ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಕೆಂಪು ಕೋಟೆ ಸಮೀಪ ಸಂಜೆ ಕಾರು ಸ್ಫೋಟಗೊಂಡು ಕ್ಷಣಾರ್ಧದಲ್ಲೇ ಬೆಂಕಿ ವ್ಯಾಪಿಸಿದ್ದು,ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆ ಆಗಿದೆ. ಸದ್ಯ ಎಲ್ಲೆಡೆ ಹೈಅಲರ್ಟ್ ಘೋಷಿಸಲಾಗಿದೆ. ಇನ್ನು ಪ್ರಕರಣ ಸಂಬಂಧ ಓರ್ವನನ್ನು ವಶಕ್ಕೆ ಪಡೆಯಲಾಗಿದೆ.
ಈಗಾಗಲೇ ಶ್ವಾನದಳ, ಅಗ್ನಿ ಶಾಮಕದಳಗಳು ಸ್ಥಳಕ್ಕೆ ದಾವಿಸಿ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಗಿದ್ದು ತನಿಖೆ ಮುಂದುವರೆದಿದೆ. ದೆಹಲಿಯಾದ್ಯಂತ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಗೃಹ ಸಚಿವಾಲಯ ಎಲ್ಲಡೆ ಹೈ ಅಲರ್ಟ್ ಘೋಷಿಸಿದೆ ಈ ಹಿನ್ನೆಲೆ ಯಲ್ಲಿ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಕ್ಷಣ-ಕ್ಷಣದ ಮಾಹಿತಿ ಪಡೆಯುತ್ತಿದ್ದಾರೆ. ಅದರಂತೆ ಗಾಯಗೊಂಡವರನ್ನು ದೆಹಲಿ ಎಲ್ಎನ್ಜೆಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದವರ ಹುಡುಕಾಟವನ್ನು ನಡೆಸಲಾಗಿದೆ ಎನ್ನುವ ಮಾಹಿತಿ ಕೇಂದ್ರದ ಮೂಲಗಳಿಂದ ತಿಳಿದು ಬಂದಿದೆ.
15ಕ್ಕೂ ಹೆಚ್ಚು ವಾಹನ ಭಸ್ಮ
ದೆಹಲಿಯ ಕಾರ್ ಬ್ಲಾಸ್ಟ್ನಿಂದ ಆಟೋ ಹಾಗೂ ಕಾರ್ ಸೇರಿ 15 ವಾಹನಗಳು ಭಸ್ಮಗೊಂಡಿವೆ. ಇನ್ನು ಕೆಲವು ವಾಹನಗಳು ಜಖಂಗೊಂಡಿವೆ. ಈ ನಡುವೆ 16 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು ಅದರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಈ ಹಿನ್ನೆಲೆಯಲ್ಲಿ ತನಿಖೆ ಜಾರಿಯಲ್ಲಿದೆ.
ಘಟನೆ ನಡೆದ ಕೆಲವೇ ನಿಮಿಷದಲ್ಲಿ ಸ್ಥಳಕ್ಕೆ ಆಗಮಿಸಿದ, ಶ್ವಾನದಳ ಅಗ್ನಿಶಾಮಕದಳಗಳೂ ಸ್ಥಳಕ್ಕೆ ದಾವಿಸಿ ಉನ್ನತ ಮಟ್ಟದ ಕಾರ್ಯಾಚರಣೆ ಮುನ್ನಡೆಸಿದ್ದಾರೆ. ಇಲ್ಲಿ ಕ್ಷಣ-ಕ್ಷಣಕ್ಕೂ ಸಾವಿನ ಸಂಖ್ಯೆ ಏರುತ್ತಿದ್ದು, ಗಾಯಗೊಂಡವರ ಅಂಕಿ ಸಂಖ್ಯೆಗಳು ಹೆಚ್ಚುತ್ತಿವೆ.
ಮೋದಿಗೆ ಮಾಹಿತಿ ನೀಡಿದ ಶಾ
ಬ್ಲಾಸ್ಟ್ ಬಗ್ಗೆ ಅಮಿತ್ ಶಾ ಅವರು ನರೇಂದ್ರ ಮೋದಿಯವರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಈಗಾಗಲೇ ಒಬ್ಬರನ್ನು ಶಂಕಿತರನ್ನು ವಶಕ್ಕೆ ಪಡೆಯಲಾಗಿದ್ದು, ದೇಶದ ವಿವಿದೆಡೆ ಹೈ ಅಲರ್ಟ್ ಘೋಷಿಸಿದ್ದಾರೆ. ಈ ನಿಟ್ಟಿನಲ್ಲಿ ಮುಂದಿನ ಸ್ಥಿತಿಗಳ ಬಗ್ಗೆ ಮಾಹಿತಿ ಕ್ರೂಢೀಕರಿಸಲು ಅಮಿತ್ ಶಾ- ಹಾಗೂ ನರೇಂಧ್ರ ಮೋದಿ ಸಭೆ ನಡೆಸುವ ಸಾಧ್ಯತೆಯೂ ಇದೆ.

