Wednesday, November 19, 2025

ದೆಹಲಿ ಕಾರು ಸ್ಫೋಟ: NIAಯಿಂದ ಆರೋಪಿಯ ಮತ್ತೋರ್ವ ಸಹಚರನ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ ಕಾರು ಸ್ಫೋಟದ ಪ್ರಮುಖ ಆರೋಪಿ ಡಾ. ಉಮರ್ ಉನ್ ನಬಿಯ ಮತ್ತೊಬ್ಬ ಸಹಚರನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಸೋಮವಾರ ಬಂಧಿಸಿದೆ.

ಕಾರು ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ NIA ತಂಡ ಇಂದು ಶ್ರೀನಗರದಲ್ಲಿ ಡ್ಯಾನಿಶ್ ಎಂದೂ ಕರೆಯಲ್ಪಡುವ ಜಾಸಿರ್ ಬಿಲಾಲ್ ವನಿಯನ್ನು ಬಂಧಿಸಿದ್ದು, ದೆಹಲಿಗೆ ಕರೆದೊಯ್ಯುತ್ತಿದೆ.

ಅನಂತನಾಗ್ ಜಿಲ್ಲೆಯ ಖಾಜಿಗುಂಡ್ ನಿವಾಸಿ ಜಾಸಿರ್ ದಾಳಿಯಲ್ಲಿ ಭಾಗಿಯಾಗಿರುವ ಗುಂಪಿಗೆ ತಾಂತ್ರಿಕ ಸಹಾಯ ನೀಡಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

https://x.com/NIA_India/status/1990411392566882466

ಕಾರು ಬಾಂಬ್ ಸ್ಫೋಟಕ್ಕೆ ಮುಂಚಿನ ಅವಧಿಯಲ್ಲಿ ಆರೋಪಿ, ಡ್ರೋನ್‌ಗಳನ್ನು ಮಾರ್ಪಡಿಸುವ ಮತ್ತು ರಾಕೆಟ್‌ಗಳನ್ನು ತಯಾರಿಸಲು ಪ್ರಯತ್ನಿಸಿದ ಶಂಕೆ ವ್ಯಕ್ತವಾಗಿದೆ.

ತನಿಖಾ ಸಂಸ್ಥೆಯ ಪ್ರಕಾರ, ಜಾಸಿರ್, ಕಾರು ಸ್ಫೋಟ ಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆಂದು ನಂಬಲಾದ ಭಯೋತ್ಪಾದಕ ಉಮರ್ ಉನ್ ನಬಿಯ ಸಹಚರನಾಗಿದ್ದ ಎನ್ನಲಾಗಿದೆ.

ಕೆಂಪು ಕೋಟೆ ಬಳಿ ನಡೆದ ದಾಳಿಯ ಹಿಂದಿನ ವ್ಯಾಪಕ ಪಿತೂರಿಯನ್ನು ಬಹಿರಂಗಪಡಿಸುವಲ್ಲಿ ಈ ಬಂಧನವು ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ ಎಂದು NIA ಹೇಳಿದೆ.

error: Content is protected !!