Saturday, October 18, 2025

Deepavali Safety Tips | ಪಟಾಕಿಯಿಂದ ಸುಟ್ಟ ಗಾಯವಾದ್ರೆ ಏನು ಮಾಡ್ಬೇಕು?

ದೀಪಾವಳಿ ಹಬ್ಬ ಅಂದರೆ ಬೆಳಕಿನ ಹಬ್ಬ, ಸಂತೋಷದ ಹಬ್ಬ. ಮನೆಮನೆ ಬೆಳಗುವ ದೀಪಗಳು, ಸಿಹಿ ತಿಂಡಿಗಳು, ಪಟಾಕಿಗಳ ಸದ್ದಿನಿಂದ ಎಲ್ಲೆಡೆ ಖುಷಿಯ ವಾತಾವರಣ ನಿರ್ಮಾಣವಾಗುತ್ತದೆ. ಆದರೆ ಈ ಉತ್ಸಾಹದ ಮಧ್ಯೆ ಸುರಕ್ಷತೆ ಮರೆಯುವುದು ಅಪಾಯಕಾರಿ. ಪಟಾಕಿಯಿಂದ ಆಗುವ ಸುಟ್ಟ ಗಾಯಗಳು ಕೆಲವೊಮ್ಮೆ ಗಂಭೀರ ಸ್ಥಿತಿಗೂ ತಲುಪಬಹುದು. ಆದ್ದರಿಂದ ಪಟಾಕಿ ಸಿಡಿಸುವಾಗ ಎಚ್ಚರಿಕೆಯಿಂದ ಇರಬೇಕು ಹಾಗೂ ಗಾಯವಾದರೆ ಸರಿಯಾದ ಪ್ರಥಮ ಚಿಕಿತ್ಸೆ ನೀಡುವುದು ಅತ್ಯಂತ ಮುಖ್ಯ.

  • ಬಟ್ಟೆ ಮತ್ತು ಆಭರಣ ತೆಗೆದುಹಾಕಿ: ಗಾಯವಾದ ತಕ್ಷಣ ಬಟ್ಟೆ, ಬೆಲ್ಟ್ ಅಥವಾ ಆಭರಣಗಳನ್ನು ತೆಗೆದುಹಾಕಿ. ಅವು ಸುಟ್ಟ ಚರ್ಮಕ್ಕೆ ಅಂಟಿಕೊಳ್ಳಬಹುದು. ಸುಟ್ಟ ಚರ್ಮಕ್ಕೆ ಬಟ್ಟೆ ಅಂಟಿಕೊಂಡಿದ್ದರೆ ಅದನ್ನು ಬಲವಂತವಾಗಿ ತೆಗೆಯಬೇಡಿ. ಇದರಿಂದ ಗಾಯದ ಸ್ಥಿತಿ ಹದಗೆಡಬಹುದು.
  • ತಣ್ಣೀರಿನಿಂದ ತೊಳೆಯಿರಿ: ಸುಟ್ಟ ಗಾಯದ ಸ್ಥಳವನ್ನು ತಕ್ಷಣ ತಣ್ಣೀರಿನಿಂದ ತೊಳೆಯಿರಿ. ಆದರೆ ಐಸ್ ನೇರವಾಗಿ ಹಚ್ಚಬೇಡಿ, ಅದು ನೋವು ಮತ್ತು ಚರ್ಮದ ಹಾನಿ ಹೆಚ್ಚಿಸಬಹುದು. ತಣ್ಣೀರು ನೋವು ಮತ್ತು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  • ಸಡಿಲ ಬ್ಯಾಂಡೇಜ್ ಹಾಕಿಕೊಳ್ಳಿ: ಗಾಯವಾದ ಜಾಗವನ್ನು ಸ್ವಚ್ಛವಾದ ಬಟ್ಟೆಯಿಂದ ಮುಚ್ಚಿ. ಸಡಿಲ ಬ್ಯಾಂಡೇಜ್ ಹಾಕಿಕೊಂಡರೆ ಸೋಂಕು ತಗುಲದಂತೆ ತಡೆಗಟ್ಟಬಹುದು. ಬ್ಯಾಂಡೇಜ್ ಬಿಗಿಯಾಗಿ ಕಟ್ಟಬಾರದು, ಅದು ರಕ್ತಪ್ರವಾಹಕ್ಕೆ ಅಡ್ಡಿಯಾಗುತ್ತದೆ.
  • ವೈದ್ಯರ ಸಲಹೆಯಿಲ್ಲದೆ ಕ್ರೀಮ್ ಬಳಸದಿರಿ: ಬಹುತೇಕರು ತಕ್ಷಣ ಕ್ರೀಮ್ ಅಥವಾ ಆಯಿಲ್ ಹಚ್ಚುತ್ತಾರೆ, ಆದರೆ ಇದು ತಪ್ಪು. ವೈದ್ಯರು ಸೂಚಿಸಿದ ಬಳಿಕ ಮಾತ್ರ ಯಾವುದೇ ಲೋಷನ್ ಅಥವಾ ಕ್ರೀಮ್ ಬಳಸಬೇಕು.
  • ಸುಟ್ಟ ಅಂಗವನ್ನು ಎತ್ತರದಲ್ಲಿ ಇಡಿ: ಗಾಯವಾದ ಕೈ ಅಥವಾ ಕಾಲನ್ನು ಹೃದಯದ ಮಟ್ಟಕ್ಕಿಂತ ಸ್ವಲ್ಪ ಎತ್ತರದಲ್ಲಿ ಇಡುವುದರಿಂದ ಊತ ಕಡಿಮೆ ಆಗುತ್ತದೆ ಮತ್ತು ನೋವು ಸಹ ತಗ್ಗುತ್ತದೆ.
error: Content is protected !!