Friday, December 5, 2025

ಸಚಿವೆ ನಿರ್ಮಲಾ ಸೀತಾರಾಮನ್​​ಗೂ ಡೀಪ್‌ಫೇಕ್ ಕಾಟ: ಕೇಸ್‌ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ರ ಡೀಪ್‌ಫೇಕ್‌ ವಿಡಿಯೋವೊಂದು ವೈರಲ್‌ ಆಗಿದೆ. ಈ ಬಗ್ಗೆ ಬೆಂಗಳೂರಿನ ಮಲ್ಲೇಶ್ವರಂ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಹಣಕಾಸು ಹೂಡಿಕೆ ಯೋಜನೆ ಉದ್ದೇಶಿಸಿ ಮಾತನಾಡಿರುವ ವೀಡಿಯೋವನ್ನು ಎಡಿಟ್​​ ಮಾಡಿ ಸಾಮಾಜಿಕ ಜಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಸುಳ್ಳು ಡೀಪ್ ಫೇಕ್ ವೀಡಿಯೋ ಮಾಡಿ ಸಾರ್ವಜನಿಕರಿಗೆ ಪ್ರಚೋದನೆ ನೀಡಿದ್ದಾರೆ ಎಂದು ದೂರು ದಾಖಲಾಗಿದೆ. ಇದೀಗ ಈ ಬಗ್ಗೆ ಆರೋಪಿಗಳ ಪತ್ತೆಗೆ ಕಾರ್ಯಚರಣೆ ನಡೆಯುತ್ತಿದೆ ಎಂದು ಹೇಳಲಾಗಿದೆ.

ಭಾರತದ ಹಣಕಾಸು ಸಚಿವರಾದ ನಿರ್ಮಾಲಾ ಸೀತಾರಾಮನ್​​​​ ವಿಡಿಯೋವನ್ನು ಡೀಪ್ ಫೇಕ್ ಮಾಡಿದ ಆರೋಪಿಗಳು ಫೇಸ್​​​ ಬುಕ್​​ನಲ್ಲಿ ಹಂಚಿಕೊಂಡಿದ್ದಾರೆ. ಹಣಕಾಸಿನ ಹೂಡಿಕೆ ಯೋಜನೆಯನ್ನು ಉದ್ದೇಶಿಸಿ ಮಾತನಾಡುತ್ತಿರುವ ವಿಡಿಯೋವನ್ನು ಡೀಪ್​​​​​​​ ಫೇಕ್​​ ಮಾಡಿ ಅದನ್ನು ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರಿಂದ ಜನರಿಗೆ ತಪ್ಪು ಮಾಹಿತಿ ಹೋಗುತ್ತಿದೆ. ಹೂಡಿಕೆ ಮಾಡುವ ವ್ಯಕ್ತಿಗೆ ಇದು ಆರ್ಥಿಕ ನಷ್ಟವನ್ನು ಉಂಟು ಮಾಡುವ ಸಾಧ್ಯತೆ ಇದೆ. ಸರ್ಕಾರ ಹಾಗೂ ಸಾರ್ವಜನಿಕ ಸಂಸ್ಥೆಗಳ ಮೇಲೆ ದೊಡ್ಡ ಪರಿಣಾಮವನ್ನುಂಟು ಮಾಡುವ ಸಾಧ್ಯತೆ ಇದೆ. ಹಾಗಾಗಿ ಈ ಕೃತ್ಯದಲ್ಲಿ ಶಾಮೀಲಾದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಈ ಎಫ್ಐಆರ್​​ನಲ್ಲಿ ತಿಳಿಸಲಾಗಿದೆ.

error: Content is protected !!