ಹೊಸದಿಗಂತ ವರದಿ ಅಂಕೋಲಾ:
ಎರಡುವರೆ ವರ್ಷಗಳ ಕಾಲ ಮುಖ್ಯಮಂತ್ರಿಗಳಾಗಿ ಸರ್ಕಾರವನ್ನು ನಡೆಸಲು ಸಿದ್ದರಾಮಯ್ಯ ಅವರ ಜೊತೆ ಒಪ್ಪಂದ ಆಗಿರುವುದು ನಿಜವಾಗಿದ್ದು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಐದು ವರ್ಷ ಪೂರ್ಣಗೊಳಿಸಬಾರದು ಎಂದು ತಾವು ಎಂದಿಗೂ ಹೇಳಿಲ್ಲ ಹೈಕಮಾಂಡ್ ಸೂಚನೆಯಂತೆ ಪರಸ್ಪರ ಮಾತುಕತೆ ನಡೆಸಿದ್ದು ಒಗ್ಗಟ್ಟಿನಿಂದ ಸರ್ಕಾರ ನಡೆಸುತ್ತೇವೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದರು.
ಖಾಸಗಿ ಕಾರ್ಯಕ್ರಮದ ನಿಮಿತ್ತ ತಾಲೂಕಿನ ಆಂದ್ಲೆಯ ಜಗದೀಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ
ಸಲ್ಲಿಸಿದ ನಂತರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಹೈಕಮಾಂಡಿನ ಒಲವು ಇದ್ದ ಕಾರಣದಿಂದಲೇ ಸಿದ್ದರಾಮಯ್ಯ ಅವರು ಮುಖ್ಯ ಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ್ದರು, ಈಗಲೂ ಹೈಕಮಾಂಡ್ ನಿರ್ಧಾರದಂತೆ ಮುಖ್ಯಮಂತ್ರಿಗಳಾಗಿ ಮುಂದುವರಿಯಲಿದ್ದಾರೆ ತಾವು ಪಕ್ಷದ ನಿರ್ಧಾರಕ್ಕೆ ತಲೆಬಾಗಿ ಹೈಕಮಾಂಡಿನ ಸೂಚನೆಯನ್ನು ಪಾಲಿಸುವುದಾಗಿ ತಿಳಿಸಿದರು.
ಆಂದ್ಲೆಯ ಜಗದೀಶ್ವರಿ ದೇವಿಯ ಆಶೀರ್ವಾದಿಂದ ಈ ಹಿಂದೆ ಇಷ್ಟಾರ್ಥ ಈಡೇರಿ ಶುಭವಾಗಿದ್ದು ದೇವಿಯ ಇಚ್ಛೆಯಂತೆ ಮತ್ತೊಮ್ಮೆ ಸನ್ನಿಧಾನಕ್ಕೆ ಬರಲು ಅವಕಾಶ ದೊರಕಿದೆ ಮುಂದೆಯೂ ಶುಭವಾಗುವ ಸೂಚನೆ ದೊರಕಿದ್ದು
ಭಕ್ತ ಮತ್ತು ದೇವರ ನಡುವಿನ ಕೆಲವು ವಿಚಾರಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು
ಉಪ ಮುಖ್ಯಮಂತ್ರಿ ಡಿಕೆಶಿ ಮಂದಹಾಸ ಬೀರಿದರು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಕಾರವಾರ ಅಂಕೋಲಾ ಶಾಸಕ ಸತೀಶ ಸೈಲ್ ಮೊದಲಾದವರು ಉಪಸ್ಥಿತರಿದ್ದರು.
ಸಿಎಂ ಸ್ಥಾನದ ವಿಷಯವಾಗಿ ಒಪ್ಪಂದ ಆಗಿದೆ ಎಂದ ಡಿಸಿಎಂ ಡಿಕೆಶಿ

