ಹೊಸದಿಗಂತ ಡಿಜಿಟಲ್ ಡೆಸ್ಕ್:
ತನ್ನ ಕುರಿತು ‘ ಶ್ರದ್ಧಾಂಜಲಿ’ ಪೋಸ್ಟ್ ಹಾಕಲಾಗಿರುವ ಘಟನೆಗೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಶಾಸಕಿ ಭಾಗೀರಥೀ ಮುರುಳ್ಯ ಹೊಸ ದಿಗಂತಕ್ಕೆ ಪ್ರತಿಕ್ರಿಯೆ ನೀಡಿದ್ದು, ಪೋಸ್ಟ್ ಹಾಕಿರುವ ವ್ಯಕ್ತಿಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ.
ಈ ವ್ಯಕ್ತಿ ಯಾವ ಉದ್ದೇಶದಿಂದ ಪೋಸ್ಟ್ ಹಾಕಿದ್ದಾನೆ ಎಂದು ತಿಳಿದಿಲ್ಲ. ನನ್ನ ಬಗ್ಗೆ ಪ್ರತಿಯೊಬ್ಬ ನನ್ನ ಮತದಾರರಿಗೆ ತಿಳಿದಿದೆ. ನಾನು ಇದುವರೆಗೆ ಯಾವುದೇ ವೈಷಮ್ಯದ ಕೆಲಸಗಳನ್ನು ಮಾಡಿಲ್ಲ. ಆದರೆ ಈ ರೀತಿ ವಿಕೃತಿಯಿಂದ ಪೋಸ್ಟ್ ಮಾಡಿರುವುದು ಸರಿಯಲ್ಲ ಎನ್ನಬಲ್ಲೆ. ಈ ರೀತಿಯ ಕೆಲಸ ಮಾಡಿದ ವ್ಯಕ್ತಿಯನ್ನು ಸರಕಾರ ತಕ್ಷಣವೇ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು, ಜೊತೆಗೆ ಪೋಸ್ಟ್ ಹಂಚಿದ ವ್ಯಕ್ತಿಯ ವಿರುದ್ದ ಮಾನನಷ್ಟ ಮೊಕದ್ದಮೆ ಹೋಡುವುದಾಗಿ ಅವರು ತಿಳಿಸಿದ್ದಾರೆ.
ನನಗೆ ನನ್ನ ಜಿಲ್ಲೆ ಹಾಗೂ ರಾಜ್ಯದ ಪ್ರತಿಯೊಬ್ಬರ ನಾಯಕರು ದೂರವಾಣಿ ಕರೆ ಮೂಲಕ ಸ್ಥೈರ್ಯ ನೀಡುತ್ತಿದ್ದಾರೆ ಎಂದು ಅವರು ಇದೆ ಸಂದರ್ಭ ತಿಳಿಸಿದ್ದಾರೆ.

