ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹೆಲಿ ಕಾರು ಸ್ಫೋಟ ಪ್ರಕರಣವನ್ನು ಎನ್ಐಎ ತನಿಖೆ ನಡೆಸುತ್ತಿದೆ. ಇದೀಗ ಸ್ಫೋಟದ ರೂವಾರಿ ವೈದ್ಯ ಉಮರ್ ನಬಿ ಆಪ್ತ, ಕಾಶ್ಮೀರ ಮೂಲಕ ಅಮಿರ್ ರಶೀದ್ ಅಲಿಯನ್ನು ಬಂಧಿಸಲಾಗಿದೆ.
ಇದರ ಜೊತೆಗೆ ತನಿಖೆಯಲ್ಲಿ ಸ್ಫೋಟಕ ಮಾಹಿತಿಯೊಂದು ಬಯಲಾಗಿದೆ. ದೆಹಲಿ ಸ್ಫೋಟಕ್ಕೆ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆ ಹವಾಲ ಮೂಲಕ 20 ಲಕ್ಷ ರೂಪಾಯಿ ಪಾವತಿಸಿದೆ ಅನ್ನೋ ಮಾಹಿತಿಯೂ ಬಯಲಾಗಿದೆ.
ವೈದ್ಯ ಉಮರ್ ನಬಿ ಸ್ಫೋಟಕಗಳನ್ನು ಹ್ಯುಂಡೈ ಐ20 ಕಾರಿನಲ್ಲಿ ತುಂಬಿಕೊಂಡು ದೆಹಲಿ ಕೆಂಪು ಕೋಟೆ ಬಂದಿದ್ದಾನೆ. ಬಳಿಕ ಸ್ಫೋಟಿಸಲಾಗಿದೆ. ದೆಹಲಿ ಸ್ಫೋಟಕ್ಕೆ ಉಮರ್ ನಬಿ, ಇದೇ ಅಮಿರ್ ರಶೀದ್ ಅಲಿ ಜೊತೆ ಸಂಚು ರೂಪಿಸಿದ್ದನು. ಇದೇ ರಶೀದ್ ಆಲಿ ಹೆಸೆರಿನಲ್ಲಿದೆ ಉಮರ್ ನಬಿ ಬಳಸಿದ ಐ20 ಕಾರು.
ದೆಹಲಿ ಸ್ಫೋಟಕ್ಕಾಗಿ ಜೈಶ್ ಇ ಮೊಹಮ್ಮದ್ ಬರೋಬ್ಬರಿ 20 ಲಕ್ಷ ರೂಪಾಯಿ ಪಾವತಿ ಮಾಡಲಾಗಿದೆ ಅನ್ನೋ ಸ್ಫೋಟಕ ಮಾಹಿತಿ ಬಯಲಾಗಿದೆ. ವೈದ್ಯ ಉಮರ್ ನಬಿ, ಮುಜಾಮ್ಮಿಲ್ ಹಾಗೂ ಶಾಹೀನ್ ಮೂವರಿಗೆ ಒಟ್ಟು 20 ಲಕ್ಷ ರೂಪಾಯಿ ಪಾವತಿ ಮಾಡಲಾಗಿದೆ. ಹವಾಲಾ ಮೂಲಕ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆ ಈ ಹಣವನ್ನು ಮೂವರು ವೈದ್ಯರಿಗೆ ಪಾವತಿ ಮಾಡಲಾಗಿದೆ ಅನ್ನೋ ಮಾಹಿತಿ ಬಯಲಾಗಿದೆ.
20 ಲಕ್ಷ ರೂಪಾಯಿ ಹಣದಲ್ಲಿ ಮೂರು ಲಕ್ಷ ರೂಪಾಯಿ ಮೊತ್ತವನ್ನು ನೈಟ್ರೋಜನ್, ಪೊಟಾಶಿಯಂ ಸೇರಿದಂತೆ ಹಲವು ರಾಸಾಯನಿಕ ವಸ್ತುಗಳನ್ನು ಖರೀದಿ ಮಾಡಿದ್ದಾರೆ. ಕೃಷಿ ರಾಸಾಯನಿಕ ವಸ್ತು, ಸ್ಫೋಟಕ ವಸ್ತುಗಳನ್ನು ಖರೀದಿಸಲಾಗಿದೆ. ಇದಾದ ಬಳಿಕ ವೈದ್ಯ ಉಮರ್ ನಬಿ ಕೃಷಿ ಗೊಬ್ಬರ ಖರೀದಿ ಮಾಡಿದ್ದೇನೆ ಎಂದು ಸಂದೇಶ ರವಾನಿಸಿದ್ದಾರೆ.

