Friday, January 9, 2026

ಡಿಗ್ರಿ + ಡಿಜಿಟಲ್ ಜ್ಞಾನ + RDX: ಉನ್ನತ ಶಿಕ್ಷಣ ಪಡೆದವರ ದಾರಿ ತಪ್ಪಿಸುತ್ತಿದೆಯೇ ಮೂಲಭೂತವಾದ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಹೆಚ್ಚುತ್ತಿರುವ ‘ವೈಟ್-ಕಾಲರ್’ ಉಗ್ರವಾದದ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಉನ್ನತ ಶಿಕ್ಷಣ ಪಡೆದ ಯುವಕರು ಸಮಾಜ ವಿರೋಧಿ ಕೃತ್ಯಗಳಲ್ಲಿ ತೊಡಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, “ಕೆಲವರು ಒಂದು ಕೈಯಲ್ಲಿ ಡಿಗ್ರಿ ಹಿಡಿದು ಜೇಬಿನಲ್ಲಿ ಆರ್‌ಡಿಎಕ್ಸ್ ಇಟ್ಟುಕೊಳ್ಳುತ್ತಿದ್ದಾರೆ” ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ರಾಜಸ್ಥಾನದ ಉದಯಪುರದಲ್ಲಿರುವ ಭೂಪಾಲ್ ನೋಬಲ್ಸ್ ವಿಶ್ವವಿದ್ಯಾಲಯದ 104ನೇ ಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 2025ರ ನವೆಂಬರ್ 10ರಂದು ದೆಹಲಿಯ ಕೆಂಪು ಕೋಟೆ ಬಳಿ ನಡೆದ ಭೀಕರ ಕಾರು ಬಾಂಬ್ ಸ್ಫೋಟದ ಘಟನೆಯನ್ನು ಸ್ಮರಿಸಿದರು. ಆ ಘಟನೆಯಲ್ಲಿ 15 ಜನರು ಜೀವ ಕಳೆದುಕೊಂಡಿದ್ದರು. ಈ ಪ್ರಕರಣದ ಮಾಸ್ಟರ್‌ಮೈಂಡ್ ಡಾ. ಉಮರ್ ಮೊಹಮ್ಮದ್ ವೃತ್ತಿಯಿಂದ ವೈದ್ಯರಾಗಿದ್ದರೂ, ಭಯೋತ್ಪಾದನೆಯ ಹಾದಿ ತುಳಿದಿದ್ದನ್ನು ಅವರು ಪ್ರಸ್ತಾಪಿಸಿದರು. “ಉನ್ನತ ಪದವಿ ಪಡೆದವರೇ ಇಂತಹ ಕೃತ್ಯವೆಸಗಿರುವುದು ಜ್ಞಾನದೊಂದಿಗೆ ನೈತಿಕತೆಯ ಅಗತ್ಯತೆಯನ್ನು ಎತ್ತಿ ತೋರಿಸುತ್ತದೆ,” ಎಂದು ಹೇಳಿದರು.

ಇಂದಿನ ಶಿಕ್ಷಣ ಕೇವಲ ವೃತ್ತಿಪರ ಯಶಸ್ಸಿಗೆ ಸೀಮಿತವಾಗಬಾರದು ಎಂದು ಒತ್ತಿ ಹೇಳಿದ ಸಚಿವರು, ಜ್ಞಾನದ ಜೊತೆಗೆ ವಿನಮ್ರತೆ, ಚರಿತ್ರೆ ಮತ್ತು ಧರ್ಮದ ಸತ್ವವನ್ನು ಕಲಿಸದ ಶಿಕ್ಷಣ ಅಪೂರ್ಣ ಎಂದು ವಿವರಿಸಿದರು.

ಇದನ್ನೂ ಓದಿ: FOOD| ಒಂದು ಬಾರಿ ಮಸಲಾ ಆಲೂ ಪಲ್ಯ ಮಾಡಿನೋಡಿ, ಮಾಮೂಲಿ ಪಲ್ಯ ಮರೆತುಬಿಡ್ತೀರಿ

ಸಾಮಾನ್ಯವಾಗಿ ಧಾರ್ಮಿಕ ಮೂಲಭೂತವಾದಿಗಳಿಂದ ಬ್ರೈನ್‌ವಾಶ್‌ಗೆ ಒಳಗಾದ ಅನಕ್ಷರಸ್ಥರು ಉಗ್ರರಾಗುತ್ತಾರೆ ಎಂಬ ನಂಬಿಕೆ ಇತ್ತು. ಆದರೆ ಈಗ ಆ ಟ್ರೆಂಡ್ ಬದಲಾಗಿದೆ. ಎಂಜಿನಿಯರ್‌ಗಳು, ವೈದ್ಯರು ಮತ್ತು ತಂತ್ರಜ್ಞರಂತಹ ಉನ್ನತ ವೃತ್ತಿಪರ ಶಿಕ್ಷಣ ಪಡೆದವರು ಭಯೋತ್ಪಾದನೆಯಲ್ಲಿ ತೊಡಗಿಸಿಕೊಳ್ಳುವುದನ್ನು ‘ವೈಟ್ ಕಾಲರ್ ಭಯೋತ್ಪಾದನೆ’ ಎನ್ನಲಾಗುತ್ತದೆ.

error: Content is protected !!