Friday, January 9, 2026

Viral | ಖತರ್ನಾಕ್ ನಾರಿಯರು: ಕಸ ಗುಡಿಸೋದು ನೆಪ, ಟ್ರಕ್ ಚಾಲಕರ ಸುಲಿಗೆಯೇ ಇವರು ಕಸುಬು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಸ್ತೆಗಳಲ್ಲಿ ಟ್ರಕ್ ಚಾಲಕರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿರುವ ಮಹಿಳೆಯರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಕಸ ಗುಡಿಸುವ ಕೆಲಸ ಮಾಡುವಂತೆ ಕಾಣುವ ಈ ಮಹಿಳೆಯರು ಕೈಯಲ್ಲಿ ಪೊರಕೆ ಅಲ್ಲ, ಮೊಳೆ ತುಂಬಿರುವ ಕೋಲುಗಳನ್ನು ಹಿಡಿದು ರಸ್ತೆ ಬದಿಯಲ್ಲಿ ನಿಂತು ಚಾಲಕರಿಂದ ಹಣ ಕೇಳುತ್ತಿರುವ ದೃಶ್ಯಗಳು ವಿಡಿಯೋದಲ್ಲಿವೆ.

ಈ ಕ್ಲಿಪ್ ಅನ್ನು ಎಕ್ಸ್‌ನಲ್ಲಿ @Khurpenchinfra ಖಾತೆಯಿಂದ ಹಂಚಿಕೊಳ್ಳಲಾಗಿದ್ದು, ಟೋಲ್ ಇಲ್ಲದ ರಸ್ತೆಯಲ್ಲಿಯೇ ಇದೆಂತಹ ಸುಲಿಗೆ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ. “ಕಾನೂನು ಸಂಪೂರ್ಣ ಕಾಣೆಯಾಗಿದೆ” ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವೇ ಗಂಟೆಗಳಲ್ಲಿ ವಿಡಿಯೋಗೆ 4.5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಲಭಿಸಿವೆ.

ಇದನ್ನೂ ಓದಿ: FOOD | ಇಮ್ಯುನಿಟಿ ಬೂಸ್ಟ್‌ ಮಾಡುವ ಸಿಂಪಲ್‌ ಸೂಪ್‌ ಹೀಗೆ ಮಾಡಿ

ಘಟನೆ ನಡೆದ ಸ್ಥಳದ ಕುರಿತು ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ಆದರೆ, ವಿಡಿಯೋದಲ್ಲಿರುವ ಪಶ್ಚಿಮ ಬಂಗಾಳ ಪ್ರವೇಶಿಸುವ ಟ್ರಕ್‌ಗಳನ್ನೇ ಗುರಿಯಾಗಿಸಿಕೊಂಡು ಹಣ ವಸೂಲಿ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಇನ್ನು ಕೆಲವರು ಈ ಘಟನೆ ಬಿರ್ಭುಮ್ ಜಿಲ್ಲೆಯದ್ದು ಎಂದು ಹೇಳಿಕೊಂಡಿದ್ದಾರೆ.

ಇದಕ್ಕೆ ವಿರುದ್ಧವಾಗಿ, ಹಳ್ಳಿಗಳ ಮೂಲಕ ಸಾಗುವ ಗಣಿಗಾರಿಕೆ ಹಾಗೂ ಕಲ್ಲಿದ್ದಲು ಸಾಗಣೆ ಟ್ರಕ್‌ಗಳಿಂದ ಉಂಟಾಗುವ ಧೂಳು–ಮಾಲಿನ್ಯದಿಂದ ಸ್ಥಳೀಯರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿ ಕೆಲವರು ಈ ಕೃತ್ಯವನ್ನು ಸಮರ್ಥಿಸಲು ಯತ್ನಿಸಿದ್ದಾರೆ. ಆದರೆ, ಕಾರಣ ಏನೇ ಇರಲಿ, ಜೀವಕ್ಕೆ ಬೆದರಿಕೆ ಉಂಟುಮಾಡುವ ರೀತಿಯಲ್ಲಿ ಹಣ ವಸೂಲಿ ಮಾಡುವುದು ಅಪಾಯಕಾರಿ ಹಾಗೂ ಅಸಮರ್ಥನೀಯ ಎಂದು ಬಹುತೇಕ ನೆಟ್ಟಿಗರು ತೀವ್ರವಾಗಿ ಖಂಡಿಸಿದ್ದಾರೆ.

error: Content is protected !!