ಹೊಸದಿಗಂತ ಡಿಜಿಟಲ್ ಡೆಸ್ಕ್:
ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದರೂ ಅಭಿಮಾನಿಗಳ ಬೆಂಬಲದಲ್ಲಿ ಯಾವುದೇ ಕೊರತೆ ಕಾಣಿಸಿಲ್ಲ. ಅವರ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿರುವ ಫ್ಯಾನ್ಸ್‌ಗೆ ಇದೀಗ ಹೊಸ ಚರ್ಚೆ ಹುಟ್ಟಿಕೊಂಡಿದೆ. ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಓಂ ಪ್ರಕಾಶ್ ಇತ್ತೀಚಿನ ಸಂದರ್ಶನದಲ್ಲಿ ದರ್ಶನ್ ಬಗ್ಗೆ ಮಾತನಾಡಿ, ಇದೇ ವರ್ಷದ ಜೂನ್ ಅಥವಾ ಜುಲೈ ಒಳಗೆ ಅವರು ಜೈಲಿನಿಂದ ಹೊರಬರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
“ಮೂರು-ನಾಲ್ಕು ತಿಂಗಳಲ್ಲಿ ದರ್ಶನ್ ಹೊರಬರುವುದು ಖಚಿತ” ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿರುವ ಓಂ ಪ್ರಕಾಶ್ ಮಾತುಗಳು ಅಭಿಮಾನಿಗಳಲ್ಲಿ ಸಂತಸ ಮೂಡಿಸಿವೆ. ಈ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಫ್ಯಾನ್ಸ್ ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.
ಇದನ್ನೂ ಓದಿ:
ಇನ್ನೊಂದೆಡೆ, ಕೋಡಿಮಠ ಸ್ವಾಮೀಜಿ ಕೂಡಾ ದರ್ಶನ್ ಭವಿಷ್ಯ ಕುರಿತು ಪ್ರತಿಕ್ರಿಯೆ ನೀಡಿದ್ದರು. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಹೆಚ್ಚಿನ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದ ಅವರು, ಅಂತಿಮ ತೀರ್ಪು ಕೋರ್ಟ್‌ನಲ್ಲೇ ಆಗಲಿದೆ ಎಂದು ಸ್ಪಷ್ಟಪಡಿಸಿದ್ದರು. “ದೇವರು ದರ್ಶನ್ ಅವರಿಗೆ ಒಳ್ಳೆಯದು ಮಾಡಲಿ” ಎಂಬ ಆಶಯವನ್ನೂ ವ್ಯಕ್ತಪಡಿಸಿದ್ದರು.
ಒಟ್ಟಾರೆ, ಬಿಡುಗಡೆ ವಿಚಾರದಲ್ಲಿ ಹಲವು ಊಹಾಪೋಹಗಳು ಹರಿದಾಡುತ್ತಿದ್ದರೂ, ಅಂತಿಮ ನಿರ್ಧಾರ ನ್ಯಾಯಾಲಯದ ಕೈಯಲ್ಲಿದೆ.



