Thursday, September 4, 2025

ಡಿಸೈನ್ಅಪ್ ನಿಂದ ‘ಫ್ಯೂಚರ್ಸ್ಚಾಲೆಂಜ್ 2025’ ಸ್ಪರ್ಧೆ: ಆಸಕ್ತರಿಗೆ ಫ್ರೀ ಎಂಟ್ರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಗ್ನೇಯ ಏಷ್ಯಾಭಾಗದ ಅತಿದೊಡ್ಡ ಸಮುದಾಯ ನೇತೃತ್ವದ ವಿನ್ಯಾಸ-ತಂತ್ರಜ್ಞಾನ ಸಂಸ್ಥೆ ಡಿಸೈನ್ಅಪ್, ”ಫ್ಯೂಚರ್ಸ್ಚಾಲೆಂಜ್ 2025” ಎಂಬ ಸ್ಪರ್ಧೆಯನ್ನು ಪ್ರಾರಂಭಿಸಿದೆ.

ಇದೊಂದು ಅಂತರಾಷ್ಟ್ರೀಯಮಟ್ಟದ ಡಿಸೈನ್ ಸ್ಪರ್ಧೆಯಾಗಿದ್ದು ವಿದ್ಯಾರ್ಥಿಗಳು, ಪದವೀಧರರು, ಫ್ರೀಲಾನ್ಸ್ ಗಳು ‘2050ರಲ್ಲಿ ಕರೆನ್ಸಿ ಹೇಗೆ ಕಾಣಲಿದೆ’ಎಂಬುದನ್ನು ಕಲ್ಪಿಸಿಕೊಂಡು ವಿನ್ಯಾಸಗೊಳಿಸಬೇಕಿದೆ.

ಈ ಸ್ಫರ್ಧೆ ಭಾರತ, ಆಗ್ನೇಯ ಏಷ್ಯಾ ಮತ್ತು ಯೂರೋಪ್ ನಿಂದ ಭಾಗವಿಸುವವರಿಗೆ ಮುಕ್ತವಾಗಿದ್ದು, ಸೆಪ್ಟೆಂಬರ್ 7, 2025ರಂದು ನೋಂದಣಿ ಮುಕ್ತಾಯಗೊಳ್ಳಲಿದೆ. 10 ಸ್ಪರ್ಧಿಗಳು ಪ್ರೆಸ್ಟೀಜಿಯಸ್ಡಿಸೈನ್ ಅಪ್ ಫ್ಯೂಚರ್ಸ್ಶಾರ್ಟ್ಲಿಸ್ಟ್ ಮತ್ತು 3 ಫೈನಲಿಸ್ಟ್ಗಳಿಗೆ ನವೆಂಬರ್ ನಲ್ಲಿ ನಡೆಯುವ ಡಿಸೈನ್ಅಪ್ 2025 ವೇದಿಕೆಯ ಮೇಲೆ ಡಿಸೈನ್ ಪ್ರಸ್ತುತಪಡಿಸಲು ಅವಕಾಶ ನೀಡಲಾಗುವುದು.

ಜಗತ್ತು ವೇಗವಾಗಿ ಬದಲಾಗುತ್ತಿದೆ ಮತ್ತು 25 ವರ್ಷಗಳ ನಂತರ ವಿಭಿನ್ನವಾಗಿ ಕಾಣಿಸಬಹುದು. ದೇಶಗಳ ಪುನರ್ರಚನೆ ಆಗಬಹುದು. ಆರ್ಥಿಕತೆಗಳು ವಿಲೀನಗೊಳ್ಳಬಹುದು, ವಿಭಜನೆಯಾಗ ಬಹುದು ಅಥವಾ ಕೊನೆಗೊಳ್ಳಬಹುದು. ಹವಾಮಾನ ಬದಲಾವಣೆ, AI( ಕೃತಕ ಬುದ್ದಿಮತ್ತೆ), ಬಾಹ್ಯಾಕಾಶ ತಂತ್ರಜ್ಞಾನ, ಭೌಗೋಳಿಕ ರಾಜಕೀಯ, ಇವೆಲ್ಲವೂ ನಾವು ಹೇಗೆ ಬದುಕುತ್ತೇವೆ, ಗಳಿಸುತ್ತೇವೆ, ಖರ್ಚು ಮಾಡುತ್ತೇವೆ ಮತ್ತು ಸಂಪರ್ಕ ಸಾಧಿಸುತ್ತೇವೆ ಎಂಬುದನ್ನು ಮರುರೂಪಿಸಬಹುದು.

