ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮಹಾನಗರ ಪಾಲಿಕೆಯ 12 ವಾರ್ಡ್‌ಗಳ ಉಪಚುನಾವಣೆಯಲ್ಲಿ ಆಡಳಿತರೂಢ ಭಾರತೀಯ ಜನತಾ ಪಕ್ಷ(ಬಿಜೆಪಿ) ಏಳು ಸ್ಥಾನಗಳನ್ನು ಗೆದ್ದರೆ, ಆಮ್ ಆದ್ಮಿ ಪಕ್ಷ(ಎಎಪಿ) ಮೂರು ಸ್ಥಾನಗಳನ್ನು ಗೆದ್ದಿದೆ.ಕಾಂಗ್ರೆಸ್ ಮತ್ತು ಎಐಎಫ್‌ಬಿ ತಲಾ ಒಂದು ಸ್ಥಾನವನ್ನು ಗೆಲ್ಲುವ ಮೂಲಕ ದೆಹಲಿ ಮಹಾನಗರ ಪಾಲಿಕೆಯಲ್ಲಿ ತಮ್ಮ ಖಾತೆ ತೆರೆದಿವೆ.
ಬಿಜೆಪಿಯ ಮನೀಷಾ ದೇವಿ ದ್ವಾರಕಾ ವಾರ್ಡ್‌ನಿಂದ, ಸರಳಾ ಚೌಧರಿ ವಿನೋದ್ ನಗರದಿಂದ, ವೀಣಾ ಅಸಿಜಾ ಅಶೋಕ್ ವಿಹಾರ್‌ನಿಂದ, ಅಂಜುಮ್ ಮಂಡಲ್ ಗ್ರೇಟರ್ ಕೈಲಾಶ್‌ನಿಂದ, ರೇಖಾ ರಾಣಿ ಧಿಚಾವ್ ಕಲಾನ್‌ನಿಂದ, ಅನಿತಾ ಜೈನ್ ಶಾಲಿಮಾರ್ ಬಾಗ್‌ನಿಂದ ಮತ್ತು ಸುಮನ್ ಕುಮಾರ್ ಗುಪ್ತಾ ಅವರು ಚಾಂದನಿ ಚೌಕ್‌ನಿಂದ ಗೆಲುವು ಸಾಧಿಸಿದ್ದಾರೆ.
ಎಎಪಿಯ ರಂಜನಾ ಅರೋರಾ, ಅನಿಲ್ ಮತ್ತು ರಾಮ್ ಸ್ವರೂಪ್ ಕನೋಜಿಯಾ ಗೆಲುವು ಸಾಧಿಸಿದ್ದು. ಕಾಂಗ್ರೆಸ್ ಅಭ್ಯರ್ಥಿ ಸುರೇಶ್ ಚೌಧರಿ ಸಂಗಮ್ ವಿಹಾರ್‌ನಿಂದ ಗೆದ್ದರೆ, ಎಐಎಫ್‌ಬಿಯ ಮೊಹಮ್ಮದ್ ಇಮ್ರಾನ್ ಚಾಂದನಿ ಮಹಲ್ ವಾರ್ಡ್‌ನಿಂದ ಜಯ ಗಳಿಸಿದ್ದಾರೆ.
ನವೆಂಬರ್ 30 ರಂದು ದೆಹಲಿ ಮಹಾನಗರ ಪಾಲಿಕೆಯ 12 ವಾರ್ಡ್‌ಗಳಿಗೆ ಉಪ ಚುನಾವಣೆ ನಡೆದಿತ್ತು.

