Sunday, January 11, 2026

ಧರ್ಮಸ್ಥಳ ಪ್ರಕರಣ: ಸುಜಾತ ಭಟ್ ಹೊರತು ಪಡಿಸಿ ಮತ್ತೆ ನಾಲ್ವರು ಎಸ್‌ಐಟಿ ವಿಚಾರಣೆಗೆ ಗೈರು, ಏಳು ದಿನ ಕಾಲಾವಕಾಶ ಕೋರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಧರ್ಮಸ್ಥಳ ಪ್ರಕರಣ ಸಂಬಂಧ ಇಂದು ವಿಚಾರಣೆಗೆ ಹಾಜರಾಗುವಂತೆ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್. ಟಿ. ಹಾಗೂ ವಿಠಲ್ ಗೌಡ ಅವರಿಗೆ ಎಸ್‌ಐಟಿ ನೋಟೀಸ್ ನೀಡಿದ್ದು, ಆದರೆ ಇವರು ಹಾಜರಾಗದೆ ವಕೀಲರ ಮೂಲಕ ಹಾಜರಾಗಲು ಅಧಿಕಾರಿಗಳಲ್ಲಿ ಒಂದು ವಾರದ ಅವಕಾಶ ಕೇಳಿದ್ದಾರೆ.


ಈ ನಾಲ್ಕು ಮಂದಿಯ ಪರವಾಗಿ ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಬಂದ ನ್ಯಾಯವಾದಿ ಅಂಬಿಕಾ ಪ್ರಭು ಅವರು, ಈ ನಾಲ್ಕು ಮಂದಿಗೆ ೭ ದಿನಗಳ ಕಾಲ ವಿಚಾರಣೆಗೆ ವಿನಾಯಿತಿ ನೀಡಬೇಕಾಗಿ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಎಸ್‌ಐಟಿ ನಡೆ ಏನಿರುತ್ತದೆ ಎಂಬುದು ಮಾತ್ರ ಕಾದು ನೋಡಬೇಕಾಗಿದೆ.
ಈ ನಡುವೆ ಸುಜಾತ ಭಟ್ ವಿಚಾರಣೆ ಹಾಜರಾಗಿದ್ದು, ತಮ್ಮ ಹೇಳಿಕೆ ದಾಖಲಿಸಿದ್ದಾರೆ.

error: Content is protected !!