February 24, 2026
Tuesday, February 24, 2026
spot_img

ಅಂತಾರಾಷ್ಟ್ರೀಯ ವೇದಿಕೆಯಲ್ಲಿ ದಲೈಲಾಮಾ ಹೊಸ ಅಧ್ಯಾಯ: ಮೊದಲ ಬಾರಿಗೆ ‘ಗ್ರ್ಯಾಮಿ’ ಗೆದ್ದ ಧಾರ್ಮಿಕ ನಾಯಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲಾಸ್ ಏಂಜಲೀಸ್‌ನಲ್ಲಿ ನಡೆದ 68ನೇ ಗ್ರ್ಯಾಮಿ ಪ್ರಶಸ್ತಿ ಸಮಾರಂಭವು ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರಿಗೆ ಅಪರೂಪದ ಗೌರವ ತಂದುಕೊಟ್ಟಿದೆ. ನರೇಶನ್ ಮತ್ತು ಸ್ಟೋರಿ ಟೆಲ್ಲಿಂಗ್ ರೆಕಾರ್ಡಿಂಗ್ ವಿಭಾಗದಲ್ಲಿ ಮೊದಲ ಬಾರಿಗೆ ಗ್ರ್ಯಾಮಿ ಗೆದ್ದ ಧಾರ್ಮಿಕ ನಾಯಕ ಎಂಬ ದಾಖಲೆ ಅವರ ಹೆಸರಿನಲ್ಲಿ ಸೇರಿದೆ.

‘Meditations: The Reflections of His Holiness the Dalai Lama’ ಎಂಬ ಸ್ಪೋಕನ್-ವರ್ಡ್ ಆಡಿಯೋಬುಕ್‌ಗೆ ದಲೈಲಾಮಾ ಅವರಿಗೆ ನರೇಶನ್ ಮತ್ತು ಸ್ಟೋರಿ ಟೆಲ್ಲಿಂಗ್ ವಿಭಾಗದ ಗ್ರ್ಯಾಮಿ ಪ್ರಶಸ್ತಿ ಲಭಿಸಿದೆ.

ಈ ವಿಭಾಗದಲ್ಲಿ ಅವರು ಅಮೆರಿಕದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕೆಟಾಂಜಿ ಬ್ರೌನ್ ಜಾಕ್ಸನ್, ಹಾಸ್ಯನಟ ಟ್ರೆವರ್ ನೋಹ್, ನಟಿ ಕ್ಯಾಥಿ ಗಾರ್ವರ್ ಹಾಗೂ ಸಂಗೀತಕಾರ ಫ್ಯಾಬ್ ಮೋರವನ್ ಸೇರಿದಂತೆ ಹಲವು ಖ್ಯಾತ ವ್ಯಕ್ತಿಗಳನ್ನು ಹಿಂದಿಕ್ಕಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ದಲೈಲಾಮಾ ಸ್ವತಃ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹಾಜರಾಗಿರಲಿಲ್ಲ. ಅವರ ಪರವಾಗಿ ಗಾಯಕ ಹಾಗೂ ಗೀತರಚನೆಕಾರ ರೂಫಸ್ ವೈನ್‌ರೈಟ್ ಟ್ರೋಫಿಯನ್ನು ಸ್ವೀಕರಿಸಿದರು. ಇದು ಅವರ ಉಪದೇಶಗಳು ಮತ್ತು ಜೀವನದ ಸಂದೇಶಗಳಿಗೆ ಜಾಗತಿಕ ಮಟ್ಟದಲ್ಲಿ ದೊರೆತ ಮಹತ್ವದ ಮಾನ್ಯತೆಯಾಗಿ ಪರಿಗಣಿಸಲಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !