Thursday, September 4, 2025

ಸಾಮಾಜಿಕ ಮಾಧ್ಯಮಗಳಲ್ಲಿ ಸಾವಿನ ಸುದ್ದಿ ವೈರಲ್: ಡೊನಾಲ್ಡ್ ಟ್ರಂಪ್ ರಿಯಾಕ್ಷನ್ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಳೆದ ಮೂರ್ನಾಲ್ಕು ದಿನ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿದ್ದಾಗ ಅವರು ತೀವ್ರ ಅನಾರೋಗ್ಯಕ್ಕೀಡಾಗಿದ್ದಾರೆ ಎಂದು ಒಂದು ಕಡೆ ಸುದ್ದಿಯಾಗಿದ್ದರೆ ಮತ್ತೊಂದೆಡೆ ಟ್ರಂಪ್ ನಿಧನ ಹೊಂದಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿತ್ತು.ಇದೀಗ ಟ್ರಂಪ್ ಈ ಎಲ್ಲಾ ವದಂತಿಗಳಿಗೆ ಸ್ವತಃ ತೆರೆ ಎಳೆದಿದ್ದಾರೆ.

ನಾನು ನಿಧನ ಹೊಂದಿದ್ದೇನೆ ಎಂದು ಜನ ಅಚ್ಚರಿಪಡುತ್ತಾರೆ ಎಂದು ನನಗೆ ಗೊತ್ತಿರಲಿಲ್ಲ. ನನ್ನ ನಿಧನ ಬಗ್ಗೆ ಸುದ್ದಿ ಹಬ್ಬಿದೆ ಎಂದು ನನಗೆ ಗೊತ್ತಿರಲಿಲ್ಲ, ಆದರೆ ನನ್ನ ಆರೋಗ್ಯದ ಬಗ್ಗೆ ಜನರಿಗೆ ಕಳವಳ ಇದೆ ಎಂದು ಗೊತ್ತಾಯಿತು ಎಂದರು.

ನಾನು ಚೆನ್ನಾಗಿದ್ದೇನೆಯೇ, ನನ್ನ ಆರೋಗ್ಯ ಹೇಗಿದೆ, ಏನಾದರೂ ತೊಂದರೆಯಾಗಿದೆಯೇ ಎಂದು ಜನ ಕೇಳುತ್ತಾರೆ. ನನ್ನ ಆರೋಗ್ಯ ಬಗ್ಗೆ ಹಬ್ಬಿದ ವದಂತಿಗಳೆಲ್ಲ ಸುಳ್ಳು, ನಾನು ಚೆನ್ನಾಗಿಯೇ ಇದ್ದೇನೆ ಎಂದರು.

ಇತ್ತೀಚೆಗೆ, ಟ್ರಂಪ್ ಅವರ ಬಲಗೈಯ ಹಿಂಭಾಗದಲ್ಲಿ ಗಾಯಗಳಾಗಿದ್ದವು, ಕೆಲವೊಮ್ಮೆ ಅವರ ಕಾಲುಗಳ ಸುತ್ತ ಊತ ಉಂಟಾಗುತ್ತಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ್ದ ಶ್ವೇತಭವನ, ಕಾಲುಗಳ ನರ ದೌರ್ಬಲ್ಯದಿಂದ ಹೃದಯಕ್ಕೆ ಸರಿಯಾಗಿ ರಕ್ತಪರಿಚಲನೆಯಾಗುತ್ತಿಲ್ಲ, ರಕ್ತ ಹೃದಯಕ್ಕೆ ಹೋಗದೆ ಕಾಲುಗಳಲ್ಲಿ ಸಂಗ್ರಹವಾಗಿ ಊತ ಕಾಣಿಸಿಕೊಂಡಿದೆ ಎಂದು ಹೇಳಿತ್ತು. ಸಾಮಾನ್ಯವಾಗಿ ಇಳಿ ವಯಸ್ಸಿನಲ್ಲಿ ಈ ತೊಂದರೆಯಿರುತ್ತದೆ.

ಇದನ್ನೂ ಓದಿ