಿರಲಿ.
ಕನ್ಯಾ
ಹೊಸ ವಿಚಾರ ಗಳತ್ತ ಮನಸ್ಸು ಹರಿಯ ಬಹುದು. ಒತ್ತಡದಿಂದ ತುಸು ಮುಕ್ತಿ ಸಿಗಲಿದೆ. ಹಣದ ವ್ಯವಹಾರ ತುಸು ಕಠಿಣವೆನಿಸಬಹುದು.
ತುಲಾ
ಹೊರಗೆ ಎಲ್ಲ ಶಾಂತವಾಗಿದ್ದರೂ ಮನದೊಳಗೆ ಅಶಾಂತಿ ಕಾಡಬಹುದು. ಬಿಕ್ಕಟ್ಟು ಕೂಡಲೇ ಪರಿಹರಿಸಿ, ಹಾಗೇ ಬಿಡಬೇಡಿ.    
ವೃಶ್ಚಿಕ
ವಿನಯ ಒಳ್ಳೆಯದು. ಆದರೆ ಇತರರ ತಾಳಕ್ಕೆ ಕುಣಿಯಬೇಡಿ. ನಿಮಗೆ ಸರಿಯೆನ್ನಿಸುವ ಕಾರ್ಯಕ್ಕೆ ಮಾತ್ರ ಕೈ ಹಾಕಿ. ಖರ್ಚು ನಿಯಂತ್ರಿಸವುದೊಳಿತು.
ಧನು
ಹಳೆ ವ್ಯವಸ್ಥೆಗೆ ಕಟ್ಟುಬಿದ್ದು ಹೊಸ ಬದಲಾವಣೆಗೆ ಒಗ್ಗಿಕೊಳ್ಳಲು ಕಷ್ಟ ಪಡುವಿರಿ. ಹೊಂದಾಣಿಕೆ ಮುಖ್ಯ ಎಂದರಿಯಿರಿ.  
ಮಕರ
ನಿಮ್ಮ ಸಮಸ್ಯೆಯ ಪರಿಹಾರಕ್ಕೆ ಸಕಾಲಿಕ ನೆರವು ಒದರುವುದು. ಅನವಶ್ಯ ವಿಷಯಕ್ಕೆ ಹಣ ವ್ಯಯಿಸುವುದನ್ನು ನಿಲ್ಲಿಸಿ. ಕಾರ್ಯಸಿದ್ಧಿ.    
ಕುಂಭ
ಆಪ್ತರೊಬ್ಬರನ್ನು ಹೊಸ ಆಯಾಮದಲ್ಲಿ ಕಂಡುಕೊಳ್ಳುವಿರಿ. ಅವರ ಹೊಸ ಸ್ವರೂಪ ಗೋಚರಕ್ಕೆ ಬಂದೀತು. ಆಂತರಿಕ ಉದ್ವಿಗ್ನತೆ ಶಮನ.      
 ಮೀನ
ವಿವಿಧ ಕ್ಷೇತ್ರಗಳಲ್ಲಿ ಒತ್ತಡ ಎದುರಿಸುವಿರಿ. ಕುಟುಂಬ, ಸ್ನೇಹಿತರು, ಸಹೋದ್ಯೋಗಿ ಎಲ್ಲರೂ ನಿಮ್ಮಿಂದ ಏನನ್ನಾದರೂ ಅಪೇಕ್ಷಿಸುತ್ತಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !