ಮಶ್ರೂಮ್ ಅಂದ್ರೆ ಆರೋಗ್ಯಕ್ಕೂ ರುಚಿಗೂ ಒಳ್ಳೆಯದು. ಅದರಲ್ಲಿ ಇರುವ ಪ್ರೋಟೀನ್, ಫೈಬರ್, ವಿಟಮಿನ್‌ಗಳು ದೇಹಕ್ಕೆ ಶಕ್ತಿಯನ್ನೂ ಪೋಷಕಾಂಶಗಳನ್ನೂ ನೀಡುತ್ತವೆ. ಇವತ್ತು ಒಂದಿಷ್ಟು ವಿಭಿನ್ನ ರುಚಿ ಕೊಡುವ “ಮಶ್ರೂಮ್ ಪಲಾವ್” ಸೂಪರ್ ಆಯ್ಕೆ.
ಅಗತ್ಯವಿರುವ ಪದಾರ್ಥಗಳು:
ಅಕ್ಕಿ – 1 ಕಪ್
ಮಶ್ರೂಮ್ – 1 ಕಪ್ (ಸಣ್ಣ ಸ್ಲೈಸ್ ಮಾಡಿದ್ದು)
ಈರುಳ್ಳಿ – 1 (ಸಣ್ಣ ಸ್ಲೈಸ್ ಮಾಡಿದ್ದು)
ಟೊಮೇಟೊ – 1 (ಚೂರಾಗಿ ಕತ್ತರಿಸಿದ್ದು)
ಹಸಿಮೆಣಸಿನಕಾಯಿ – 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
ಧನಿಯಾ ಪುಡಿ – 1 ಟೀ ಸ್ಪೂನ್
ಗರಂ ಮಸಾಲಾ – ½ ಟೀ ಸ್ಪೂನ್
ಪುದೀನಾ ಎಲೆ ಹಾಗೂ ಕೊತ್ತಂಬರಿ ಸೊಪ್ಪು – ಸ್ವಲ್ಪ
ಎಣ್ಣೆ ಅಥವಾ ತುಪ್ಪ – 2 ಟೇಬಲ್ ಸ್ಪೂನ್
ಉಪ್ಪು – ರುಚಿಗೆ ತಕ್ಕಂತೆ
ನೀರು – 2 ಕಪ್
ತಯಾರಿಸುವ ವಿಧಾನ:
ಮೊದಲು ಅಕ್ಕಿಯನ್ನು ತೊಳೆದು 15 ನಿಮಿಷ ನೆನೆಸಿಡಿ.
ಕಾದ ಬಾಣಲೆಯಲ್ಲಿ ಎಣ್ಣೆ ಅಥವಾ ತುಪ್ಪ ಹಾಕಿ, ಈರುಳ್ಳಿ, ಹಸಿಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಿರಿ. ಬಳಿಕ ಟೊಮೇಟೊ, ಮಸಾಲಾ ಪುಡಿಗಳು, ಉಪ್ಪು ಹಾಕಿ ಚೆನ್ನಾಗಿ ಬೆರೆಸಿ. ಈಗ ಮಶ್ರೂಮ್ ಸ್ಲೈಸ್‌ಗಳನ್ನು ಸೇರಿಸಿ, ನೀರು ಬಿಡುವವರೆಗೆ ಹುರಿಯಿರಿ.
ನಂತರ ಅಕ್ಕಿ ಹಾಗೂ ನೀರು ಸೇರಿಸಿ, ಮುಚ್ಚಿ ಮಧ್ಯಮ ಉರಿಯಲ್ಲಿ ಬೇಯಿಸಿ. ಪಲಾವ್ ಸಿದ್ಧವಾದ ಮೇಲೆ ಕೊತ್ತಂಬರಿ ಮತ್ತು ಪುದೀನಾ ಸೊಪ್ಪು ಹಾಕಿ ಗಾರ್ನಿಷ್ ಮಾಡಿ.

