ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ತಂತ್ರಗಾರಿಕೆ ಫಲಿಸದೆ ಸೋಲು ಒಪ್ಪಿಕೊಂಡ ಪ್ರಶಾಂತ್ ಕಿಶೋರ್ ,ಚುನಾವಣೆಯಲ್ಲಿ ಸೋತಿದ್ದು ಅಪರಾಧವಲ್ಲ, ನಮ್ಮ ತಪ್ಪು ಎಲ್ಲಾಗಿದೆ ಎಂಬುದನ್ನು ಹುಡುಕಿ ತಿದ್ದಿಕೊಂಡು ಮುನ್ನುಗ್ಗುವ ಪ್ರಯತ್ನ ಮಾಡುತ್ತೇವೆ ಎಂದರು.
ಚುನಾವಣೆ ಸಮಯದಲ್ಲಿ ತಮ್ಮ ಪಕ್ಷವು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿತ್ತು ಆದರೂ ವಿಫಲವಾಗಿದೆ. ತಮ್ಮ ಪಕ್ಷವು ಹಿನ್ನಡೆಯನ್ನು ಅನುಭವಿಸಿದೆ ಆದರೆ ತಪ್ಪುಗಳನ್ನು ಸರಿಪಡಿಸಿ ಮುನ್ನುಗ್ಗುತ್ತದೆ ಆದರೆ ವಾಪಸ್ ಹೋಗುವುದಿಲ್ಲ. ನಾವು ನಮ್ಮ ಕಡೆಯಿಂದ ತುಂಬಾ ಸಕಾರಾತ್ಮಕವಾಗಿ ಪ್ರಯತ್ನಿಸಿದೆವು. ಈ ಸರ್ಕಾರವನ್ನು ಬದಲಾಯಿಸಲು ನಾವು ವಿಫಲರಾಗಿದ್ದೇವೆ. ಜನರಿಗೆ ಅರ್ಥಮಾಡಿಕೊಳ್ಳಲು ನಾನು ವಿಫಲವಾದ ಕಾರಣ ನಾನು ಎಲ್ಲಾ ಆಪಾದನೆಗಳನ್ನು ನನ್ನ ಮೇಲೆಯೇ ಹಾಕಿಕೊಳ್ಳುತ್ತೇನೆ ಎಂದಿದ್ದಾರೆ. .
ನಾವು ನಮ್ಮ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ನಮ್ಮ ಪ್ರಯತ್ನಗಳಲ್ಲಿ ನಾನು ವಿಫಲನಾದುದಕ್ಕೆ ವಿಷಾದಿಸುತ್ತೇನೆ. ನಾನು ಒಂದು ದಿನದ ಮೌನ ಉಪವಾಸ ಮಾಡುತ್ತೇನೆ ಎಂದು ಅವರು ಹೇಳಿದರು.
ನಮ್ಮ ಕಡೆಯಿಂದ ತಪ್ಪುಗಳಾಗಿರಬಹುದು, ಯಾವುದೇ ಅಪರಾಧ ಮಾಡಿಲ್ಲ ಮತಗಳನ್ನು ಪಡೆಯದಿರುವುದು ಅಪರಾಧವಲ್ಲ ಎಂದು ಅವರು ಹೇಳಿದರು.
ನಾವು ಜಾತಿ ರಾಜಕೀಯ ಮಾಡಿಲ್ಲ ಅಥವಾ ಧರ್ಮ ಧರ್ಮಗಳ ನಡುವೆ ವಿಷಬೀಜ ಬಿತ್ತಿಲ್ಲ, ನಾವು ಸಮಾಜದಲ್ಲಿ ವಿಷವನ್ನು ಹರಡಿಲ್ಲ. ಬಡ ಮತ್ತು ಮುಗ್ಧ ಜನರಿಂದ ಮತಗಳನ್ನು ಖರೀದಿಸುವ ಅಪರಾಧವನ್ನು ನಾವು ಮಾಡಿಲ್ಲ. ಹಾಗೆ ಮಾಡಿದವರು ತಮ್ಮ ಕ್ರಿಯೆಗಳ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದರು.