ಈ ಸ್ಪರ್ಧೆಯು ಮುಖ್ಯವಾಗಿ, ಮಾರುಕಟ್ಟೆಯಲ್ಲಿ AI ಯಾಂತ್ರೀಕರಣದಿಂದ ಹೆಚ್ಚುತ್ತಿರುವ ವಿನ್ಯಾಸ ಪದವೀಧರರ ಅತಿಯಾದ ಪೂರೈಕೆ ಮತ್ತು ಕುಗ್ಗುತ್ತಿರುವ ಆರಂಭಿಕಹಂತದ ಅವಕಾಶಗಳ ನಡುವಿನ ಅಂತರವನ್ನು ಪರಿಹರಿಸುತ್ತದೆ. 700ಕ್ಕೂ ಹೆಚ್ಚು ಭಾಗವಹಿಸುವವರು ಈಗಾಗಲೇ ತಮ್ಮ ವಿನ್ಯಾಸವನ್ನು ಸಲ್ಲಿಸಲು ಸಿದ್ಧತೆ ನಡೆಸಿದ್ದು, ಸ್ಪರ್ಧೆಯು ಯುವ ವಿನ್ಯಾಸಕರಿಗೆ ಅರ್ಥಪೂರ್ಣ ಮತ್ತು ವೃತ್ತಿ ಮಾರ್ಗಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.

ವಿಜೇತರಿಗೆ ಏನು ಸಿಗುತ್ತದೆ?
•ಸಮ್ಮೇಳನದಲ್ಲಿ ಆದ್ಯತೆ- ಡಿಸೈನ್ಅಪ್ 2025 ಮುಖ್ಯವೇದಿಕೆಯಲ್ಲಿ ನೇರಪ್ರಸ್ತುತಿಗಳು (ನವೆಂಬರ್ 3-5, ಬೆಂಗಳೂರು)
•ಸಕಲ ವ್ಯವಸ್ಥೆ ಜತೆ ಪ್ರವೇಶ – ಉಚಿತ ಪಾಶ್ ಗಳು, ದೇಶೀಯ ಪ್ರಯಾಣ ಮತ್ತು ₹50,000 ವರೆಗಿನ ಮೌಲ್ಯದ ವಾಸ್ತವ್ಯ
•ಮನ್ನಣೆ– ಅಂತಿಮಪಟ್ಟಿಯಲ್ಲಿ ಸ್ಥಾನ/ಲಾಂಗ್ಲಿಸ್ಟ್ ಆಗಿ ಹೈಲೈಟ್ ಮಾಡಲು 10 ನಮೂದು
•ವಿಶಿಷ್ಟಟ್ರೋಫಿ – ಎಕ್ಸ್ಕ್ಲೂಸಿವ್ (ಸ್ಟುಡಿಯೋ ABD) ನಿಂದ ರಚಿಸಲಾಗಿದೆ
•ವೃತ್ತಿ ಅವಕಾಶಗಳು – ಜಾರ್, ಏಕಾ. ಕೇರ್, ಅನ್ಲಿಮಿಟ್ಸ್.ಎಐ, ಐಡಿಯಾಸ್ಪೈಸ್ ಮತ್ತು ಪಾಲುದಾರ ಕಂಪನಿಗಳೊಂದಿಗೆ 1000+ ವೃತ್ತಿಪರರಿಗೆ ಪ್ರವೇಶ ಮತ್ತು ಉದ್ಯೋಗಾವಕಾಶಗಳು
ನೋಂದಣಿ ವಿವರಗಳು: ಭಾರತ, ಆಗ್ನೇಯ ಏಷ್ಯಾ ಮತ್ತು ಯುರೋಪ್ನ ವಿದ್ಯಾರ್ಥಿಗಳು, ಇತ್ತೀಚಿನ ಪದವೀಧರರು ಮತ್ತು ಫ್ರೀಲ್ಯಾನ್ಸರ್ಗಳು ಸೆಪ್ಟೆಂಬರ್ 7ರ ಮೊದಲು 25.designup.io/challengನಲ್ಲಿ ನೋಂದಾಯಿಸಿಕೊಳ್ಳಬಹುದು. ಸ್ಪರ್ಧೆಯಲ್ಲಿ ಉಚಿತವಾಗಿ ಭಾಗವಹಿಸಬಹುದು.

ಇದನ್ನೂ ಓದಿ