ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿದ್ದರಾಮಯ್ಯ ಅವರನ್ನೇ 5 ವರ್ಷವೂ ಸಿಎಂ ಎಂದು ಘೋಷಣೆ ಮಾಡಿ ಎಂದು ಮೈಸೂರಿನ ಅಹಿಂದ ಸಂಘಟನೆಗಳು ಪತ್ರ ಚಳುವಳಿ ಶುರು ಮಾಡಿದೆ. ರಾಹುಲ್ ಗಾಂಧಿಗೆ ಪತ್ರ ಬರೆಯಲಿರುವ ಅಹಿಂದ ಸಂಘಟನೆಗಳು ಪತ್ರ ಚಳವಳಿ ಶುರು ಮಾಡಿದೆ.
ರಾಜ್ಯದಲ್ಲಿ ಮೂಡಿರುವ ಮುಂದಿನ ಮುಖ್ಯಮಂತ್ರಿ ಗೊಂದಲಕ್ಕೆ ತೆರೆ ಎಳೆಯಬೇಕು ಎಂದು ಅಹಿಂದ ಸಂಘಟನೆಗಳು ಆಗ್ರಹಿಸಿದೆ. ಸಿದ್ದರಾಮಯ್ಯ ಅವರನ್ನೇ 5 ವರ್ಷವೂ ಸಿಎಂ ಎಂದು ರಾಹುಲ್ ಗಾಂಧಿಯವರೇ ಘೋಷಣೆ ಮಾಡ್ಬೇಕು ಎಂದು ಪತ್ರ ಚಳುವಳಿ ಮೂಲಕ ಮನವಿ ಮಾಡಿದ್ದಾರೆ.

