January16, 2026
Friday, January 16, 2026
spot_img

ವರದಕ್ಷಿಣೆಗಾಗಿ ಮಗಳ ಕೊಲೆ: ಆಕೆ ಮೃತದೇಹ ನೋಡಿ ಪ್ರಾಣಬಿಟ್ಟ ತಾಯಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವರದಕ್ಷಿಣೆಗಾಗಿ ಮಗಳನ್ನು ಕೊಂದಿದ್ದು, ಮಗಳ ಮೃತದೇಹ ನೋಡಿದ ತಕ್ಷಣ ತಾಯಿ ಕೂಡ ಮೃತಪಟ್ಟಿದ್ದಾರೆ.

ಬಿಹಾರದಲ್ಲಿ ವರದಕ್ಷಿಣೆಗಾಗಿ ಮಹಿಳೆಯ ಕೊಲೆ ಮಾಡಲಾಗಿದ್ದು, ಮಗಳ ಶವ ಕಂಡು ತಾಯಿಯೊಬ್ಬರು ಪ್ರಾಣ ಬಿಟ್ಟಿರುವ ಹೃದಯವಿದ್ರಾವಕ ಘಟನೆ ವರದಿಯಾಗಿದೆ. ಮಹಿಳೆಯೊಬ್ಬಳನ್ನು ಆಕೆಯ ಅತ್ತೆ-ಮಾವ ಕತ್ತು ಹಿಸುಕಿ ಕೊಂದ ಘಟನೆ ನಡೆದಿದೆ. ಆಸ್ಪತ್ರೆಯಲ್ಲಿ ಮಗಳ ಶವವನ್ನು ನೋಡಿದ ಕೆಲವೇ ಗಂಟೆಗಳಲ್ಲಿ ಮಹಿಳೆಯ ತಾಯಿಯೂ ಸಾವನ್ನಪ್ಪಿದ್ದಾರೆ.

ಮೃತರನ್ನು ಸುನೈನಾ ದೇವಿ ಮತ್ತು ಅವರ ತಾಯಿ ಬಬ್ಲಿ ದೇವಿ ಎಂದು ಗುರುತಿಸಲಾಗಿದೆ. ಸುನೈನಾ ದೇವಿಯ ಗಂಡನಿಗೆ ಸರಿಯಾದ ಕೆಲಸವಿರಲಿಲ್ಲ ಹೀಗಾಗಿ ಅವರ ನಡುವೆ ನಿತ್ಯವೂ ಜಗಳವಾಗುತ್ತಿತ್ತು.ಹಾಗೆಯೇ ಆಕೆಯ ಅತ್ತೆ-ಮಾವ ವರದಕ್ಷಿಣೆಗಾಗಿ ನಿರಂತರವಾಗಿ ಬೇಡಿಕೆ ಇಡುತ್ತಿದ್ದರು.

ಸುನೈನಾ ಸಾವಿನ ಸುದ್ದಿ ಅವರ ಕುಟುಂಬಕ್ಕೆ ತಲುಪಿದಾಗ, ಅವರ ತಾಯಿ ಭಾಗಲ್ಪುರದ ಜೆಎಲ್ಎನ್ ಆಸ್ಪತ್ರೆಗೆ ಸಂಬಂಧಿಕರೊಬ್ಬರೊಂದಿಗೆ ಇದ್ದರು. ಮಗಳ ಶವವನ್ನು ನೋಡಿದ ಬಬ್ಲಿ ದೇವ್ ಆಘಾತದಿಂದ ಕುಸಿದು ಬಿದ್ದರು. ನಂತರ ವೈದ್ಯರು ಬಬ್ಲಿ ದೇವಿಗೆ ಮೆದುಳಿನಲ್ಲಿ ರಕ್ತಸ್ರಾವವಾಗಿದ್ದು, ಇದರಿಂದಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ್ದಾರೆ.

Must Read

error: Content is protected !!