January21, 2026
Wednesday, January 21, 2026
spot_img

ಉತ್ತರ ಭಾರತದಾದ್ಯಂತ ದಟ್ಟ ಮಂಜು: ದೆಹಲಿ ವಿಮಾನ ನಿಲ್ದಾಣದಲ್ಲಿ ಕೇವಲ 100 ಮೀ ಮಾತ್ರ ಗೋಚರತೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಭಾರತದಾದ್ಯಂತ ದಟ್ಟ ಮಂಜು ಆವರಿಸಿದ್ದು, ಶೀತ ಗಾಳಿ ಅಬ್ಬರ ಜೋರಾಗಿದೆ. ಹೀಗಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ 100 ಮೀ ಮಾತ್ರ ಗೋಚರತೆಯಿದ್ದು, 270 ವಿಮಾನಗಳು ವಿಳಂಬವಾಗಿದ್ದು, 10 ವಿಮಾನಗಳು ರದ್ದಾಗಿವೆ.

ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಮಂಗಳವಾರ (ಡಿ.23) ಬೆಳಿಗ್ಗೆ ಪ್ರಯಾಣಿಕರಿಗೆ ಸಲಹೆಯನ್ನು ನೀಡಿದ್ದು, ಈ ಪ್ರದೇಶದಲ್ಲಿ ದಟ್ಟವಾದ ಮಂಜು ಮತ್ತು ಕಡಿಮೆ ಗೋಚರತೆಯಿರುವ ಹಿನ್ನೆಲೆ ವಿಮಾನಗಳು ವಿಳಂಬವಾಗಲಿದ್ದು, ಕೆಲವು ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದೆ.

ಮಂಜಿನಿಂದಾಗಿ ವಿಮಾನ ಮಾತ್ರವಲ್ಲದೇ ರಸ್ತೆ, ರೈಲು ಸಂಚಾರದಲ್ಲಿ ಅಡಚಡೆ ಉಂಟಾಗಿದೆ.

ದಟ್ಟವಾದ ಮಂಜಿನಿಂದಾಗಿ ಪಾಟ್ನಾ, ಅಮೃತಸರ, ಚಂಡೀಗಢ, ಜಮ್ಮು, ಲಕ್ನೋ, ವಾರಣಾಸಿ, ಪಾಟ್ನಾ, ರಾಂಚಿ ಮತ್ತು ಹಿಂಡನ್‌ನಲ್ಲಿ ವಿಮಾನ ವಿಳಂಬವಾಗಿದೆ. ಗೋಚರತೆ ಕಡಿಮೆಯಾಗುವುದರಿಂದ ಆಗಮನ ಮತ್ತು ನಿರ್ಗಮನದ ಮೇಲೆ ಪರಿಣಾಮ ಬೀರಬಹುದು ಎಂದು ಏರ್ ಇಂಡಿಯಾ, ಇಂಡಿಗೋ ಮತ್ತು ಸ್ಪೈಸ್‌ಜೆಟ್ ತಿಳಿಸಿವೆ.

Must Read