Wednesday, October 22, 2025

ಗ್ಯಾರಂಟಿ ಯೋಜನೆ ಕುರಿತು ದೇಶಪಾಂಡೆ ಹೇಳಿಕೆ: ನಿಖಿಲ್ ಕುಮಾರಸ್ವಾಮಿ ರಿಯಾಕ್ಷನ್ ಏನು?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಹಿರಿಯ ಕಾಂಗ್ರೆಸ್ ಶಾಸಕ ಆರ್ ವಿ ದೇಶಪಾಂಡೆ ಗ್ಯಾರಂಟಿ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರ ಬಗ್ಗೆ ಜೆಡಿಎಸ್‌ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ದೇಶಪಾಂಡೆಸರ್ಕಾರದ ವಾಸ್ತವ ಅಂಶವನ್ನು ತೆರೆದಿಟ್ಟಿದ್ದಾರೆ. ದೊಡ್ಡ ಗಾತ್ರ ಬಜೆಟ್ ಕೊಟ್ಟಿದ್ದೇವೆ ಅಂತ ಹೇಳ್ತಾರೆ. ಅದರಲ್ಲಿ ಗ್ಯಾರಂಟಿಗಳಿಗೆ ಇಟ್ಟಿದ್ದಾರೆ. ಇಲ್ಲಿವರೆಗೂ ಪ್ರತಿ ತಿಂಗಳು ಸಮರ್ಪಕವಾಗಿ ಗ್ಯಾರಂಟಿಗಳನ್ನ ಕೊಟ್ಟಿಲ್ಲ. ಅಭಿವೃದ್ಧಿ ಸಂಪೂರ್ಣವಾಗಿ ಕುಂಠಿತಗೊಂಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಮೇಲೆ ಮಾಟ ಮಾಡಿಸಲಾಗಿದೆ ಎಂಬ ಬಿಜೆಪಿ ಶಾಸಕ ಮುನಿರತ್ನ ಹೇಳಿಕೆ ವಿಚಾರವಾಗಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ನಾನು ಇದ್ಯಾವುದರಲ್ಲೂ ನಂಬಿಕೆ ಇಟ್ಕೊಂಡಿಲ್ಲ. ನಮಗೆ ಗೊತ್ತಿರೋದು ಒಂದೇ ಕಾಯಕವೇ ಕೈಲಾಸ ಅಂತ. ನಾವು ಶಿವನ ಆರಾಧಕರು ಭಕ್ತಿ ಪೂರಕವಾಗಿ ಪೂಜೆ ಮಾಡ್ತೀವಿ. ಅವರು ಹೇಳಿರುವುದರ ಬಗ್ಗೆ ನನಗೆ ಗೊತ್ತಿಲ್ಲ. ಕರ್ಮ ಅನ್ನೋದು ಎಲ್ಲರಿಗೂ ಗೊತ್ತು. ನಾವು ಏನ್ ಮಾಡ್ತೀವೋ ಅದು ನಮಗೆ ವಾಪಸ್ ಕೊಡುತ್ತೆ. ನನಗೆ ಈ ಬ್ಲ್ಯಾಕ್ ಮ್ಯಾಜಿಕ್ ಬಗ್ಗೆ ಎಲ್ಲಾ ಗೊತ್ತಿಲ್ಲ. ಅದನ್ನ ಗಂಭೀರವಾಗಿ ತೆಗೆದುಕೊಳ್ಳೋದು ಬೇಡ ಎಂದರು.

error: Content is protected !!